ಬೆಂಗಳೂರು:ನಗರದ ಭುವನೇಶ್ವರಿ ದೇವಿ ವಿಗ್ರಹ ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಜೀವನ್ ಭೀಮಾ ನಗರದಲ್ಲಿ ನ.14 ರಂದು ರಾತ್ರಿ ಲಕ್ಷ್ಮೀ ಭುವನೇಶ್ವರಿ ದೇಗುಲದಲ್ಲಿ ದೇವಿ ವಿಗ್ರಹ ವಿರೂಪಗೊಳಿಸಲಾಗಿತ್ತು. ಕಿಡಿಗೇಡಿಗಳ ಕೃತ್ಯ ಕಂಡು ಆಕ್ರೋಶ ವ್ಯಕ್ತಪಡಿಸಿದ್ದ ಭಕ್ತರು ಪೊಲೀಸರಿಗೆ ದೂರು ನೀಡಿದ್ದರು.
ದುಷ್ಕರ್ಮಿಗಳನ್ನು ಸಂಬಂಧಿಸಿದಂತೆ ಆಗ್ರಹಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ವಶಕ್ಕೆ ಪಡೆದಿದ್ದಾರೆ. ಆರೋಪಿಯೋರ್ವ ಅಪ್ರಾಪ್ತ ಬಾಲಕನಾಗಿದ್ದಾನೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫೇಲ್ ನಾಗಿದ್ದಕ್ಕೆ ದೇವರ ಮೇಲೆ ಕೋಪಗೊಂಡು ಲಕ್ಷ್ಮೀ ಭುವನೇಶ್ವರಿ ದೇವಿಯ ವಿಗ್ರಹವನ್ನು ವಿರೂಪಗೊಳಿಸಿಸಿದ್ದಾನೆ.
ಬಾಲಕನು ದೈವ ಭಕ್ತನಾಗಿದ್ದ. ಪರೀಕ್ಷೆಯಲ್ಲಿ ಮೂರು ವಿಷಯದಲ್ಲಿ ಫೇಲ್ ಆಗಿದ್ದಾನೆ. ಇದರಿಂದ ಬೇಸರಗೊಂಡು ದೇವರ ವಿಗ್ರಹವನ್ನೇ ವಿರೂಪಗೊಳಿಸಿ ತೆರಳಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಬಾಲಕ ಬಾಯ್ಬಿಟ್ಟಿದ್ದಾನೆ.