ದಾವಣಗೆರೆ :
ಕರಿಯಾ ಎನ್ನೋ ವರ್ಡ್ ಅಮೆರಿಕಾದಲ್ಲಿ ಹೇಳಿದ್ದರೆ ಪ್ರಕರಣ ದಾಖಲು ಆಗುತ್ತಿತ್ತು ಎಂದು ಬಿಜೆಪಿ ನಾಯಕ ಆರ್.ಅಶೋಕ್ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಆರ್ ಅಶೋಕ್ ,ಕರಿಯಾ ಎಂಬ ಪದ ಹೇಳಿದವನ್ನು ಸಿದ್ದರಾಮಯ್ಯ ಪಕ್ಕಕ್ಕೆ ಇಟ್ಟುಕೊಂಡಿದ್ದಾರೆ. ಇದೇ ರೀತಿ ಬೇರೆ ಕಡೆ ಹೇಳಿದ್ದರೇ ಪ್ರಕರಣ ದಾಖಲಾಗುತ್ತಿತ್ತು ಎಂದರು.
900 ಕೋಟಿ ಲಿಕ್ಕರ್ ದುಡ್ಡನ್ನು ಬೈ ಎಲೆಕ್ಷನ್ ನಲ್ಲಿ ಹರಿಸುತ್ತಿದ್ದಾರೆ. ಜಮೀರ್ ವಾಪನ್ ಆಗಿ ದುಡ್ಡು ಹಂಚುವ ವಿಡಿಯೋ ಬಂದಿದೆ.ಅವರ ಮೇಲೆ ದೂರು ನೀಡಿದ್ದೇವೆ.ಹಣ ಬಲ ವರ್ಸಸ್ ಜನ ಬಲ ಎಂಬಂತಾಗಿದೆ. ಕಾಂಗ್ರೆಸ್ ನಲ್ಲಿ ಭ್ರಷ್ಟ ಹಣದ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಲಿಕ್ಕರ್ ಲಾಬಿ ಬಗ್ಗೆ ಪ್ರಧಾನಿಯವರ ಹೇಳಿಕೆ ಬಗ್ಗೆ ಸಾಕ್ಷಿ ಕೇಳುತ್ತಿದ್ದಾರೆ. ಪೈನಾನ್ಸ್ ಸೆಕ್ರಟರಿ ಲಿಕ್ಕರ್ ದೂರಿನ ಬಗ್ಗೆ ಮೀಟಿಂಗ್ ಮಾಡಿರುವುದು ಸಾಕ್ಷಿ ಅಲ್ವ. 16 ತಿಂಗಳಲ್ಲಿ 16 ಭ್ರಷ್ಟಾಚಾರ ಮಾಡಿದ್ದಾರೆ. ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ಸದನದಲ್ಲಿ ವಾಲ್ಮೀಕಿ ಹಗರಣ ಒಂದೇ ಇತ್ತು. ಈ ಅಧಿವೇಶನ ಪೂರ್ತಿ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತೇ. ಓಬಾಮರ ಮುಂದೆ ಬ್ರಹ್ಮಾಂಡ ಭ್ರಷ್ಟಾಚಾರ ಮುಂದಿಡಬೇಕಾಗುತ್ತೇ. ಇದೀಗ 4 ಮೀಸಲಾತಿ ವಿಚಾರ ಅವರ ಮೈಂಡ್ ಒಂಥರ ಆಗಿದೆ. ಮೂಡಾ ವಾಲ್ಮೀಕಿ ಹಗರಣದ ನಂತರ ಸಿ.ಎಂ ದೇವರು ನೆನಪಾಗಿದ್ದಾರೆ. ಈ ಸರ್ಕಾರ ಬಹಳ ದಿನ ಉಳಿಯೋಲ್ಲ.
