ದಾವಣಗೆರೆ : 14 ಲೋಕಸಭೆ ಕ್ಷೇತ್ರಗಳಿಗೆ ಮೇ.7ರಂದು ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕದಲ್ಲಿಅಧಿಪತ್ಯ ಸಾಧಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ತೊಡೆತಟ್ಟಿ ನಿಂತಿವೆ. ಅದರಲ್ಲೂ, ಆಡಳಿತರೂಢ ಕಾಂಗ್ರೆಸ್ ಬಿಜೆಪಿ ಘಟಾನುಘಟಿ ನಾಯಕರಿಗೆ ಖೆಡ್ಡಾ ತೊಡಲು ಸಿದ್ಧತೆ ನಡೆಸಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಸೋಲಿಸಲು ಕೈ ಟೀಂ ರೂಪಿಸಿದ ರಣತಂತ್ರವೇನು..? ರಾಜಾಹುಲಿ ಆಪ್ತ ಕಾಂಗ್ರೆಸ್ ಸೇರ್ಪಡೆ ಆಗ್ತಾರಾ?
ಹಾವೇರಿ ಲೋಕಸಭೆ ಕ್ಷೇತ್ರ.. ಬಿಜೆಪಿ ಭ್ರದ್ರಕೋಟೆ.. ಕಳೆದ ಹದಿನೈದು ವರ್ಷಗಳಿಂದ ಬಿಜೆಪಿ ಇಲ್ಲಿ ಗೆಲುವಿನ ಅಲೆಯಲ್ಲಿ ತೇಲಾಡಿದೆ.. ನಾಲ್ಕನೇ ಬಾರಿಯೂ ವಿಜಯೋತ್ಸವ ಆಚರಿಸುವ ನಿರೀಕ್ಷೆಯಲ್ಲಿದೆ ಆದರೂ, ಕಾಂಗ್ರೆಸ್ ಪೈಪೋಟಿ ಒಡ್ಡಿರುವುದು ಕುತೂಹಲ ಹೆಚ್ಚಿಸಿದೆ..
ಲಿಂಗಾಯತ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದು, ಈ ಬಾರಿ ತಂತ್ರಗಾರಿಕೆ ಬದಲಿಸಿಕೊಂಡಿರುವ ಕಾಂಗ್ರೆಸ್, ಲಿಂಗಾಯತ ಸಮುದಾಯದ ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನ ಕಣಕ್ಕೆ ಇಳಿಸಿ, ಬಿಜೆಪಿಗೆ ಚೆಕ್ಮೇಟ್ ಕೊಡಲು ಸಜ್ಜಾಗಿದೆ..
18 ಅಭ್ಯರ್ಥಿಗಳು ಅಖಾಡದಲ್ಲಿದ್ದರೂ ಇಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಪೈಪೋಟಿ ಇದೆ.. ಇಂತಹದರ ನಡುವೆ ಒಂದು ಕಾಲದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಮಾಜಿ ಶಾಸಕ ನೆಹರು ಓಲೇಕಾರ್ ಕಾಂಗ್ರೆಸ್ಗೆ ಸೇರ್ಪಡೆ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ.ಕಾಂಗ್ರೆಸ್ ಸೇರುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನ ಹೊಸಪೇಟೆಯಲ್ಲಿ ಭೇಟಿ ಮಾಡಿದ್ದಾರೆ.. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದ್ದು, ಅದು ಎರಡನೇ ಹಂತದ ಮತದಾನಕ್ಕೆ ಇನ್ನೂ ನಾಲ್ಕು ದಿನಗ ಬಾಕಿಯಿರುವಾಗ ಇಂತಹ ಬೆಳವಣಿಗೆ ನಡೆದಿರುವುದು ಬಿಜೆಪಿಗೆ ಆತಂಕ ತಂದು ಒಡ್ಡಿದೆ.
ಈ ಬಾರಿ ಹಾವೇರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಸಜ್ಜಾಗಿರುವ ಕೈ ನಾಯಕರು, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಸೋಲಿಸಲು ರಣತಂತ್ರ ರೂಪಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ನೆಹರು ಓಲೇಕಾರ್, ಸೈಲೆಂಟ್ ಆಗಿ ಕಾಂಗ್ರೆಸ್ಗೆ ಬೆಂಬಲಿಸಿದ್ದರು. ಇದರಿಂದ ಕಾಂಗ್ರೆಸ್ ಮುನ್ನಡೆ ಕಾರಣವಾಗಿತ್ತು ಎನ್ನಲಾಗಿದೆ…ವಿಧಾನಸಭೆ ಟಿಕೆಟ್ ಕೈತಪ್ಪಲು ಬೊಮ್ಮಾಯಿ ಕಾರಣ ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೇ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇರುವುದು, ಜೆಡಿಎಸ್ ಪ್ರಭಾವ ಇರದಿರುವುದು ಬಿಜೆಪಿಗೆ ಮೈನಸ್ ಪಾಯಿಂಟ್ ಆಗಿದೆ.
ಮೋದಿ ನಾಮಬಲ, ಲಿಂಗಾಯತ ವೋಟ್ ಬ್ಯಾಂಕ್, ಬಿಜೆಪಿ ಕಾಲದ ಅಭಿವೃದ್ಧಿ ಕಾರ್ಯಗಳೇ ಬೊಮ್ಮಾಯಿ ಅವರಿಗೆ ಪಸ್ಲ ಪಾಯಿಂಟ್..ಒಟ್ಟಾರೆ.. ನೆಹರು ಓಲೇಕಾರ್ ನಡೆಯು ಬಿಜೆಪಿಗೆ ಸಣ್ಣಮೆಟ್ಟಗಿನ ನಡುಕು ಉಂಟು ಮಾಡಿದ್ದಂತೂ ಸತ್ಯ