ದಾವಣಗೆರೆ: ದೊಡ್ಡ ಕಾರ್ಯಕ್ರಮ ಆಯೋಜಿಸಿ ನನ್ನ ಜನ್ಮದಿನ ಆಚರಿಸಿದ್ದಾರೆ. ನನಗೆ ಬಹಳ ಆಶ್ಚರ್ಯ ತಂದಿದೆ. ರಾಜಕೀಯವಾಗಿ ನಾನೇನು ಬಾರೀ ಕೆಲಸ ಮಾಡಿದವನಲ್ಲ.ಜನ ಬಿಜೆಪಿ ಇಷ್ಟಪಟ್ಟು ಬೆಳೆಸಿದರು ಜೊತೆಗೆ ನಾನು ಸಹ ಬೆಳೆದೆ ಎಂದು ಮಾಜಿ ಸಚಿವರಾದ ಎಸ್ ಎ ರವೀಂದ್ರನಾಥ್ ಭಾವುಕರಾದರು.
ಶ್ರೀ, ಸೋಮೇಶ್ವರ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಎಸ್.ಎ. ರವೀಂದ್ರನಾಥ್ ಅಭಿಮಾನಿಗಳ ಬಳಗದ ವತಿಯಿಂದ ನಗರದ ಹದಡಿ ರಸ್ತೆಯಲ್ಲಿರುವ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಆಯೋಜಿಸಿದ್ದ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ರವರ ಜನ್ಮದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ದೇಶಪ್ರೇಮವನ್ನು ಪ್ರಚುರಪಡಿಸುವ ‘ವೀರಭಾರತಿ’ ನೃತ್ಯರೂಪಕ ಪ್ರದರ್ಶನ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಜನ ಬೆಂಬಲಿಸಿದ ಕಾರಣ ಗೆಲುವು ಪಡೆಯಲು ಸಾಧ್ಯವಾಗಿತ್ತು. ವಿಶೇಷ ಕೆಲಸ ಮಾಡಿದವನಲ್ಲ ನಾನು ಆದರೆ ಸರ್ಕಾರದ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸಿದ್ದೇನೆ ಎಂದರು.
.ಪಕ್ಷ ಬೆಳೆಯಲು ಸಾಕಷ್ಟು ಶ್ರಮಪಟ್ಟಿದ್ದೇನೆ, ಕಸಗುಡಿಸಿ, ರಂಗೋಲಿ ಹಾಕಿದ್ದೇನೆ
ದಾವಣಗೆರೆಯಲ್ಲಿ ಪಕ್ಷ ಬೆಳೆಯಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಪಕ್ಷದ ಕಚೇರಿಯ ಕಸಗುಡಿಸಿ ಸಾರಿಸಿ ರಂಗೋಲಿ ಸಹ ಹಾಕಿ ಪಕ್ಷ ಬೆಳೆಸಿದ್ದೇನೆ ಎಂದು ತಮ್ಮ ದಿನಗಳನ್ನು ಸ್ಮರಿಸಿಕೊಂಡರು. ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಬೇಕೆಂಬ ನನ್ನ ಚಿಂತನೆಗೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.ಪಕ್ಷ ಬೆಳೆಸಲು ನನ್ನ ಕೆಲಸ ನಾನುಮಾಡುತ್ತೇನೆ. ಅದೇ ರೀತಿ ಎಲ್ಲರೂ ಪಕ್ಷಕ್ಕಾಗಿ ದುಡಿಯೋಣ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಇಂತಹ ವೀರಭಾರತಿ ನೃತ್ಯ ರೂಪಕ ನೋಡಬೇಕು. ದೇಶಪ್ರೇಮದ ವಿಶೇಷತೆ ನೃತ್ಯ ರೂಪಕದಲ್ಲಿದೆ. ಇಂತಹ ಕಾರ್ಯಕ್ರಮ ಆಯೋಜಿಸಿದ ಕೆ.ಎಂ ಸುರೇಶ್ ಅವರ ಕಾರ್ಯ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು.
ದೇಶ ಪ್ರೇಮದ ಕಿಚ್ಚು ಹಚ್ಚುವ ವೀರಭಾರತಿ ನೃತ್ಯರೂಪಕ
ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ದೇಶಪ್ರೇಮದ ಕಿಚ್ಚು ಹಚ್ಚುವ ವೀರಭಾರತಿಯಂತಹ ನೃತ್ಯ ರೂಪಕ ಆಯೋಜಿಸಿರುವುದು ಉತ್ತಮ ಕಾರ್ಯ.ಕಾರ್ಯಕ್ರಮಕ್ಕೆ ಆಗಮಿಸುವುದು ತಡವಾಗಿದೆ. ಕಾರಣ ಹರಿಹರದಲ್ಲಿ ಸಮಾರಂಭ ಮುಗಿಸಿ ಬರುವಲ್ಲಿ ತಡವಾಯಿತು. ಆದರೆ ಕೆ.ಎಂ ಸುರೇಶ್ ಅವರು ಹೇಳಿದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆಯೋಜಿಸಿ ಶಿಸ್ತುಬದ್ದತೆ ತೋರಿದ್ದಾರೆ ಎಂದರು
ರವೀಂದ್ರನಾಥ್ ಸರಳ ಸಜ್ಜನಿಕೆ ವ್ಯಕ್ತಿ
ಮಾಜಿ ಮುಖ್ಯಸಚೇತಕ ಡಾ.ಎ.ಹೆಚ್ ಶಿವಯೋಗಿ ಸ್ವಾಮಿ ಮಾತನಾಡಿ, ಸರಳ ಸಜ್ಜನಿಕೆಯ ವ್ಯಕ್ತಿ ಎಸ್ ಎ ರವೀಂದ್ರನಾಥ್. ಅವರು ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಅವರ ಜನ್ಮದಿನ ಆಚರಣೆ ಮಾಡುತ್ತಿರುವುದು ನಮ್ಮ ಸುದೈವ. ಒಂದು ಸಂಸ್ಥೆ ಅರ್ಥಪೂರ್ಣವಾಗಿ ಮುಖಂಡರೊಬ್ಬರ ಜನ್ಮದಿನ ಆಚರಣೆ ಮಾಡಬಹುದು ಎಂದು ತೋರಿಸಿಕೊಟ್ಟವರು ಕೆ.ಎಂ ಸುರೇಶ್.
ನ.೨೬ ಸಂವಿಧಾನ ಸಂಸ್ಥಾಪನಾ ದಿನಾಚರಣೆ ಇಂದು ಎಸ್ ಎ ರವೀಂದ್ರನಾಥ್ ಅವರ ಜನ್ಮದಿನವನ್ನು ವೀರ ಭಾರತೀಯ ನೃತ್ಯ ರೂಪಕದ ಮೂಲಕ ಆಯೋಜನೆ ಮಾಡಿರುವುದು ಉತ್ತಮ. ಕೆ.ಎಂ ಸುರೇಶ್ ಅವರ ತಂಡದ ಶ್ರಮಕ್ಕೆ ನಮ್ಮ ಅಭಿನಂದನೆಗಳು ಎಂದರು.
ಈ ವೇಳೆ ಹಲವು ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಗುರುಸಿದ್ದನಗೌಡ, ರಾಜನಹಳ್ಳಿ ಶಿವಕುಮಾರ್, ಕೆ.ಎಂ.ವೀರೇಶ್, ಕೆ.ಬಿ.ಕೊಟ್ರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.