ದಾವಣಗೆರೆಯನ್ನು ಕಟ್ಟಿದೋರೋ ಮರಾಠ ಸಮಾಜದವರು, ನಂತರ ಅದು ಮ್ಯಾಂಚೇಸ್ಟರ್ ಆಯಿತು. ಬಳಿಕ ಹೋರಾಟದ ತವರೂರಾಗಿ ಮಾರ್ಪಟ್ಟಿತು, ಅಲ್ಲಿಂದ ಕಬ್ಬಿನ ನಾಡು, ಮೆಕ್ಕೆಜೋಳ ಕಣಜ, ಭತ್ತದ ನಾಡು ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು.ಅಲ್ಲಿಂದ ದೇವನಗರಿ, ಶೈಕ್ಷಣಿಕ ಬೀಡು ಎಂಬೆಲ್ಲ ಹೆಸರಿನಿಂದ ದಾವಣಗೆರೆ ಪ್ರಚಲಿತವಾಯಿತು.ಆದರೆ ಕೆಲವೇ ಪಟ್ಟಾ ಭದ್ರ ಹಿತಾಸಕ್ತಿಯಿಂದ ದಾವಣಗೆರೆಯನ್ನು ಒಂದು ಖಾದ್ಯದಿಂದ ಗುರುತಿಸುತ್ತಿರುವುದು‌ ಶೋಚನೀಯ, ಅಲ್ಲದೇ ಇದನ್ನು ಸಾಕಷ್ಟು ಜನರು ವಿರೋಧಿಸುತ್ತಿರುವುದು ಉಂಟು..ಅದರಲ್ಲೂ ದಾವಣಗೆರೆ ಜಿಲ್ಲೆಯಲ್ಲಿರುವ ಮದಕರಿನಾಯಕರ ಸಮಾಧಿ, ಷಹಜಿ ಮಹಾರಾಜರ ಸಮಾಧಿ, ಸಂತೆಬೆನ್ನೂರು ಪುಷ್ಕರಣಿ, ತೀರ್ಥರಾಮೇಶ್ವರ, ಇತಿಹಾಸವುಳ್ಳ ಹರಿಹರೇಶ್ವರ ದೇವಸ್ಥಾನ,‌ ಅಷ್ಟೇ ಯಾಕೆ ಇಡೀ ರಾಜ್ಯದಲ್ಲಿ ಗಮನ ಸೆಳೆಯುತ್ತಿರುವ ದಾವಣಗೆರೆ ಗಾಜಿನ ಮನೆ ಅಭಿವೃದ್ದಿ, ಪ್ರವಾಸದ್ಯೋಮಕ್ಕೆ ಒತ್ತು ಕೊಡದ ಜಿಲ್ಲಾಧಿಕಾರಿ ಬೆಣ್ಣೆ ದೋಸೆಯನ್ನು ಬ್ರಾಂಡ್ ಮಾಡೋದಕ್ಕೆ ಹೊರಟಿದ್ದಾರೆ. ಇದನ್ನು ಸಾಕಷ್ಟು ಪ್ರಜ್ಞಾವಂತರು ವಿರೋಧ ಮಾಡುತ್ತಿದ್ದಾರೆ. ಅಲ್ಲದೇ ಇದರಹಿಂದೆ ಇರುವ ಕರಾಳ ದಂಧೆಯನ್ನು ಜನರೇ ದಾವಣಗೆರೆ ವಿಜಯಕ್ಕೆ ವಿವರಿಸಿದ್ದಾರೆ..ಅದರ ಸಂಪೂರ್ಣ ಡೀಟೇಲ್ಸ್ ನಿಮ್ಮ ಮುಂದೆ….

ನಂದೀಶ್ ಭದ್ರಾವತಿ, ದಾವಣಗೆರೆ

ದಾವಣಗೆರೆ ಅಂದ್ರೆ ಸಾಕು ಎಲ್ಲರೂ ಬೆಣ್ಣೆ ನಗರಿಯೆಂದು‌ ಕರೆಯುತ್ತಾರೆ, ಆದರೆ ಆ ಬೆಣ್ಣೆ ಅಸಲಿಯೋ ನಕಲಿಯೋ ಎಂದು ಯಾರಿಗೂ ತಿಳಿದಿಲ್ಲ…‌

ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಹಾಕದೇ, ಬೆಳೆನೇ ಬೆಳೆಯೋದಕ್ಕೆ ಆಗುತ್ತಿಲ್ಲ…ಇಂತಹ ಸಂದರ್ಭದಲ್ಲಿ ಗೊಬ್ಬರ ಹಾಕಿ ಬೆಳೆದ ಅಕ್ಕಿಯನ್ನೇ ತಿನ್ನುತ್ತಿರುವಾಗ ಅಸಲಿ ಅಥವಾ ನಕಲಿ ಬೆಣ್ಣೆ ಮೇಲೆ ನಂಬೋದಾದರೂ ಹೇಗೆ ಎಂಬ ಪ್ರಶ್ನೆ ಎದ್ದಿದೆ.

ದಾವಣಗೆರೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ,ಬೆಣ್ಣೆ ದೋಸೆಯನ್ನು ಬ್ರಾಂಡ್ ನ್ನಾಗಿ ಮಾಡಲುಬಹೊರಟಿರುವ ಇರಾದೆ ಸರಿಯಾಗಿಯೇ ಇದೆ…ಆದರೆ ಅದರ ಹಿಂದೆ ಇರುವ ಕರಾಳತೆಯನ್ನು ಅವರು ತಿಳಿದಿಲ್ಲ ಅನ್ನಿಸುತ್ತದೆ ಎಂಬುದು ಪ್ರಜ್ಞಾವಂತರ ಮಾತು.

ಸಾಮಾನ್ಯವಾಗಿ ನಾವೇನಾದರೂ ಹಳ್ಳಿ ಮನೆಗೆ ಹೋದ ವೇಳೆ ಬೆಣ್ಣೆ ದರ ಎಷ್ಟು ಅಂತ ಕೇಳಿದರೆ ಐದನೂರು ರೂ. ಅಂತ ಕೇಳುತ್ತೇವೆ. ಹೀಗಿರುವಾಗ ಅಸಲಿ ಬೆಣ್ಣೆಯನ್ನು ಬೆಣ್ಣೆ ದೋಸೆ ಮಾಲೀಕರು ತಂದು ದೋಸೆ ಮಾಡಲು ಸಾಧ್ಯನಾ ಎಂಬ ಪ್ರಶ್ನೆ ಎದ್ದಿದೆ.

ಹೋಟೆಲ್ ಗೆ ಬೇಕಾಗುವಷ್ಟು ಬೆಣ್ಣೆ ಉತ್ಪನ್ನ ಆಗೋದಿಲ್ಲ

ಸದ್ಯ ನಮ್ಮ ಜಿಲ್ಲೆಯಲ್ಲಿ 2011 ರ ಗಣತಿ ಪ್ರಕಾರ ಒಂದು ಲಕ್ಷದ ಇಪ್ಪತ್ತೈದು ಸಾವಿರ ಹಸುಗಳು ಇವೆ..ಇದರಲ್ಲಿ ಶೇ.80 ರಷ್ಟು ಜರ್ಸಿ ಆಕಳುಗಳಿವೆ.. ಈ ಹಸುಗಳಿಂದ ಹೆಚ್ಚಿನ ಬೆಣ್ಣೆ ನಿರೀಕ್ಷಿಸಲು ಸಾಧ್ಯವಿಲ್ಲ…ಅಲ್ಲದೇ ಹಾಲನ್ನು ಊರಿನಲ್ಲಿರುವ ಡೈರಿಗೆ ಹಾಕುತ್ತಾರೆ. ಮನೆ ಬಳಕೆಗೆ ಅಂತ ಒಂದು ಲೀಟರ್ ಹಾಲು ಅಥವಾ ಎರಡು ಲೀಟರ್ ಹಾಲು ಇಟ್ಟುಕೊಳ್ಳುತ್ತಾರೆ..

ಈ ಹಸುವಿನ ಹಾಲಿಗೆ ಒಂದು ಲೀಟರ್ ಗೆ ಅತಿ ಹೆಚ್ಚು ಅಂದ್ರೆ 100 ಗ್ರಾಂ ಬೆಣ್ಣೆ ಬರೋದು ಡೌಟ್, ಇನ್ನು ಶೇ.20ರಷ್ಟು ಎಮ್ಮೆಗಳು ಇದ್ದು ಅವುಗಳು ಕಡಿಮೆ ಹಾಲು ನೀಡುತ್ತವೆ…ಈಗ ಹೈನೋದ್ಯಮ ಮಾಡುವರು ಅತಿ ಹೆಚ್ಚು ಜರ್ಸಿ ಆಕಳುಗಳನ್ನು ಸಾಕುತ್ತಾರೆ..ಅವುಗಳಿಂದ ನಾವು ಬೆಣ್ಣೆ ನಿರೀಕ್ಷೆ ಮಾಡುವಂತಿಲ್ಲ…ಹಾಗಾದ್ರೆ ಇಡೀ ಜಿಲ್ಲೆಯಲ್ಲಿರುವ ನೂರಕ್ಕೂ ಹೆಚ್ಚು ಬೆಣ್ಣೆ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ನಾಗರಿಕರದ್ದು.

