ಹೊಸದುರ್ಗ : ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈಗಳು‌ ಪಾವನವಾಗುತ್ತದೆ ಎಂಬ ಸ್ಲೋಗನ್ ಹಲವರು ಕೇಳಿರಬಹುದು…ಆದರೆ ವಾಸ್ತವದಲ್ಲಿ ಕನ್ನಡಕ್ಕಾಗಿ‌ ಕೈ ಎತ್ತುವ ಜನರು ಕಡಿಮೆ…ಇಂತಹ ಸನ್ನಿವೇಶದಲ್ಲೂ ಕನ್ನಡಕ್ಕಾಗಿ ಉಸಿರು ಕೊಡುವರು ಹಲವರಿದ್ದು, ಅಂತಹ ವ್ಯಕ್ತಿಗಳಲ್ಲಿ ಸ್ಥಳೀಯ ಎಂಎಂ ನಾಯಕ್ ಒಬ್ಬರು.

ಮೊದಲಿನಿಂದಲೂ ಕನ್ನಡವೇ ಉಸಿರು, ಕನ್ನಡವೇ ಬದುಕು ಎಂಬ ಮನೋಭಾವನೆ ಇರೋದಕ್ಕೆ ಈಗ ಎಂಎಂ ನಾಯಕ್ ಗೆ ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ.

ಈಗಾಗಲೇ ರಾಜ್ಯಾಧ್ಯಕ್ಷ ಎಂ.ಎಸ್.ಸುನೀಲ್ ಕನ್ನಡ ಪರ ಹೋರಾಟದಲ್ಲಿ ಧುಮುಕಿದ್ದು, ಕನ್ನಡಕ್ಕೆ ಅನ್ಯಾಯವಾದ ವೇಳೆ, ಕನ್ನಡಿಗರಿಗೆ, ಕನ್ನಡ ನಟರಿಗೆ ಮೋಸವಾದ ವೇಳೆ ಮೊದಲು ಎಂ.ಎಸ್.ಸುನೀಲ್ ಬರುತ್ತಾರೆ..ಬೆಂಗಳೂರಿನಲ್ಲಿ ಏನಾದರೂ ಅಲ್ಪ-ಸ್ವಲ್ಪ ಕನ್ನಡ ಉಳಿದಿದೆ ಎಂದರೆ ಅದು ಇಂತಹ ಕನ್ನಡಿಗರ ಹೋರಾಟ ಕಾರಣ. ಅದರಲ್ಲೂ ನಾಡು, ನುಡಿ, ಭಾಷೆ ಅಂತ ಬಂದಾಗ..‌ಮುಲಾಜಿಗೆ ಒಳಗಾಗದೇ ರಸ್ತೆಗೆ ಇಳಿದು ಕನ್ನಡದ ತಾಕತ್ ಏನು ಅಂತ ತೋರಿಸುತ್ತಾರೆ. ಇದು ಕನ್ನಡಿಗರಿಗೆ ಇರುವ ಶಕ್ತಿ ಎಂಬುದು ರಾಜ್ಯಾಧ್ಯಕ್ಷ ಸುನೀಲ್ ಅಭಿಪ್ರಾಯ.

ಈ ಕಾರಣದಿಂದಲೇ ರಾಜ್ಯಾಧ್ಯಕ್ಷ ಸುನೀಲ್ ಎಂಎಂ ನಾಯಕ್ ರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಎರಿಯಾ ಅಮನತ ಬಂದಾಗ ಹೊಸದುರ್ಗ, ಜಿಲ್ಲೆ ಅಂತ ಬಂದಾಗ ಚಿತ್ರದುರ್ಗ, ರಾಜ್ಯ ಅಂತ ಬಂದಾಗ ಕರ್ನಾಟಕ, ರಾಷ್ಟ್ರ ಅಂತ ಬಂದಾಗ ಭಾರತ. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸುತ್ತೇವೆ ಎನ್ನುತ್ತಾರೆ ರಾಜ್ಯ ಉಪಾಧ್ಯಕ್ಷ ಎಂಎಂ ನಾಯಕ್

ನಾಡಿನ ರಕ್ಷಣೆ ಮುಖ್ಯ

ನಾಡಿನ ರಕ್ಷಣೆ ಮುಖ್ಯವಾಗಿದ್ದು, ಅನ್ಯಾಯಕ್ಕೆ ಒಳಗಾದ ಸಮುದಾಯಕ್ಕೆ ಬೆಂಬಲ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕೆಂಬ ತುಡಿತ ನನ್ನಲ್ಲಿದೆ. ನಮ್ಮ ರಾಜ್ಯಾಧ್ಯಕ್ಷ ಸೂಚನೆ ಮೇರೆಗೆ ಕನ್ನಡಕ್ಕಾಗಿ ಹೋರಾಟ ನಡೆಸುತ್ತೇನೆ ಹೊರತು, ಯಾರ ಪರ ಕೆಲಸ ಮಾಡೊಲದಿಲ್ಲ ಎನ್ನುತ್ತಾರೆ ಎಂಎಂನಾಯಕ್

ಶಾಸಕರ ಗೆಲುವಿಗೆ ನಿಂತ ಎಂಎಂ ನಾಯಕ್

ಪಕ್ಷನಿಷ್ಠೆ.,ಸಂಘಟನೆ, ವೈಯಕ್ತಿಕ ವರ್ಚಸ್ಸು ಇರುವ ಎಂಎಂ ನಾಯಕ್ ಗೆ ಹೆಮ್ಮೆಯ ನಾಯಕ ಶಾಸಕ ಗೋವಿಂದಪ್ಪ ಕಟ್ಟಾಭಿಮಾನಿ. ಅದಕ್ಕಾಗಿ BG ಗೋವಿಂದಪ್ಪನವರ ಗೆಲುವಿಗಾಗಿ ತನ್ನದೇ ಆದ ಯುವ ಪಡೆ ಕಟ್ಟಿಕೊಂಡು ತಾಲ್ಲೂಕಿನಾದ್ಯಂಥ ಶ್ರಮಿಸಿದ್ದಾರೆ.

ಜಿಲ್ಲಾ ಪಂಚಾಯತ್ ಆಕಾಂಕ್ಷಿ

ಎಲ್ಲ ವರ್ಗದ ಸಮಾಜದ ಉತ್ಸಾಹಿ ಯುವ ನಾಯಕ, ಸಕ್ರಿಯ ರಾಜಕಾರಣಿ , ಸಮಾಜ ಸೇವಕ ಎಲ್ ಎಂ ಎಂ ನಾಯಕ್ ಗೆ ಕನ್ನಡಕ್ಕಾಗಿ ಹೋರಾಟ ಮಾಡಲು ರಾಜಕೀಯ ಶಕ್ತಿ ಬೇಕಿದೆ. ಅದಕ್ಕಾಗಿ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹೊಸದುರ್ಗದ ಯಾವುದೇ ಕ್ಷೇತ್ರ ದಿಂದ ಆದರೂ ಟಿಕೆಟ್ ಕೊಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಒಟ್ಟಾರೆ ಕನ್ನಡ ಅಮ್ಮನ ಪುತ್ರನೊಬ್ಬನಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದ್ದು, ಕನ್ನಡ ತಾಯಿ ಋಣದ ಜತೆಗೆ ರಾಜಕೀಯ ಶಕ್ತಿ ನೀಡಬೇಕೆಂಬುದು ಅಭಿಮಾನಿಗಳ ಒತ್ತಾಯ.

Share.
Leave A Reply

Exit mobile version