ದಾವಣಗೆರೆ : ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರಿಗೆ ಶಾಕ್ ಮೇಲೆ ಶಾಕ್ ಎದುರಾಗ್ತಾಯಿದೆ. ಒಂದು ಕಡೆ ಬಿಜೆಪಿ ನಾಯಕರು ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್​ ನಾಯಕರನ್ನ ಯಾಮಾರಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾಯಿವೆ. 

ಮೊದ್ಲು 5 ರಿಂದ 6 ಸೀಟು ಕೊಡೋದಾಗಿ ಹೇಳಿದ್ರು. ಆನಂತರ 3ರಿಂದ 4 ಸೀಟು ಅಂತಿದ್ರು. ಇತ್ತೀಚೆಗೆ ಇಲ್ಲ, ಇಲ್ಲ, ಮೂರು ಸೀಟು ಪಕ್ಕಾ ಅಂತಿದ್ರು. ಆದ್ರೆ ಮೊನ್ನೆ ಹೆಚ್​ಡಿ ಕುಮಾರಸ್ವಾಮಿಯವರೇ ಹೇಳಿದಂತೆ ಎರಡು ಸೀಟು ಕೊಡೋದಾದ್ರೆ ಇದಕ್ಕೆ ದೋಸ್ತಿ ಯಾಕೆ ಬೇಕು ಅನ್ನೋ ಅರ್ಥದಲ್ಲಿ ಮಾತಾಡಿದ್ರು. 

ಇನ್ನ ಇದೆಲ್ಲದ್ರ ಮಧ್ಯೆ ಮಂಡ್ಯ ಜೆಡಿಎಸ್​​​ಗೆ ಅನ್ನೋ ಅತಿಯಾದ ಆತ್ಮವಿಶ್ವಾಸದಲ್ಲಿ ಜೆಡಿಎಸ್ ನಾಯಕರು ಇದ್ಧಾರೆ. ಇದೇ ಕಾರಣಕ್ಕೆ ಇತ್ತೀಚೆಗೆ ಮಂಡ್ಯದಲ್ಲಿ ಸಮಾರಂಭ ನಡೆಸಿದ್ರು. ಮಂಡ್ಯದಿಂದ ನಿಖಿಲ್ ನಿಲ್ತಾರಾ.? ಇಲ್ಲ, ಹೆಚ್​ಡಿಕೆ ನಿಲ್ತಾರಾ ಅನ್ನೋ ಬಗ್ಗೆ ಬಾರಿ ಚರ್ಚೆ ಆಗ್ತಾಯಿತ್ತು. ಆದ್ರೀಗ ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೇ ಕಳೆದ ಮೂರು ದಿನಗಳಲ್ಲಿ ದಿಲ್ಲಿಯಲ್ಲಿ ಬಿಜೆಪಿ ವರಿಷ್ಟರ ಜೊತೆ ಚರ್ಚೆ ನಡೆಸಿ ವಾಪಸ್ ಆಗಿರೋ ಸುಮಲತಾ ಮಂಡ್ಯ ಬಿಟ್ಟುಕೊಡೋ ಮಾತೇ ಇಲ್ಲ ಅಂತಿದ್ದಾರೆ. ಹಾಗಾದ್ರೆ ಜೆಡಿಎಸ್​​ ಎಕ್ಸ್​​ಪೆಕ್ಟ್ ಮಾಡಿದ್ದು ಯಾವುದೂ ಬಿಜೆಪಿಯಿಂದ ಸಿಕ್ತಾಯಿಲ್ವಾ.? ಬಿಜೆಪಿ ಮತ್ತು ಜೆಡಿಎಸ್​​ ನಡುವಿನ ಹೊಂದಾಣಿಕೆ ಬಗ್ಗೆ ರಾಜ್ಯ ಕಾಂಗ್ರೆಸ್​​ ಮಾಡಿರೋ ಆ ಟೀಕೆ ಹೇಗಿದೆ ಗೊತ್ತಾ?

ಜೆಡಿಎಸ್.. ಜಾತ್ಯಾತೀತ ಜನತಾ ದಳ. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿಕೇವಲ 19 ಸೀಟು ಗೆದ್ದಿದ್ದ ಜೆಡಿಎಸ್​ ಅಸ್ತಿತ್ವ ಉಳಿಸಿಕೊಳ್ಳೋದಕ್ಕೆ ಪರದಾಡುತ್ತಿತ್ತು. ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್​​ ಪಕ್ಷ 135 ಸೀಟುಗಳನ್ನ ಗೆದ್ದು ಸಿದ್ರಾಮಯ್ಯ ಸಿಎಂ ಆಗಿರೋದು ದಳಪತಿಗಳಿಗೆ ಅರಗಿಸಿಕೊಳ್ಳೋಕೆ ಆಗಿರ್ಲಿಲ್ಲ. 

ಹೀಗಾಗಿ ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳೋದಕ್ಕೆ ವಿಧಿಯಿಲ್ಲದೆ ಬಿಜೆಪಿ ಜೊತೆ ಲೋಕಸಭಾ ಚುನಾವಣಾ ದೋಸ್ತಿಗೆ ಮುಂದಾಗಿದ್ದಾರೆ. ಆದ್ರೆ ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ ಜೆಡಿಎಸ್​​ಗೆ ಬಿಜೆಪಿಯ ದೋಸ್ತಿ ಅನಿವಾರ್ಯವೇ ವಿನಃ, ಬಿಜೆಪಿಗೆ ಜೆಡಿಎಸ್​​ನ ದೋಸ್ತಿ ಅನಿವಾರ್ಯ ಅಲ್ಲ. ಹೀಗಾಗಿನೇ ಲೋಕಸಭಾ ಚುನಾವಣೆ ಘೋಷಣೆಯಾದ್ರೂ ಸೀಟು ಹಂಚಿಕೆ ಕಗ್ಗಟ್ಟು ಮಾತ್ರ ಇನ್ನೂ ಈಡೇರಿಲ್ಲ ಎನ್ನಲಾಗುತ್ತಿದೆ. 

ಅಷ್ಟೇ ಅಲ್ಲ, ಮಂಡ್ಯ ಕ್ಷೇತ್ರವನ್ನ ತಮಗೆ ಬಿಟ್ಟುಕೊಡ್ತಾರೆ ಅಂತೇಳಿ ದಳಪತಿಗಳು ಅತಿಯಾದ ಆತ್ಮವಿಶ್ವಾಸವನ್ನ ಹೊಂದಿದ್ದಾರೆ. ಆದ್ರೆ ಕಳೆದ 3 ದಿನಗಳಿಂದ ದಿಲ್ಲಿಯಲ್ಲಿ ಬಿಜೆಪಿ ವರಿಷ್ಟರ ಜೊತೆ ಚರ್ಚೆ ನಡೆಸಿರೋ ಸುಮಲತಾ ಅವರ ಮಾತುಗಳನ್ನ ನೋಡಿದ್ರೆ ಮಂಡ್ಯ ಕ್ಷೇತ್ರ ಜೆಡಿಎಸ್​​​ಗೆ ಸಿಗೋದು ಅನುಮಾನ ಎನ್ನಲಾಗುತ್ತಿದೆ. ಅಷ್ಟಕ್ಕೂ ಸುಮಲತಾ ಅಂಬರೀಷ್ ಅವರು ಹೇಳಿದ್ದೇನು ಗೊತ್ತಾ?ಇಷ್ಟೇ ಅಲ್ಲ., ಸುಮಲತಾ ಅವರು ಈಗ್ಲೂ ತಮಗೆ ಬಿಜೆಪಿ ಮಂಡ್ಯ ಟಿಕೆಟ್ ಸಿಗುತ್ತೆ. ನಾನ್ಯಾಕೆ ಚಿಕ್ಕಬಳ್ಳಾಪುರಕ್ಕೆ ಹೋಗ್ಲಿ.. ಆ ಥರ ನ್ಯೂಸ್ ಬರ್ತಾಯಿದೆ. ಆದ್ರೆ ನಾನು ಬೆಂಗಳೂರು ಉತ್ತರದಲ್ಲೇ ನಿಲ್ಲಲ್ಲ ಅಂತೇಳಿದ್ದೆ. ಅಂಥದ್ರಲ್ಲಿ ಚಿಕ್ಕಬಳ್ಳಾಪುರಕ್ಕೆ ಯಾಕೆ ಹೋಗ್ಲಿ ಅಂತಿದ್ದಾರೆ. 

