ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಕನಕದಾಸರ ತತ್ವ ಆದರ್ಶ ಗುಣಗಳು
ಪ್ರಮುಖ ಪಾತ್ರ ವಹಿಸುತ್ತದೆ. ರೋಟರಿ ಎಜುಕೇಶನಲ್ ಚಾರ್ರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ ರಾಮಚಂದ್ರ.
ಶಿವಮೊಗ್ಗ;
ಸಂತ ಸಮಾಜವಾದಿ ಶ್ರೇಷ್ಠ ಚಿಂತಕ. ದಾರ್ಶಣಿಕರಾದ ಕನಕದಾಸರ ಕೀರ್ತನೆಗಳು ತತ್ವ ಆದರ್ಶ ಗುಣಗಳು ಇಂದಿಗೂ ಸಹ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಶಿವಮೊಗ್ಗ ರೋಟರಿ ಪೂರ್ವ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ.ಎಸ್ಎಸ್ಸಿ ರಾಮಚಂದ್ರ.ಅಭಿಮತ ವ್ಯಕ್ತಪಡಿಸಿದರು.
ಅವರು ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ 515 ನೇ ಕನಕದಾಸ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಟ್ರಸ್ಟಿನ ಉಪಾಧ್ಯಕ್ಷರಾದ ಡಾ. ಪರಮೇಶ್ವರ್ ಶಿಗ್ಗಾoವ್ ಅವರು ಮಾತನಾಡುತ್ತ ನಾಡು ಕಂಡ ಅತ್ಯಂತ ಶ್ರೇಷ್ಠ ಸಂತ ಕನಕದಾಸರು ಎಲ್ಲರಿಗೂ ಸಮಾನತೆ, ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಬಗ್ಗೆ ಸಂದೇಶವನ್ನು ನೀಡಿದ ಕನಕದಾಸರು ಎಲ್ಲಾ ವರ್ಗದ ಜನರಿಗೆ ಮೆಚ್ಚುಗೆಗೆ ಪಾತ್ರನಾಗಿದ್ದರು ಎಂದು ನುಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ .ವಿಜಯಕುಮಾರ್ ಮಾತನಾಡುತ್ತಾ ಕನಕದಾಸರು ಶತಮಾನಗಳ ಹಿಂದೆಯೇ ಸಮಾಜದಲ್ಲಿ ಬೇರೂರಿದ ಅಸ್ಪೃಶ್ಯತೆ, ಜಾತಿ ವಾದವನ್ನು ನಿರ್ಮೂಲನೆ ಮಾಡಲು ಯಾವುದೇ ಪಲಾಪೇಕ್ಷೆ ಇಲ್ಲದೆ ಸಂದೇಶವನ್ನು ಸಾರಿದ ಮಹಾನ್ ಶ್ರೇಷ್ಠ ದಾರ್ಶನಿಕರಾಗಿದ್ದರು.
ಈ ನಿಟ್ಟಿನಲ್ಲಿ ನಮ್ಮ ಯುವ ಪೀಳಿಗೆಗೆ ಕನಕದಾಸರ ಸಾಧನೆ ಚಿಂತನೆ ತಿಳಿಸುವ ಅಗತ್ಯತೆ ಇದೆ ಅವರ ಕುಲ ಕುಲ ಕುಲ ವೆಂದು ಹೊಡೆದಾಡದಿರಿ ಎಂಬ ಗೀತೆ ಎಂದಿಗೂ ಸಹ ಅಜರಾಮರವಾಗಿ ಉಳಿದಿದೆ.
ಇದೇ ಸಂದರ್ಭದಲ್ಲಿ ಸಹ ಶಿಕ್ಷಕಿ ಕಾವ್ಯ ಅವರು ಮಾತನಾಡಿ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದ್ದು ನಮ್ಮೊಳಗಿನ ನಾನು ಎಂಬ ಅಹಂ ಹೋದರೆ ಎಂಥಹ ಸಾಧನೆಯು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಆರ್ ಸೂರ್ಯನಾರಾಯಣ್. ಶಿಕ್ಷಕರಾದ ಸುಷ್ಮಾ ಶ್ವೇತಾ ಹರ್ಷಿತಾ. ರೂಪ ರಾವ್.ಸುಜಾತಾ. ಸುಪ್ರೀತಾ ಮೋಹನ್. ವಿದ್ಯಾ. ರುಕ್ಕಯ್ಯ. ಪ್ರತಿಮಾ. ರೇಖಾˌ ಪ್ರದೀಪ್ˌ ಅನೀಶ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು