ದಾವಣಗೆರೆ : ಮನೆಯಲ್ಲಿಯೇ ಪತ್ನಿ ಇದ್ದರೂ ಪರಸ್ತ್ರೀ ಸಂಘ ಮಾಡಿದ ಹೊನ್ನಾಳಿ ಪಿಸಿಯೊಬ್ಬರನ್ನು ಎಸ್ಪಿ ಉಮಾಪ್ರಶಾಂತ್ ಅಮಾನತು ಮಾಡಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆಯ ಸಿಪಿಸಿ 124 ಪ್ರಸನ್ನ ಇನ್ನೊಬ್ಬ ಮಹಿಳೆ ಬಾಲ ಹಿಡಿದ ಪೊಲೀಸ್. ಈ ಪೊಲೀಸ್ ಪತ್ನಿಯಿಂದ ದೂರ ಇದ್ದರು. ಈ ಹಿನ್ನೆಲೆಯಲ್ಲಿ ಪತ್ನಿ ಎಸ್ಪಿಗೆ ದೂರು ನೀಡಿದ್ದರು. ನಂತರ ಎಸ್ಪಿ ಉಮಾಪ್ರಶಾಂತ್
ಹಿರಿಯ ಅಧಿಕಾರಿಗಳಿಂದ ತನಿಖೆ ಕೈಗೊಂಡರು. ಬಳಿಕ
ಆರೋಪ ಸತ್ಯವೆಂದು ಗೊತ್ತಾದ ಬಳಿಕ ಎಸ್ಪಿ ಪಿಸಿಯನ್ನು ಅಮಾನತ್ತುಗೊಳಿಸಿದ್ದಾರೆ.
ಈ ಪೇದೆ ಪರಸ್ತ್ರೀ ಸಂಘ ಮಾಡಿ ಕೆಲ ತಿಂಗಳಿಂದ ಮನೆಗೆ ಬರುವುದನ್ನೇ ನಿಲ್ಲಿಸಿದ್ದರು. ಇವರಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳು ಇದ್ದು, ಮಕ್ಕಳನ್ನ ಕಟ್ಟಿಕೊಂಡು ಕುಟುಂಬ ನಡೆಸಲು ಪ್ರಸನ್ನ ಅವರ ಪತ್ನಿ ಪರದಾಡುತ್ತಿದ್ದರು. ಈ ಮಧ್ಯೆ ಮತ್ತೊಬ್ಬಳೊಂದಿಗೆ ರಂಗಿನಾಟ ಪ್ರಶ್ನೆ ಮಾಡಿದಕ್ಕೆ ಪತ್ನಿಯ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆದು ಹಲ್ಲೆಮಾಡಿದ್ದ. ಆತನ ದೌರ್ಜನ್ಯದಿಂದ ಬೇಸತ್ತು ಪತ್ನಿ ದೂರು ನೀಡಿದ್ದರು. ಈ ಹಿನ್ನಲೆ ಹಿರಿಯ ಅಧಿಕಾರಿಗಳಿಂದ ಎಸ್ಪಿ ತನಿಖೆ ಮಾಡಿಸಿದ್ದರು. ಆರೋಪ ಸತ್ಯವೆಂದು ಸಾಭೀತಾದ ಮೇಲೆ ಕ್ರಮಕೈಗೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಜಗಳ
ಪಿಸಿ ಪ್ರಸನ್ನ ಸಾರ್ವಜನಿಕ ಸ್ಥಳದಲ್ಲಿ ಜಗಳ ಮಾಡಿಕೊಂಡು, ದುರ್ನಡತೆ ತೋರಿದ್ದರು.ಪತಿ ಪ್ರಸನ್ನ ಮನೆಗೆ ಯಾವುದೇ ರೀತಿಯ ಹಣದ ಸಹಾಯ ಮಾಡುತ್ತಿಲ್ಲ. ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ಬಗ್ಗೆ ಕೇಳಿದ್ದಕ್ಕೆ ನನ್ನ ಮೇಲೆ ತೀವ್ರ ಹಲ್ಲೆ ನಡೆಸಿ, ಸಾಯಿಸುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಪತ್ನಿ ಮಾಲಾ ಆರ್. ಅವರು ಎಸ್ಪಿಗೆ ದೂರು ನೀಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಎಸ್ಪಿ ಉಮಾ ಪ್ರಶಾಂತ್, ಹೊನ್ನಾಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಸೂಚಿಸಿದ್ದರು. ಸಾಕ್ಷಿದಾರರ ಹೇಳಿಕೆ ಆಧರಿಸಿ ಪಿಐ ಸಲ್ಲಿಸಿದ ಪೂರ್ವಭಾವಿ ವಿಚಾರಣಾ ವರದಿಯನ್ನು ಆಧರಿಸಿ ಅಮಾನತು ಆದೇಶ ಹೊರಡಿಸಲಾಗಿದೆ.