ನ್ಯಾಮತಿ : ಹಣಕ್ಕಾಗಿ ಈಚೆಗೆ ಲೋಕಾಯುಕ್ತ ಕಚೇರಿ ಅಧಿಕಾರಿ ಎಂದು ಹೇಳಿಕೊಂಡು ನ್ಯಾಮತಿ ತಹಸೀಲ್ದಾರ್ಗೆ ಬೆದರಿಕೆ ಕರೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ನ್ಯಾಮತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಸದಲಗ ಮುರುಗೇಶ್ ಕುಂಬಾರ ಎಂದು ತಿಳಿದು ಬಂದಿದ್ದು ಈತನ ನಡವಳಿಕೆಯಿಂದ ಪೊಲೀಸ್ ಇಲಾಖೆಯಿಂದ 2002ರಲ್ಲಿ ಕೆಲಸ ಕಳೆದುಕೊಂಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಮಹಾರಾಷ್ಟ್ರದ ಮಿರಜ್ನಲ್ಲಿ ನೆಲೆಸಿರುವ ಈತ ಸರ್ಕಾರಿ ಅಧಿಕಾರಿಗಳಿಗೆ ಇದೇ ರೀತಿಯಾಗಿ ಬೆದರಿಸಿ ಹಣ ವಸೂಲಿ ಮಾಡುವುದನ್ನೆ ತನ್ನ ವೃತ್ತಿ ಮಾಡಿಕೊಂಡಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ .
ಈತನ ವಿರುದ್ಧ ರಾಜ್ಯದ ಹಲವು ಪೊಲೀಸ್ ಠಾಣೆಯಲ್ಲಿ 20ಕ್ಕೂ ಪ್ರಕರಣ ದಾಖಲಾಗಿದ್ದು ವಿಚಾರಣೆ ನಂತರ ಹೆಚ್ಚಿನ ಮಾಹಿತಿ ಹೊರ ಬರಲಿರುವುದಾಗಿ ನ್ಯಾಮತಿ ಪೊಲೀಸ್ ಠಾಣೆ ಪಿಐ, ಎನ್.ಎಸ್.ರವಿ ತಿಳಿಸಿದ್ದಾರೆ.