ಸುಮಲತಾ ಅವರು ಹೇಳೋದನ್ನ ನೋಡ್ತಾಯಿದ್ರೆ ಬಿಜೆಪಿ ನಾಯಕರು ಮಂಡ್ಯದಿಂದ ಸುಮಲತಾ ಅವರಿಗೆ ಟಿಕೆಟ್ ಕೊಡೋದು ಪಕ್ಕಾ ಅನ್ನೋ ರೀತಿ ಇದೆ. ಆದ್ರೆ ಈ ಅಂತೆ ಕಂತೆಗಳಿಗೆ ಇಂದು ಒಂದು ಕ್ಲಾರಿಟಿ ಸಿಗೋದು ಗ್ಯಾರಂಟಿ. ಒಂದೊಮ್ಮೆ ಬಿಜೆಪಿ ಮಂಡ್ಯ ಕ್ಷೇತ್ರವನ್ನ ಜೆಡಿಎಸ್​​ಗೆ ಬಿಟ್ಟುಕೊಡದೇ ಕೇವಲ ಹಾಸನ ಮತ್ತು ಕೋಲಾರ ಕ್ಷೇತ್ರಗಳನ್ನ ಬಿಟ್ಟುಕೊಟ್ಟಿದ್ದೇ ಆದ್ರೆ ದಳಪತಿಗಳು ದೋಸ್ತಿಯನ್ನ ಮುರಿದುಕೊಳ್ಳೋ ಸಾಧ್ಯತೆ ಇದೆ..ಇದೇ ಕಾರಣಕ್ಕೆ ಇತ್ತೀಚೆಗೆ ಕುಮಾರಸ್ವಾಮಿ 2 ಕ್ಷೇತ್ರಗಳನ್ನ ಪಡೆದುಕೊಳ್ಳೋದಕ್ಕೆ ದೋಸ್ತಿ ಬೇಕಿತ್ತಾ ಅಂತೇಳಿರೋದು ಅನ್ನೋ ಮಾತುಗಳೂ ಇವೆ. ಈಗ ಬಗ್ಗೆ ಟ್ವೀಟ್ ಮಾಡಿರೋ ರಿಯಾಕ್ಟ್ ಮಾಡಿರೋ ರಾಜ್ಯ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಮೈತ್ರಿ ಎನ್ನುವುದು ಒಲ್ಲದ ಸಂಸಾರದಲ್ಲಿ ಸಾಮರಸ್ಯದ ನಾಟಕದಂತಿದೆ! ಬಿಜೆಪಿ ಮೊದಲ ಪಟ್ಟಿಯ ಟಿಕೆಟ್ ಘೋಷಣೆಯಲ್ಲಿ ಜೆಡಿಎಸ್ ನಾಯಕರಲ್ಲಿ ಕನಿಷ್ಠ ಸಲಹೆಯನ್ನೂ ಪಡೆಯಲಿಲ್ಲ, ಕೇವಲ 2,3 ಕ್ಷೇತ್ರಕ್ಕಾಗಿ ಬಿಜೆಪಿ ಎದುರು ಗೋಗರೆದು ನಿಲ್ಲುವ ಸ್ಥಿತಿ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಬರಬಾರದಿತ್ತು! ಇಂತಹ ಗುಲಾಮಗಿರಿಯ ಮೈತ್ರಿಯ ಬದಲು ರಾಜಕೀಯ ನಿವೃತ್ತಿಯೇ ಹೆಚ್ಚು ಗೌರವಯುತವಾದುದು ಎಂದು ಕುಮಾರಸ್ವಾಮಿಯವರಿಗೆ ಸದ್ಯದಲ್ಲೇ ಜ್ಞಾನೋದಯವಾಗಲಿದೆ!’ ಅಂತೇಳಿ ಜೆಡಿಎಸ್ & ಬಿಜೆಪಿ ನಾಯಕರನ್ನ ರಾಜ್ಯ ಕಾಂಗ್ರೆಸ್​​ ಕೆಣಕಿದೆ.

