ಭದ್ರಾವತಿ : ಉಕ್ಕಿನ ನಗರಿ ಭದ್ರಾವತಿಯಲ್ಲಿ ಮೀಟರ್ ಬಡ್ಡಿ ಜೋರಾಗಿದ್ದು, ಬಡ್ಡಿ ಹಣ ಕೊಡಲಾಗದೇ ಜೀವವೊಂದು ಬಲಿಯಾಗಿದೆ. ಈ ಜೀವವನ್ನು ನಂಬಿದ ಕುಟುಂಬ ಈಗ ಅನಾಥವಾಗಿದೆ.
ನ್ಯೂಟೌನ್ ಹಾಸ್ಪಿಟಲ್ ಬಳಿ ಇರುವ ಬಸವರಾಜ (50)ಮೃತ ದುರ್ದೈವಿ. ನಗರದಲ್ಲಿ ಯು.ಪಿ.ಎಸ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು.
ಹೀಗಿರುವಾಗ ಕೊರೊನಾ ಬಂದು ವ್ಯಾಪಾರದಿಂದ ನಷ್ಟ ಹೊಂದಿದ್ದರು. ಆಗ ಕಿತ್ತೂರು ಚೆನ್ನಮ್ಮ ಲೇಔಟ್, ಲಂಬು ನಂಜಪ್ಪನವರ ಮಗ ಎಂಪಿಎಂ ದಿನೇಶ ಎಂಬುವರ ಬಳಿ 6,50,000/-ರೂಗಳನ್ನು ಸಾಲವಾಗಿ ಪಡೆದಿದ್ದರು. ಈ ಹಣಕ್ಕೆ ಕಳೆದ ಒಂದು ವರ್ಷದಿಂದ 5 ಪರ್ಸೆಂಟ್ ಬಡ್ಡಿಯನ್ನು ಎಂಪಿಎಂ ದಿನೇಶ್ ಎಂಬಾತನಿಗೆ ಕೊಡುತ್ತಿದ್ದರು. ಇದಾದ ನಂತರ ಹೆಚ್ಚಿನ ಬಡ್ಡಿ ಕೇಳಿದ ದಿನೇಶ್ ಬಸವರಾಜರಿಗೆ ಪೋನ್ ಮಾಡಿ ಹಣ, ಬಡ್ಡಿ ಸೇರಿ 47 ಲಕ್ಷದ 50,000 ರೂ.ಗಳಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಬಸವರಾಜ್ ತೀವ್ರ ಡಿಪ್ರೇಶನ್ ಗೆ ಹೋಗಿದ್ದಾರೆ.
ವಿಡಿಯೋ ಮಾಡಿ ನೇಣಿಗೆ ಶರಣು
ಮೃತ ಬಸವರಾಜ್ ವಿಡಿಯೋವೊಂದನ್ನು ಮಾಡಿ, ಸಾಲ ಕೊಟ್ಟ ದಿನೇಶ್ ಗೆ ನಾನು ಸಾಕಷ್ಟು ಬಡ್ಡಿ ಕಟ್ಟಿದ್ದೀನಿ. ಅವನು ಕೊಟ್ಟಿರುವ ಹಣಕ್ಕಿಂತ ನಾನು ಮೂರು ಪಟ್ಟು ಹೆಚ್ಚು ಹಣವನ್ನು ಕೊಟ್ಟಿರುತ್ತೇನೆ. , ಅವನು ನನಗೆ ಮತ್ತು ನನ್ನ ಕುಟುಂಬಕ್ಕೆ ತೊಂದರೆ ಕೊಡಬಹುದೆಂದು ಮತ್ತು ಈ ಹಣವನ್ನು ನನ್ನಿಂದ ಹೊಂದಿಸಲಾಗದೇ ನನಗೆ ಭಯವಾಗಿ, ಮನೆಯವರಿಗೆ ಮಂತ್ರಾಲಯಕ್ಕೆ ಹೋಗುವುದಾಗಿ ಹೇಳಿ, ಧರ್ಮಸ್ಥಳಕ್ಕೆ ಹೋಗಿರುತ್ತೇನೆ. ಸಾಲಕೊಟ್ಟ ದಿನೇಶ್ ಅಣ್ಣನೊಬ್ಬ ಪೊಲೀಸ್ ಇಲಾಖೆಯಲ್ಲಿದ್ದು, ನನಗೆ ಯಾವಾಗಲೂ ಧಮಕಿ ಹಾಕುತ್ತಿದ್ದ. ನಾನು ಹೇಳಿದ ಹಾಗೆ ಮಾಡದೇ ಇದ್ದರೆ ಮನೆಯ ಬಳಿ ಬಂದು ಗಲಾಟೆ ಮಾಡುತ್ತೇನೆ ಮತ್ತು ನಿಮ್ಮ ಮನೆಗೆ ಪೊಲೀಸ್ ಕಳಿಸುತ್ತೇನೆಂದು ಹೆದರಿಸುತ್ತಿದ್ದ.
