ಶಿವಮೊಗ್ಗ: ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೈಯಕ್ತಿಕ ದ್ವೇಷದಿಂದ ವ್ಯಕ್ತಿಯನ್ನು ಚಾಕುವಿನಿಂದ ಚುಚ್ಚಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಜೆಪಿ ನಗರ ನಿವಾಸಿ ರಾಜುನಾಯ್ಕ(30) ಕೊಲೆಯಾದ ವ್ಯಕ್ತಿಯಾಗಿದ್ದು, ಆಯನೂರು ಗೇಟ್ ಸಮೀಪದ ಸ್ಮಶಾನದಲ್ಲಿ ನಿನ್ನೆ ರಾತ್ರಿ ರಾಜುನಾಯ್ಕ್ ಹಾಗೂ ಸ್ನೇಹಿತ ವಿಕ್ರಂ ಇಬ್ಬರೂ ಪಾನಮತ್ತರಾಗಿ ಪರಸ್ಪರ ಜಗಳವಾಡಿದ್ದು, ಈ ವೇಳೆ ವಿಕ್ರಂ ರಾಜುವಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಈ ಸಂಬAಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.