ಒಂದು ಹೋಟೆಲ್ ಗೆ ಕನಿಷ್ಠ 3 ಕೆಜಿ ಬೆಣ್ಣೆ ಬೇಕು

ಜಿಲ್ಲಾಧಿಕಾರಿಗಳು ಹೇಳುವಂತೆ ದಾವಣಗೆರೆಯಲ್ಲಿ ನೂರಕ್ಕೂ ಹೆಚ್ಚು ಬೆಣ್ಣೆ ದೋಸೆ ಹೋಟೆಲ್ ಗಳಿವೆ ಅಲ್ಲಿಗೆ ಒಂದು ಹೋಟೆಲ್ ಗೆ ಪ್ರತಿ ದಿವಸ ಕನಿಷ್ಠ 3 ಕೆಜಿ ಬೆಣ್ಣೆ ಬೇಕಾದರೆ ಪ್ರತಿ ದಿವಸ ಮೂನ್ನೂರು ಕೆಜಿ ಬೇಕು..ಅಲ್ಲಿಗೆ ಪ್ರತಿ ತಿಂಗಳಿಗೆ 9000 ಕೆಜಿ ಬೆಣ್ಣೆ ಬೇಕು…ಇಷ್ಟೋಂದು ಪ್ರಮಾಣದ ಬೆಣ್ಣೆ ತಿಂಗಳಿಗೆ ದಾವಣಗೆರೆ ಜಿಲ್ಲೆಯಲ್ಲಿ ಉತ್ಪನ್ನವಾಗುವುದು ಅಸಾಧ್ಯದ ಮಾತು…ಹಾಗಾದ್ರೆ ಇಷ್ಟೊಂದು ಪ್ರಮಾಣದ ಬೆಣ್ಣೆ ಎಲ್ಲಿಂದ ಬರುತ್ತದೆ ಎಂಬುದನ್ನು ಡಿಸಿ ಉತ್ತರಿಸಬೇಕಾಗಿದೆ ಎಂದು ಜನರು ಕೇಳುತ್ತಿದ್ದಾರೆ.

ಶಿಮುಲ್ ನಲ್ಲಿ ಉತ್ಪಾದನೆ ಎಷ್ಟು

ಶಿಮುಲ್ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸುಮಾರು 1300 ಉತ್ಪಾದಕರ ಸಂಘಗಳಿದ್ದು 1.60 ಲಕ್ಷ ಹಾಲು ಉತ್ಪಾದಕ ಸದಸ್ಯರಿದ್ದಾರೆ. ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಸುಮಾರು 700 ಸಂಘಗಳ ಸುಮಾರು 95 ಸಾವಿರ ಉತ್ಪಾದಕರಿಂದ 3.75 ಲಕ್ಷ ಲೀಟರ್ ಹಾಲು ಸಂಗ್ರಹವಾದರೆ, ಶಿವಮೊಗ್ಗದಲ್ಲಿ ಸುಮಾರು 600 ಸಂಘಗಳ 65 ಸಾವಿರ ಉತ್ಪಾದಕ ರಿಂದ 3.25 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮೂರೂ ಜಿಲ್ಲೆಗಳಿಂದ ಪ್ರತಿದಿನ ಸುಮಾರು 7 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹೀಗಿರುವಾಗ ಬೆಣ್ಣೆ ದೋಸೆ ಹೋಟೆಲ್ ಗಳಿಗೆ ದೊಡ್ಡ ಪ್ರಮಾಣದ ಬೆಣ್ಣೆ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.

ನಂದಿನಿ ಪಾರ್ಲರ್ ನಲ್ಲಿ ಬೆಣ್ಣೆ ದರ ಹೆಚ್ಚು, 

ಪ್ಯೂರ್ ಬೆಣ್ಣೆ ದರ ನಂದಿನಿ ಪಾರ್ಲರ್ ನಲ್ಲಿ ಕೆಜಿಗೆ ಐದನೂರು ರೂ. ಇದೆ. ಆದ್ದರಿಂದ ಈ ಬೆಣ್ಣೆಯನ್ನು ಯಾರು ಖರೀದಿಸಲು ಸಾಧ್ಯವಿಲ್ಲ..ಇನ್ನೂ ಪ್ರತಿ ಭಾನುವಾರ ನಡೆಯುವ ಬೆಣ್ಣೆ ಮಾರುಕಟ್ಟೆಯಲ್ಲಿ ಕನಿಷ್ಠ 20 ಜನ ವ್ಯಾಪಾರಕ್ಕೆ ಬಂದ್ರೆ ನೂರು ಕೆಜಿ ಬೆಣ್ಣೆ ಸಿಗೋದು ಹೆಚ್ಚು..ಅದರಲ್ಲೂ ನಾಗರಿಕರು ಮನೆ ಬಳಕೆಗೆ ಬೆಣ್ಣೆ ತೆಗೆದುಕೊಂಡು ಹೋಗುತ್ತಾರೆ..ಅಲ್ಲಿಯೂ ಬೆಣ್ಣೆ ಸಿಗೋದಿಲ್ಲ.