ಮುಂದಿನ ಅಧಿವೇಶನದೊಳಗೆ ಸಿಎಂ ರಾಜೀನಾಮೆ ಕೊಡಬಹುದು..ಯಡಿಯೂರಪ್ಪ ನವರ ಮೇಲೆ ಮತ್ತೊಂದು ಕೇಸ್ ಮಾಡಲು ಮುಂದಾಗಿದ್ದಾರೆ. ಯಡಿಯೂರಪ್ಪ ಅದಕ್ಕೆ ಜಗ್ಗುವುದಿಲ್ಲ . ಕಾಂಗ್ರೆಸ್ ಹಗರಣಗಳಲ್ಲಿ ಸಿಲುಕಿ ಹತಾಶರಾಗಿದ್ದಾರೆ . ಮೂಡಾ ಹಗರಣ ವಾಲ್ಮೀಕಿ ಹಗರಣ ಬಯಲಿಗೆ ಬಂದ ನಂತರ ಮುಚ್ಚಿ ಹಾಕೋಕೆ ಪ್ರಯತ್ನ ಮಾಡುತ್ತಿದ್ದಾರೆ. 17 ತಿಂಗಳ ಕಾಲ ನಿಮ್ಮ ತಲೆಯಲ್ಲಿ ಬ್ರೈನ್ ಇರಲಿಲ್ವ. ಯಾವುದು ಹಗರಣವು ಇರಲಿಲ್ಲ ಯಾವ ತನಿಖೆ ಇರಲಿಲ್ಲ.ಮೂಡಾದಲ್ಲಿ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾದ ನಂತರ ಇದೀಗ ಹಗರಣಗಳ ಬಗ್ಗೆ ಬೆನ್ನಟ್ಟಿದ್ದಾರೆ.ಕುನ್ಹಾ ಆಯೋಗ ನೇಮಕ ಮಾಡಿದ್ದಾರೆ. ಕೋವಿಡ್ ಹಗರಣದಲಆಗಲಿ.ಪರ್ಚೇಸ್ ಪವರ್ ಅಧಿಕಾರಿಗಳಿಗಿರುತ್ತದೆ ಆ ಬಗ್ಗೆ ತನಿಖೆ ಆಗಲಿ ಕೆಂಪಣ್ಣ ಆಯೋಗ ನೋಟಿಸ್ ಕೊಟ್ಡಿದ್ದರು.ಕೋವಿಡ್ ಹಗರಣದಲ್ಲಿ ಮದ್ಯಂತರ ವರದಿ ನೀಡಿರುವ ಕುನ್ಹಾ ಆಯೋಗವು ನೋಟಿಸ್ ನೀಡಬಹುದಿತ್ತಲ್ಲ.
ರಾಜ್ಯದಲ್ಲಿ 50 – 60 ವರ್ಷ ಆಡಳಿತ ಮಾಡಿರೋ ಕಾಂಗ್ರೆಸ್ ನ ಹಗರಣಗಳನ್ನು ಹೊರಗೆ ತೆಗಿದ್ರೆ . ರಾಜ್ಯವನ್ನು ಲೂಟಿ ಹೊಡೆದೋರು ಕಾಂಗ್ರೆಸ್ನವರು, ಕಾಂಗ್ರೆಸ್ ಬೆದರಿಕೆ ಹಾಕಿ ವಿರೋಧ ಪಕ್ಷಗಳನ್ನು ಮಟ್ಟ ಹಾಕೋಕೆ ಪ್ರಯತ್ನ ಮಾಡುತ್ತಿದ್ದಾರೆ. ಗವರ್ನರ್ ಆಫೀಸ್, ಬಿಜೆಪಿ ಕಚೇರಿ , ಗವರ್ನರ್ ಬಿಜೆಪಿ ಏಜೆಂಟ್ ಅಂತೆ..ಭಾರದ್ವಾಜ್ ಕಾಲದಲ್ಲಿ ಗವರ್ನರ್ ಆಫೀಸ್ ಕಾಂಗ್ರೆಸ್ ಏನ್ ಆಗಿತ್ತು ಅವರ ಕಾಫಿ, ಟೀ ಅಲ್ಲೆ ಇರುತ್ತಿತ್ತು. ಬಿಜೆಪಿ ವಿರೋಧಪಕ್ಷವಾಗಿ ವಾಲ್ಮೀಕಿ ಹಗರಣ ಪ್ರಸ್ತಾಪ ಮಾಡಿತ್ತು. ಸಿದ್ದರಾಮಯ್ಯ ಅವರ ಹಿಂಬಾಲಕರಿಂದ ಹಾಳಾಗಿದ್ದಾರೆ. ಸಿದ್ದರಾಮಯ್ಯ ನವರೇ ಸೈಟ್ ಗೆ ರೇಟ್ ಪಿಕ್ಸ್ ಮಾಡಿಕೊಂಡು ಅವರ ಬೋನಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. 1500 ಸೈಟ್ ಬಗ್ಗೆ ಸವಿವರವನ್ನು ಕೇಳಿದ್ದೇನೆ ಇನ್ನಷ್ಟು ಹಗರಣಗಳು ಹೊರಗೆ ಬರಲಿದೆ ಎಂದರು.