ಶ್ರೀ ಸಾಮಾನ್ಯನ ಕೈಯಲ್ಲಿ ಮೊಬೈಲ್ ಫೋನ್ ಬರಲು ದಿವಂಗತ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಕಾರಣರಾಗಿದ್ದಾರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಅವರು ರಾಜೀವ್ ಗಾಂಧಿ ಅವರನ್ನು ಸ್ಮರಿಸಿದರು. ರಾಜೀವ್ ಗಾಂಧಿ ಪುಣ್ಯತಿಥಿಯನ್ನು ರಾಷ್ಟ್ರೀಯ ಭಯೋತ್ಪಾದನ ವಿರೋಧಿ ದಿನವನ್ನಾಗಿ ಆಚರಿಸಲಾಯಿತು.
ಅವರಿಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗವು ದಾವಣಗೆರೆ ನಗರದ ಎಂ ಸಿಸಿ ಎ ಬ್ಲಾಕ್ ನಲ್ಲಿ ಎರ್ಪಡಿಸಿದ್ದ ದಿವಂಗತ ಮಾಜಿ ಪ್ರಧಾನ ಮಂತ್ರಿ ಭಾರತ ರತ್ನ ರಾಜೀವ್ ಗಾಂಧಿ ರವರ 33 ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿ ಮಾತನಾಡಿದರು.
ರಾಜೀವ್ ಗಾಂಧಿ ಅವರು ಅತಿ ಕಿರಿಯ ವಯಸ್ಸಿಗೆ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದ ಪ್ರದಾನ ಮಂತ್ರಿಗಳಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಐದು ವರುಷಗಳ ಕಾಲ ದೇಶಕ್ಕೆ ಉತ್ತಮ ಆಡಳಿತವನ್ನು ನೀಡಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಭಾರತ ದೇಶವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿದರು.
ಭಾರತ ದೇಶಕ್ಕೆ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದರು ಇಡೀ ಪ್ರಪಂಚ ಭಾರತ ದೇಶದ ಕಡೆ ತಿರುಗಿ ನೋಡುವಂತೆ ಮಾಡಿದರು.
ಭಾರತ ದೇಶ ಕಂಡ ಅಪ್ರತಿಮ ನಾಯಕರಾದ ರಾಜೀವ ಗಾಂಧಿ ಅವರು ಅಲ್ಪ ಸಮಯದಲ್ಲಿ ದೇಶದ ಅಭಿವೃದ್ಧಿಯ ಮೂಲಕ ದ್ರುವ ತಾರೆಯಾಗಿ ಮಿಂಚಿದ್ದಾರೆಂದು ಡಿ. ಬಸವರಾಜ್ ಬಣ್ಣಿಸಿದರು. 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡಿದರು. ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯ ಕನಸು ಕಟ್ಟಿಕೊಂಡಿದ್ದ ರಾಜೀವ್ ಗಾಂಧಿ ಅವರು ಅದನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದರು. ಉನ್ನತ ಶಿಕ್ಷಣಕ್ಕೆ ಮಹತ್ವ ನೀಡಿ ಆನೇಕ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಿದರು. ಟೆಲಿಕಾಂನಲ್ಲಿ ಕ್ರಾಂತಿ ಮಾಡಿ, ಕಂಪ್ಯೂಟರೀಕರಣಕ್ಕೆ ಒತ್ತು ನೀಡಿದರು. ಸಂವಿಧಾನದ 73 ಮತ್ತು 74 ನೇ ವಿಧಿಗೆ ತಿದ್ದುಪಡಿ ತಂದು ಪಂಚಾಯತ್ ರಾಜ್ ವ್ಯವಸ್ಥೆ ಸರಿಪಡಿಸಿದರು. ರಾಜೀವ್ ಗಾಂಧಿ ನೇತೃತ್ವದಲ್ಲಿ 1984 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 411 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಬರೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗದ ಅಧ್ಯಕ್ಷರಾದ ಕೆ. ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ, ಬಿ. ಹೆಚ್. ಉದಯಕುಮಾರ್, ಸಿಂಗ್ರಹಳ್ಳಿ ವಿ ನೀಲಕಂಠಪ್ಪ, ಶಿವಾನಂದ್,ಗಿರಿಧರ್ ಸತಾಲ್, ಡಿ. ಶಿವಕುಮಾರ್, ಎ. ರಾಜಶೇಖರ್, ನಿಟ್ಟುವಳ್ಳಿ ಡಿ. ಬಸವರಾಜ್, ಮುಬಾರಕ್, ಸುರೇಶ್, ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.