ದಿನೇಶನಿಗೆ ನಾನು ಸಹಿ ಮಾಡಿದ 2 ಖಾಲಿ ಚೆಕ್ ಮತ್ತು ಅಂಡಿಮೆಂಟ್ ಬಾಂಡ್ ಗಳನ್ನು ಕೊಟ್ಟಿದ್ದು, ಅವನ ಕಾಟವನ್ನು ತಡೆಯಲು ಆಗದೇ ನನ್ನ ಜೀವನವನ್ನು ಕೊನೆ ಮಾಡಬೇಕೆಂದು ಮುಗಿಸುತ್ತಿದ್ದೇನೆ. ನನ್ನ ಸಾವಿಗೆ ನೇರ ಹೊಣೆ, ದಿನೇಶ್ ಎಂಪಿಎಂ ಆಗಿರುತ್ತಾನೆಂದು ಬಸವರಾಜ್ ವಿಡಿಯೋ ಮಾಡಿ ಬಾ ಮೈದಾ ವಿಜಯ್ ಕುಮಾರ್ ಗೆ ಕಳಿಸಿದ್ದಾರೆ. ಇದಾದ ನಂತರ ವಿಜಯ್ ಕುಮಾರ್ ಭೀತಿಯಿಂದ ಅವರ ಭಾವನಿಗೆ ಹಲವಾರು ಬಾರಿ ಫೋನ್ ಮಾಡಿದರೂ ಸಹ ಫೋನ್ ತೆಗೆಯಲಿಲ್ಲ.ನಂತರ ವಿನಯ್ ಕುಮಾರ್ ತನ್ನ ಅಕ್ಕ ಹೇಮಾವತಿಯನ್ನು ವಿಚಾರ ಮಾಡಿದ್ದಾರೆ.ಆಗ ಬಸವರಾಜ್ ಪತ್ನಿ ಹೇಮಾವತಿ ತನ್ನ ತಮ್ಮ ವಿಜಯ್ ಕುಮಾರ್ ನಿಗೆ ನನ್ನ ಗಂಡ ಧರ್ಮಸ್ಥಳಕ್ಕೆ ಹೋಗಿ ಹಾಸನಕ್ಕೆ ಹೋಗಿ, ಉಳಿದುಕೊಂಡು, ಬೆಳಗ್ಗೆ ಊರಿಗೆ ಬರುತ್ತೇನೆ.ಅಲ್ಲದೇ ಸಾಲ ಕೊಟ್ಟ ದಿನೇಶ ಎಂಪಿಎಂ ಎಂಬಾತ ನೀನು ಬದುಕುವುದಕ್ಕಿಂತ ಎಲ್ಲಿಯಾದರೂ ಹೋಗಿ ಸಾಯಿ ಎಂದು ಟಾರ್ಚರ್ ಕೊಡುತಿದ್ದಾನೆ ಎಂದು ಬೇಸರದಿಂದ ಮಾತನಾಡುತ್ತಿದ್ದರು.ಯಾಕೆ ಎಂದು ಕೇಳಿದಾಗ ಏನೂ ಹೇಳದೇ ನಾಳೆ ಊರಿಗೆ ಬರುತ್ತೇನೆಂದು ಹೇಳಿ ಫೋನ್ ಮಾಡಿದ್ದರು. ನಾನು ಪುನಃ ಫೋನ್ ಮಾಡಿದರೆ ಪೋನ್ ರಿಸೀವ್ ಮಾಡಲಿಲ್ಲ, ನನಗೂ ಯಾಕೋ ಭಯವಾಗಿದೆ ಎಂದು ಪತ್ನಿ ಹೇಮಾವತಿ ತನ್ನ ತಮ್ಮನಿಗೆ ತಿಳಿಸಿದ್ದಾರೆ.
