ದಾವಣಗೆರೆ ವಿಜಯ : ನಿಮ್ಮ ಫೋನ್ ನ್ನು ಯಾರಾದರೂ ಚೆಕ್ ಮಾಡುತ್ತಿದ್ದರೇ ಅಥವಾ ಅವರು ನಿಮ್ಮ ಫೋನ್ ಬಳಸುತ್ತಿದ್ದು, ನಿಮ್ಮ ಆಪ್ತರಿಗೆ ಮಾಡಿರುವ ಮೆಸೆಜ್ ನ್ನು ನೋಡಲು ಇನ್ಮುಂದೆ ಹಾಗೆ ಆಗುವುದಿಲ್ಲ.

ಹೌದು…ವಾಟ್ಸ್ ಅಪ್ ಹೊಸ ಪ್ಯೂಚರ್ ನ್ನು ಪರಿಚಿಯಿಸಿದ್ದು, ನೀವು ಮಾಡಿರುವ ಮೆಸೆಜ್ ನ್ನು ಇತರರಿಗೆ ಕಾಣಿಸದಂತೆ ಮಾಡಿಕೊಳ್ಳಬಹುದು. 

ಮೆಟಾ ಮಾಲೀಕತ್ವದ ವಾಟ್ಸಪ್  ಈ ಆ್ಯಪ್​ ನಿರಂತರವಾಗಿ ಒಂದಿಲ್ಲೊಂದು ಹೊಸ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಿದ್ದು, ಈಗ ವಾಟ್ಸ್ ಅಪ್ ನಲ್ಲಿ ಚಾಟ್ ಮಾಡಿದ ಮೆಸೆಜ್ ನ್ನು ಲಾಕ್ ಮಾಡಬಹುದಾಗಿದೆ.ಇದರಿಂದ  ಸೀಕ್ರೇಟ್ ಚಾಟ್ಗಳು ಕಾಣಿಸುವುದಿಲ್ಲ.

ಈ ಸೀಕ್ರೆಟ್ ಕೋಡ್ ವೈಶಿಷ್ಟ್ಯವನ್ನು ವಾಟ್ಸ್ ಆಪ್ ಪರಿಚಯಿಸಿದೆ. ಬೇರೆಯವರು ನೋಡಬಾರದಂಥ ಸೂಕ್ಷ್ಮ ಚಾಟ್ ಗಳನ್ನು ಗುಪ್ತವಾಗಿ ಇಡಲು ಬಳಕೆದಾರರಿಗೆ ಈ ವೈಶಿಷ್ಟ್ಯ ಸಹಾಯ ಮಾಡುತ್ತದೆ.

ತನ್ನ ಬಳಕೆದಾರರಿಗೆ ಹೆಚ್ಚುವರಿ ಗೌಪ್ಯತೆ ಮತ್ತು ಭದ್ರತೆ ಒದಗಿಸಲು ಮುಂದಾಗಿರುವ ವಾಟ್ಸಪ್​, ಚಾಟ್ ಲಾಕ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಮೂಲಕ ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡಬಹುದಾಗಿದೆ.

ವಾಟ್ಸ್ ಅಪ್ ಚಾಟ್ ಲಾಕ್ ಮಾಡುವುದು ಹೇಗೆ?

ಮೊದಲಿಗೆ ಪ್ಲೇ ಸ್ಟೋರ್ ಗೆ ಹೋಗಿ ವಾಟ್ಸಪ್​ ನ್ನು ಅಪ್​ಡೇಟ್​ ಮಾಡಬೇಕು. ನಂತರ ಚಾಟ್‌ಗಳನ್ನು ಲಾಕ್ ಮಾಡಲು ವಾಟ್ಸಾಪ್ ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗ ಓಪನ್​ ಮಾಡಬೇಕು. ಇಲ್ಲಿ ಕೆಳಗೆ ಸ್ಕ್ರೋಲ್​ ಮಾಡಿದಾಗ ಚಾಟ್ ಲಾಕ್ ಫೀಚರ್​ ಕಾಣಿಸುತ್ತದೆ. 

ಇದನ್ನು ಟ್ಯಾಪ್ ಮಾಡಿದರೆ ಲಾಕ್ ದಿಸ್ ಚಾಟ್ ವಿತ್ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಆಕ್ಟೀವ್​ ಮಾಡಬೇಕು.

ಫಿಂಗರ್‌ಪ್ರಿಂಟ್‌, ಪಾಸ್​ ಕೋಡ್​ ಅಥವಾ ಫೇಸ್​ ಐಡಿಯೊಂದಿಗೂ ಚಾಟ್ ಅನ್ನು ಲಾಕ್ ಮಾಡಬಹುದು.

ಲಾಕ್ ಮಾಡಿದ ಚಾಟ್‌ಗಳು ಎಂಬ ಫೋಲ್ಡರ್‌ನಲ್ಲಿ ಎಲ್ಲಾ ಚಾಟ್​​ಗಳು ಗೌಪ್ಯವಾಗಿ ಇರಲಿವೆ. ಚಾಟ್​​ಗಳನ್ನು ನೋಡಬೇಕೆಂದರೆ ಅದಕ್ಕೆ ಟ್ಯಾಪ್​ ಮಾಡಿದರೆ ಸಾಕು.

ಮೆಸೇಜ್​ಗಳನ್ನು ಪಾಸ್‌ವರ್ಡ್ ಸಂರಕ್ಷಿತ ಫೋಲ್ಡರ್‌ನಲ್ಲಿ ಮರೆ ಮಾಡಬಹುದು. ಆಗ ಅಧಿಸೂಚನೆಗಳು ಕಳುಹಿಸುವವರ ಅಥವಾ ಸಂದೇಶದ ವಿಷಯವು ಡಿಸ್​​ಪ್ಲೇ ಆಗುವುದಿಲ್ಲ. ಇನ್ನು ಈ ಲಾಕ್ ಓಪನ್ ಮಾಡಲು ಮತ್ತೆ ಫಿಂಗರ್ ಪ್ರಿಂಟ್ ಮೂಲಕವೇ ಓಪನ್ ಮಾಡಬೇಕುಮ

.

 

Share.
Leave A Reply

Exit mobile version