ದಾವಣಗೆರೆ : ನಗರದ ಎಂಬಿಎ ಕಾಲೇಜಿನ ಆವರಣದಲ್ಲಿ  ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದ್ದು, ತಂಡೋಪತಂಡವಾಗಿ ಜನ ಬರುತ್ತಿದ್ದಾರೆ.

ಈಗಾಗಲೇ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಹಾ ಅಧಿವೇಶನಕ್ಕೆ ಶುಭ ಕೋರುವ ಫ್ಲೆಕ್ಸ್ ಹಾಗೂ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರಪ್ರದೇಶಗಳಿಂದಲೂ ಜನರು ಆಗಮಿಸುತ್ತಿದ್ದಾರೆ.

ದಾವಣಗೆರೆ ಮಹಾ ಅಧಿವೇಶನದಲ್ಲಿನ ಬೃಹತ್ ವೇದಿಕೆ

ಬೃಹತ್ ಪೆಂಡಾಲ್

400 ಮೀಟರ್ ಉದ್ದ ಹಾಗೂ 220 ಅಡಿ ಅಗಲದ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಎಸ್‌. ನಿಜಲಿಂಗಪ್ಪ ಪ್ರಧಾನ ವೇದಿಕೆಯಲ್ಲಿ ಮೂರು ಭಾಗಗಳು ಇದೆ.  ಮಠಾಧೀಶರು, ಗಣ್ಯರು, ಸಚಿವರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜೆ.ಎಚ್. ಪಟೇಲ್ ಹೆಸರಿನಲ್ಲಿ ಮತ್ತೊಂದು ವೇದಿಕೆ ಸಿದ್ಧಪಡಿಸಿದ್ದು, ಇಲ್ಲಿ ಗೋಷ್ಠಿಗಳು ನಡೆಯಲಿವೆ.

ಎರಡು ಕಡೆ ಸೇರಿ ಸುಮಾರು 40 ಸಾವಿರ ಜನರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಹೊರಗಡೆ 10 ಕಡೆ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ.

ಮಹಾ ಅಧಿವೇಶನದ ಅಂಗವಾಗಿ ಬೃಹತ್ ಪೆಂಡಾಲ್ ತುದಿಯಲ್ಲಿ 120 ಮಳಿಗೆಳನ್ನು ಹಾಕಲಾಗಿದ್ದು, ಕೃಷಿ, ಕೈಗಾರಿಕೆ ಸಂಬಂಧಪಟ್ಟ, ಶರಣ ಹಾಗೂ ರೇಣುಕಾ ಪರಂಪರೆಯನ್ನು ಬಿಂಬಿಸುವ ಚಿತ್ರಗಳು, ಪುಸ್ತಕಗಳ ಪ್ರದರ್ಶನ ನಡೆಯಲಿದೆ.

ವಸತಿ ವ್ಯವಸ್ಥೆ

ಹೊರ ಜಿಲ್ಲೆಗಳಿಂದ ಬರುವ ಜನರಿಗೆ ಕಲ್ಯಾಣ ಮಂಟಪ, ಖಾಸಗಿ ಶಾಲಾ–ಕಾಲೇಜು, ಹಾಸ್ಟೆಲ್‌ಗಳು, ಸಮುದಾಯ ಭವನ, ಕಲ್ಯಾಣ ಮಂಟಪಗಳು, ವಸತಿ ಗೃಹಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

Share.
Leave A Reply

Exit mobile version