ಹಾಸನದ ಲಾಡ್ಜ್ ನಲ್ಲಿ ನೇಣಿಗೆ ಶರಣು
ಭಾವ ಬಸವರಾಜ್ ಹಾಸನದಲ್ಲಿ ಉಳಿದುಕೊಂಡಿರಬಹುದೆಂದು ಅನುಮಾನದಿಂದ ಹೇಮಾವತಿ ತಮ್ಮ ಹಾಗೂ ಅವರ ಅಣ್ಣ ನಾಗರಾಜು, ಸಂಬಂಧಿ ಪುರುಷೋತ್ತಮ ಹಾಸನಕ್ಕೆ ಬಂದು ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಲಾಡ್ಜ್ ಗೆ ಹೋಗಿದ್ದಾರೆ. ಅಲ್ಲಿ ಮೃತ ಬಸವರಾಜ್ ಫೋಟೋ ತೋರಿಸಿ, ಕೇಳಲಾಗಿದೆ. ಲಾಡ್ಜ್ ನವರು ಇವರ 101 ನೇ ರೂಮಿನಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. ಬಳಿಕ
ಆ ರೂಮಿನ ಬಾಗಿಲನ್ನು ತಟ್ಟಿದಾಗ ಬಸವರಾಜ್ ಬಾಗಿಲು ತೆರೆಯಲಿಲ್ಲ. ಬಳಿಕ ಲಾಡ್ಜ್ ಕಡೆಯವರ ಬಳಿ ಇದ್ದ ಮತ್ತೊಂದು ಕೀನಿಂದ ಬಾಗಿಲು ತೆಗೆಸಿ ನೋಡಿದಾಗ ಬಸವರಾಜ್ ಫ್ಯಾನ್ ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದರು. ನನ್ನ ಭಾವ ಬಸವರಾಜ್ ರವರ ಸಾವಿಗೆ ದಿನೇಶ್ ಎಂಬುವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡಿದ್ದರಿಂದ ತಮ್ಮ ಭಾವ ಬಸವರಾಜುರವರು ಹಾಸನದ ಚಿರಂತ್ ಲಾಡ್ಜ್ ನಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಹಾಸನದ ನಗರ ಪೊಲೀಸ್ ಠಾಣೆಯಲ್ಲಿ ಮೃತ ಬಸವರಾಜ್ ಪತ್ನಿ ಹೇಮಾವತಿ ತಮ್ಮ ಹಾಸನದ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ದಿನೇಶ್ ನಾಪತ್ತೆ
ಬಸವರಾಜ್ ಮೃತ ನಂತರ ಸಾಲ ಕೊಟ್ಟ ದಿನೇಶ್ ನಾಪತ್ತೆಯಾಗಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ. ಒಟ್ಟಾರೆ ಮೀಟರ್ ಬಡ್ಡಿ ದಂಧೆ ಭದ್ರಾವತಿಯಲ್ಲಿ ಜೋರಾಗಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.