ಚನ್ನಗಿರಿ: ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಬರುತ್ತಿರಲಿಲ್ಲ ಆದರೆ ಇಂದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಲೋಕಸಭೆ ಪ್ರಬಲ ಆಕಾಂಕ್ಷಿ ಜಿ.ಬಿ.ವಿನಯ್ ಕುಮಾರ್ ಹೇಳಿದರು.

ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ, ಕಾಕನೂರು, ನಾಗೇನಹಳ್ಳಿ, ಮೆದಿಕೆರೆ, ತಣಿಗೆರೆ ಹಾಗೂ ಸಂತೆಬೆನ್ನೂರುಗಳಿಗೆ ಪಾದಯಾತ್ರೆ ನಡೆಸಿ ಇನ್‌ಸೈಟ್ ಸಂಸ್ಥೆಯ ದಶಮಾನೋತ್ಸವ  ಕಾರ್ಯಕ್ರಮದಲ್ಲಿ   ಕೇಕ್ ಕತ್ತರಿಸಿ ಜನರನ್ನು ಉದ್ದೇಶಿಸಿ ಮಾತನಾಡಿದರು.

 ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸ್ಪರ್ಧಿಸುತ್ತೇನೆ ಹೊರತು ಪಕ್ಷೇತರರಾಗಿ ಸ್ಪರ್ಧಿಸುವುದಿಲ್ಲ, ನನ್ನ ದೃಢ ನಿಲುವು ನನ್ನ ಶ್ರಮ ಮತ್ತು ಕಾಯಕದ ಮೇಲೆ ನನಗೆ ನಂಬಿಕೆ ಇದೆ‌.

ಪ್ರತಿಫಲ ದೇವರಿಗೆ ಬಿಟ್ಟಿದ್ದು, ಜಿಲ್ಲೆಯಲ್ಲಿ ಪಾದಯಾತ್ರೆ ಸಮಯದಲ್ಲಿ ನೈರ್ಮಲ್ಯತೆ, ಬಡತನದ ಶಿಕ್ಷಣ, ನಿರುದ್ಯೋಗ, ರೈತರ ಸಮಸ್ಯೆಗಳು ಹಾಗೂ ಬರಗಾಲದಿಂದ ತತ್ತರಿಸಿರುವ ರೈತರು ಮತ್ತು ಜನರ ಸ್ಥಿತಿ-ಗತಿಗಳು ನೋಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪದವಿ ಪಡೆದಿದ್ದರೂ, ನಿರುದ್ಯೋಗ  ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಹಾಲಿ ಸಂಸದರು ಬರಗಾಲ ಪರಿಸ್ಥಿತಿಯಲ್ಲಿಯೂ ಜನರ ಬಳಿ ಬಂದಿಲ್ಲ. ಜನರ ಸಮಸ್ಯೆ ಕೇಳಿಲ್ಲ ಎಂದು ಪ್ರತಿ ಗ್ರಾಮಗಳಲ್ಲಿಯೂ ಜನರು ಹೇಳುವುದು ಕೇಳಿಸಿಕೊಳ್ಳುತ್ತಿದ್ದೇನೆ.

ಪರೋಕ್ಷವಾಗಿ ಸಚಿವರಿಗೆ ಟಾಂಗ್  ಕೊಟ್ರಾ ವಿನಯ್ ಕುಮಾರ್

ಚುನಾವಣೆ ಬಂದಾಗ ಮಾತ್ರ ಪ್ರಜಾಪ್ರಭುತ್ವ, ಚುನಾವಣೆ ಮುಗಿದಾಗ ಜನರ ಸಮಸ್ಯೆಗಳಿಗೆ ಪ್ರಜಾಪ್ರಭುತ್ವ ಇರುವುದಿಲ್ಲ. ದುಡ್ಡಿನ ಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೈಯಲ್ಲಿ ಹಿಡಿಯಲು ಹಂಬಲಿಸುತ್ತಿದ್ದಾರೆ. ಇದಕ್ಕೆ ಜನರು ಪ್ರಜ್ಞಾವಂತರಾಗಬೇಕು. ಸಮಾಜ ಜೀವಂತವಾಗಿದೆ,  ಶಿಕ್ಷಣ ಮೊದಲ ಅದ್ಯತೆ ನನ್ನದಾಗಿದೆ, ಕುಡಿಯಲು ನೀರು, ರೈತರಿಗೆ ನಿರಾವರಿ, ಯುವಕರಿಗೆ ಉದ್ಯೋಗಕ್ಕೆ ಅದ್ಯತೆ ನೀಡುತ್ತೇನೆ, ನಿಮ್ಮ ನಿರೀಕ್ಷೆಗಳನ್ನು ಈಡೇರಿಸಲು ಒಂದು ಅವಕಾಶ ನೀಡಿ, ನಮ್ಮ ಇನ್‌ಸೈಟ್ ತರಬೇತಿ ಸಂಸ್ಥೆಗೆ 10 ವರ್ಷ ತುಂಬಿರುವುದು 450 ಜನರ ಶ್ರಮದಿಂದ ಸಾರ್ಥಕ ಯಶಸ್ಸನ್ನು ತಂದಿದೆ. ದೇಶದಲ್ಲಿಯೇ 3ನೇ ಸ್ಥಾನ ಹೊಂದಿದೆ, ಕಾಶ್ಮಿರದಲ್ಲಿ ಸ್ಥಾಪನೆಗೆ ನನ್ನ ಸ್ನೇಹಿತ ಶರತ್ ರವರ ಕೊಡುಗೆ ತುಂಬಾ ಇದೆ ಎಂದು ಹೇಳಿದರು.

540 ಕಿ.ಮೀ.ಪಾದಯಾತ್ರೆ

ಗ್ರಾಮದ ಕಾಂಗ್ರೇಸ್ ಮುಖಂಡ ಎಂ.ಸಿದ್ದಪ್ಪ ಮಾತನಾಡಿ,  ವಿನಯ್ ರವರು ಜಿಲ್ಲೆಯ ಜಗಳೂರು, ಹರಪನಹಳ್ಳಿ, ಹೊನ್ನಾಳಿ ತಾಲ್ಲೂಕುಗಳಲ್ಲಿ 540 ಕಿ.ಮೀ. ಪಾದಯಾತ್ರೆ ಮಾಡಿ ಜನರ ಸಮಸ್ಯೆ ಆಲಿಸಿ ಕಟ್ಟ ಕಡೆಯ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ.  ಇವರ ಸೇವೆ, ಸಾಮಾಜಿಕ ಕಾಳಜಿ, ಭವಿಷ್ಯದ ಕನಸು ಮತ್ತು ಹೋರಾಟವನ್ನು ಗಮನಿಸಿ ಲೋಕಸಭೆ ಟೀಕೆಟ್‌ನ್ನು ಮಾನ್ಯ ಸಿದ್ದರಾಮಯ್ಯ, ಶಿವಕುಮಾರ್ ರವರು ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಕೊಡಿ ಉಮ್ಮೇಶ್, ಶರತ್, ಇರ್ಪಾನ್, ಗೌಡ್ರುಸ್ವಾಮಿ, ಶೇರ್‌ಅಲಿ, ವಿಜಯ್ ಗುಜ್ಜರ್, ಬಾಲು, ರಘು ದೊಡ್ಮನಿ, ಸದ್ದಂ, ನಯಾಜ್, ರುದ್ರೇಶ್  ಇದ್ದರು.

Share.
Leave A Reply

Exit mobile version