ಪೂನಾದಿಂದ ಬರುತ್ತಿದೆಯಾ ಬೆಣ್ಣೆ?

ದಾವಣಗೆರೆಯಲ್ಲಿ ಇಷ್ಟೊಂದು ಪ್ರಮಾಣದ ಬೆಣ್ಣೆ ಸಿಗದ ಪರಿಣಾಮ ದೋಸೆ ಹೋಟೆಲ್ ಮಾಲೀಕರು ಪೂನಾ, ಮಹಾರಾಷ್ಟ್ರ ದಿಂದ ಬೆಣ್ಣೆ ತರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ..ಅದರಲ್ಲೂ ಈ ಬೆಣ್ಣೆ ಪ್ರತಿ ದಿನ ನಸುಕಿನ ಜಾವ ಬಸ್ಸಿನಲ್ಲಿ ಬರುತ್ತಿದೆ ಎಂಬ ಮಾಹಿತಿ ಇದ್ದು, ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.

ಪೂನಾ ಬೆಣ್ಣೆ ಕೆಜಿಗೆ 250 ರೂ.

ಸ್ಥಳೀಯವಾಗಿ ಸಿಗುವ ಬೆಣ್ಣೆ ದರ ಹೆಚ್ಚಿರುವ ಕಾರಣ ಹಲವು ಹೋಟೆಲ್ ಗಳು ನಕಲಿ ಬೆಣ್ಣೆಯನ್ನು‌‌ ರೂ.250 ಗೆ ಸಿಗುತ್ತಿದೆ. ಆದ್ದರಿಂದ ಹೋಟೆಲ್ ಮಾಲೀಕರು ಜನರಿಗೆ ಕಾಣುವಂತೆ ಅಸಲಿ ಬೆಣ್ಣೆ ಇಟ್ಟು, ನಕಲಿ ಬೆಣ್ಣೆಯನ್ನು ದೋಸೆಗೆ ಹಾಕುತ್ತಿದ್ದಾರೆ. ಇದು ಜನರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ.

ಎರಡು ದೋಸೆಗಿಂತ ಹೆಚ್ಚು ತಿನೋದಕ್ಕೆ ಆಗೋದಿಲ್ಲ

ಸಾಮಾನ್ಯವಾಗಿ ಮನೆಯಲ್ಲಿ ಮಾಡಿದ ಬೆಣ್ಣೆ ದೋಸೆಯನ್ನು ಕನಿಷ್ಟ ಮೂರು ದೋಸೆ ತಿನ್ನಬಹುದು..ಆದರೆ ಹೋಟೆಲ್ ದೋಸೆಯನ್ನು ಎರಡು ಮಾತ್ರ ತಿನ್ನೋದಕ್ಕೆ ಸಾಧ್ಯ. ಹೆಚ್ಚಿಗೆ ತಿಂದರೆ ಕೆಮ್ಮು ಆಗುವ ಸಾಧ್ಯತೆ ಇದೆ..ಇನ್ನೂ ಒರಿಜಿನಲ್ ಬೆಣ್ಣೆ ಹಾಕಿದ ದೋಸೆ ತಿಂದರೆ ಬೆಣ್ಣೆ ಪರಿಮಳ ಬರುತ್ತದೆ, ಆದರೆ ನಕಲಿ ಬೆಣ್ಣೆ ಹಾಕಿದ ದೋಸೆ ಪರಿಮಳವೂ ಬರೋದಿಲ್ಲ ಕೈಗೆ ಜಿಡ್ಡು ಕೂಡ ಹತ್ತೋದಿಲ್ಲ.

ಒಟ್ಟಾರೆ ಬೆಣ್ಣೆ ದೋಸೆಗೆ ಹಾಕುವ ಬೆಣ್ಣೆ ಬಗ್ಗೆ ಇರುವ ಅನುಮಾನವನ್ನು ಆಹಾರ ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕಾಗಿದ್ದು, ಇಷ್ಟೊಂದು ಪ್ರಮಾಣ ಬೆಣ್ಣೆ ಎಲ್ಲಿಂದ ಬರುತ್ತದೆ ಎಂದು ಡಿಸಿ ಉತ್ತರ ನೀಡಬೇಕಾಗಿದೆ.

Share.
Leave A Reply

Exit mobile version