ಹಾಗೇ ಮತ್ತೊಂದು ಟ್ವೀಟ್‌ನಲ್ಲಿ ಜೆಡಿಎಸ್ & ಬಿಜೆಪಿ ನಾಯಕರನ್ನು ಅಣಕಿಸಿರುವ ಕಾಂಗ್ರೆಸ್ ‘”ನಾವೇನು 5,6 ಸೀಟು ಕೇಳುತ್ತಿದ್ದೇವಾ, 3 ಕ್ಷೇತ್ರ ಕೇಳುತ್ತಿದ್ದೇವೆ ಅಷ್ಟೇ, 2 ಕ್ಷೇತ್ರ ಪಡೆಯುವುದಕ್ಕೆ ಬಿಜೆಪಿಯವರ ಹತ್ತಿರ ಬರಬೇಕಿತ್ತಾ” ಎಂದು ಕುಮಾರಸ್ವಾಮಿಯವರು ಗೋಳಾಡುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೆ ಮಾತ್ರ ಕ್ಷೇತ್ರ ಭದ್ರಪಡಿಸಿಕೊಳ್ಳಲು ಹೋರಾಡುತ್ತಿರುವ ಹೆಚ್​ಡಿ ಕುಮಾರಸ್ವಾಮಿಯವರು ತಮ್ಮ ಪಕ್ಷದ ಇತರ ನಾಯಕರ ಕುರಿತು ಯೋಚಿಸುವುದುಂಟೇ! ಇವರು ಕೇಳುತ್ತಿರುವ 3 ಕ್ಷೇತ್ರ ತಮ್ಮ ಫ್ಯಾಮಿಲಿಗೆ ಮಾತ್ರ, ಕಾರ್ಯಕರ್ತರು, ಇತರ ನಾಯಕರು ರಾಜಕೀಯ ಸನ್ಯಾಸ ಸ್ವೀಕರಿಸುವುದೇ ಉತ್ತಮ. ಜೆಡಿಎಸ್ ನಂಬಿಕೊಂಡಿರುವ ಕಾರ್ಯಕರ್ತರಿಗೆ ಯಾವುದೇ ರಾಜಕೀಯ ಭವಿಷ್ಯವಿಲ್ಲ ಎನ್ನುವುದು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಷ್ಟೇ ಸತ್ಯ. ಅಂತೇಳಿ ರಾಜ್ಯ ಕಾಂಗ್ರೆಸ್​ ಟ್ವೀಟ್ ಮಾಡಿದೆ.

ಹಾಗಾದ್ರೆ ಜೆಡಿಎಸ್​​ಗೆ ಮಂಡ್ಯ ಕ್ಷೇತ್ರ ಸಿಗಲ್ವಾ..? ಹಾಸನ, ಕೋಲಾರ ಎರಡು ಕ್ಷೇತ್ರಗಳನ್ನ ಮಾತ್ರವೇ ಜೆಡಿಎಸ್​​ಗೆ ಬಿಜೆಪಿ ಬಿಟ್ಟುಕೊಡುತ್ತಾ.? ಇಂಥ ಅವಮಾನದ ಮಧ್ಯೆಯೂ ಜೆಡಿಎಸ್ ದೋಸ್ತಿಯನ್ನ ಮುಂದುವರೆಸುತ್ತಾ.? ಅಥವಾ ಮುರಿದುಕೊಳ್ಳುತ್ತಾ? ಜೆಡಿಎಸ್​​​ಗೆ ಎದುರಾಗಿರೋ ಈ ದುಸ್ಥಿತಿಯ ಬಗ್ಗೆ ನೀವೇನಂತಿರಾ?…

Share.
Leave A Reply

Exit mobile version