ದಾವಣಗೆರೆ : ಹಲವು ಅಧಿಕಾರಿಗಳನ್ನು ಎಡೆಮುರಿಕಟ್ಟುತ್ತಿರುವ ದಾವಣಗೆರೆ ಎಸ್ಪಿ ಲೋಕಾಯುಕ್ತ ಕೌಲಾಪುರೆ ನೇತ್ವತ್ವದ ತಂಡ ಹರಿಹರ ನಗರಸಭೆ ಆಯುಕ್ತನನ್ನು ತನ್ನ ಬಲೆಗೆ ಬೀಳಿಸಿಕೊಂಡಿದೆ.
ಈ ಹಿಂದೆ ದಾವಣಗೆರೆ ಅಬಕಾರಿ ಡಿಸಿ ಸ್ವಪ್ನಾ , ಹರಿಹರದ ಅಬಕಾರಿ ಇನ್ಸ್ಪೇಕ್ಟರ್, ಹರಿಹರದ ಬಿಇಒ ಸಿದ್ದಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ ದಾವಣಗೆರೆ ಲೋಕಾಯಕ್ತ ಹರಿಹರ ನಗರಸಭೆ ಆಯಕ್ತರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಮೂಲಕ ಭ್ರಷ್ಟರಿಗೆ ಕಡಿವಾಣವನ್ನು ಹಾಕುವ ಮೂಲಕ ಲೋಕಾಯುಕ್ತ ಅಧಿಕಾರಿಗಳು ಬೆಕ್ಕಿಗೆ ಗಂಟೆ ಕಟ್ಟಿದ್ದಾರೆ.
ಸಾಮಾಗ್ರಿ ಸರಬರಾಜು ಗುತ್ತಿಗೆದಾರ ಕರಿಬಸಪ್ಪ ಎಂಬುವವರಿಂದ ಎರಡು ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿದ್ದರು. ಬಸವರಾಜ್ ಐಗೂರು ಎಂಬುವವರೇ ಲೋಕಾಯುಕ್ತ ಪೊಲೀಸ್ ದಾಳಿಗೆ ಬಲಿಯಾದ ನಗರಸಭೆ ಕಮಿಷನರ್ ಆಗಿದ್ದಾರೆ. ಹರಿಹರ ನಗರದ ವಿದ್ಯಾನಗರದಲ್ಲಿರುವ ವಾಸವಿದ್ದ ರೂಮಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಅತಿ ಹೆಚ್ಚು ಭ್ರಷ್ಟ ಅಧಿಕಾರಿಗಳು ಹರಿಹರದಲ್ಲಿದ್ದು, ಹಲವರನ್ನು ಲೋಕಾಯುಕ್ತ ತಂಡ ಎಡೆಮುರಿ ಕಟ್ಟಿದೆ.