ಚಿತ್ರದುರ್ಗ: ಚಲನ ಚಿತ್ರದಲ್ಲಿ ಇನ್ನೇನೂ ವಧುವಿಗೆ ತಾಳಿಕಟ್ಟಬೇಕು, ಅಷ್ಟರಲ್ಲಿ ವಧು ಓಡಿಹೋಗಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಇನ್ನೇನೂ ಮುಹೂರ್ತಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ವಧು ವರನ ಬಳಿ ತಾಳಿ ಕಟ್ಟಿಸಿಕೊಳ್ಳಲು ಹಿಂದೇಟು ಹಾಕಿದ್ದಾಳೆ. ಪರಿಣಾಮ ತಾಳಿಕಟ್ಟಲು ಹೋಗಿದ್ದ ವರ ಕಕ್ಕಾಬಿಕ್ಕಿಯಾಗಿದ್ದಾನೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದ ಕೆರೆಯಲ್ಲಿ ಈ ಘಟನೆ ನಡೆದಿದೆ. ತಾಳಿ ಕಟ್ಟಲು ರೆಡಿಯಾಗಿದ್ದ ವರನಿಗೆ ವಧು ಶಾಕ್ ನೀಡಿದ್ದು, ಯುವಕ ಕೊನೆ ಕ್ಷಣದ ಘಟನೆ ಕಂಡು ಮೌನಕ್ಕೆ ಶರಣಾಗಿದ್ದಾನೆ.
ಮಂಜುನಾಥ್ & ಐಶ್ವರ್ಯ ಎಂಬುವರ ವಿವಾಹ ನಿಶ್ಚಿಯವಾಗಿದ್ದು, ಎಲ್ಲವೂ ಸುಸೂತ್ರವಾಗಿ ನಡೆದಿತ್ತು. ಲಗ್ನ ಪತ್ರಿಕೆಯೂ ಸಿದ್ದವಾಗಿ, ನೆಂಟರಿಷ್ಟರಿಗೆ, ಸಂಬಂಧಿಗಳಿಗೆ ಎಲ್ಲರಿಗೂ ಹಂಚಲಾಗಿತ್ತು. ಅಲ್ಲದೇ ಬಟ್ಟೆ, ಬರೆ, ಬಂಗಾರ ಅಡುಗೆ, ಸಾಂಪ್ರಾದಾಯಿಕ ಉಡುಗೆ, ತೊಡುಗೆಗಳು ಸಿದ್ದವಾಗಿದ್ದವು. ಪುರೋಹಿತರು, ವಾಲಗದವರು ಗಟ್ಟಿ, ಗಟ್ಟಿ ಮೇಳ ಎನ್ನುವಷ್ಟರಲ್ಲಿ ವಧು ತಾಳಿ ಕಟ್ಟಿಸಿಕೊಳ್ಳಲಿಲ್ಲ. ಈ ಸಂದರ್ಭದಲ್ಲಿ ತಾಳಿ ಕಟ್ಟಲು ಸಜ್ಜಾದ ವರನಿಗೆ ಕಟ್ಟದಂತೆ ವಧು ತಡೆದಳು.
ಮದುವೆ ಕ್ಯಾನ್ಸಲ್
ಹೊಸದುರ್ಗ ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಚಳ್ಳಕೆರೆಯ ತಿಪ್ಪರೆಡ್ಡಿಹಳ್ಳಿ ಐಶ್ವರ್ಯ ಮದುವೆ ಇದಾಗಿದ್ದು, ವಧು ತಾಳಿ ಕಟ್ಟಿಸಿಕೊಳ್ಳದ ಹಿನ್ನೆಲೆ ಮದುವೆ ಕ್ಯಾನ್ಸಲ್ ಆಯಿತು. ಮಂಜುನಾಥ್ ಇಷ್ಟ ಇಲ್ಲದ ಹಿನ್ನೆಲೆ ಮದುವೆಯನ್ನು ವಧು ಕ್ಯಾನ್ಸಲ್ ಮಾಡಿದಳು ಎಂಬ ಮಾಹಿತಿ ಇದೆ
ವಧು ಒಪ್ಪಿಸಲು ಹರಸಾಹಸ
ವಧುವನ್ನ ಮನವೊಲಿಸಲು ಸಂಬಂಧಿಕರ ಹರಸಾಹಸ ಪಟ್ಟರು. ಆದರೂ ವದು ಒಪ್ಪಲಿಲ್ಲ. ಸದ್ಯ ತಾಳಿಕಟ್ಟುವಾಗ ವದು ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ವೈರಲ್ ಆಗಿದೆ. ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು.ಈ ಸಂದರ್ಭದಲ್ಲಿ ಮುಹೂರ್ತ ಗಳಿಗೆಯಲ್ಲಿ ಯುವತಿ ಶಾಕ್ ನೀಡಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಡು-ಹೆಣ್ಣಿನ ಕಡೆಯವರ ನಡುವೆ ವಾಗ್ವಾದ
ಮದುವೆ ನಡೆಯಲಿಲ್ಲವಾದ ಕಾರಣ ಯುವತಿ ಮನೆಯವರು- ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ. ತಾಳಿ ಕಟ್ಟಿಸಿಕೊಳ್ಳಲು ಯುವತಿ ನಿರಾಕರಣೆ ಮಾಡಿದ ಪರಿಣಾಮ ಮದುವರ ಮುರಿದು ಬಿದ್ದಿದೆ. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಧಾರೆ ಮುಹೂರ್ತದಲ್ಲಿ ಏನಾಯಿತು
ತಾಳಿ ಕಟ್ಟುವ ಶುಭ ವೇಳೆ ಮದುವೆ ಬೇಡ ಎಂದು ವಧು ಮೊದಲು ಕಿರಿಕ್ ತೆಗೆದಿದ್ದಾಳೆ. ಅಲ್ಲದೇ ಕಂಕಣ ಭಾಗ್ಯವನ್ನು ಬಲಗೈಯ್ಯಲ್ಲಿ ದೂಡಿದ್ದಾಳೆ. ಆದರೂ ತಾಳಿ ಕಟ್ಟಲು ಬಂದ ಯುವಕನ ಕೈಯನ್ನು ತಡೆದ ವಧು ತಾಳಿಯನ್ನೇ ದೂಡಿದಳು.
ವಧು ಹೇಳಿದ್ದೇನು
ನಾನಿನ್ನೂ ಓದಬೇಕು ನನಗೆ ಮದುವೆ ಬೇಡ ಎನ್ನುವ ಕಾರಣವನ್ನು ವಧು ಹೇಳಿದ್ದಾಳೆ. ಆರತಕ್ಷತೆಯ ವೇಳೆ ಚೆನ್ನಾಗಿಯೇ ವಧು ವರರು ಇದ್ದರುಮ ಆದರೆ ಮದುವೆ ದಿನ ತಾಳಿ ಕಟ್ಟಿಸಿಕೊಳ್ಳೋಕೆ ವಧು ನಿರಾಕರಿಸಿದಳು. ಡಿ. 6ನೇ ತಾರೀಕು ಆರತಕ್ಷತೆ ನಡೆದಿತ್ತು. ಡಿ. 7 ನೇ ತಾರೀಕು ವಿವಾಹ ನಡೆಯಬೇಕಿತ್ತು.