ದಾವಣಗೆರೆ : ತುಂಗಾ ಭದ್ರಾ ಒಡಿಲಿನಲ್ಲಿರುವ ದಾವಣಗೆರೆಯಲ್ಲಿ ಹಣದ ಓಡಾಟ ಇದ್ದು, ಸಾಕಷ್ಟು ಹಣ ಕೊಟ್ಟು ಇಲ್ಲಿಗೆ ಅಧಿಕಾರಿಗಳು ಬರಲು ಕಾಯುತ್ತಿರುತ್ತಾರೆ. ಅದರಂತೆ ಕೊಟ್ಟ ಹಣವನ್ನು ವಾಪಸ್ ಪಡೆಯಲು ಲಂಚಕ್ಕೆ ಕೈ ಒಡ್ಡುತ್ತಾರೆ ಎಂಬ ಆರೋಪವಿದ್ದು, ಎರಡು ತಿಂಗಳಿನಲ್ಲಿ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಳೆದ ತಿಂಗಳು ಹಿಟ್ಟಿನ ಗಿರಣಿ ಮನೆಯ ಇ–ಸ್ವತ್ತು ಮಾಡಿಕೊಡಲು ರೂ. 15,000 ಲಂಚದ ಸ್ವೀಕರಿಸುತ್ತಿದ್ದಾಗ ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ (ಪ್ರಭಾರ) ಹಾಗೂ ಎಸ್ಡಿಎ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ (ಪ್ರಭಾರ) ಬಿ. ಅನ್ನಪೂರ್ಣಾ ಹಾಗೂ ಮಹಾನಗರ ಪಾಲಿಕೆ ವಲಯ–1ರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಲಕ್ಕಪ್ಪ ವೈ. ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ದಾವಣಗೆರೆ ನಗರದ ಬೇತೂರು ರಸ್ತೆಯ ಇಮಾಂ ನಗರದ 4ನೇ ಕ್ರಾಸ್ ನಿವಾಸಿ ಚಂದ್ರಶೇಖರ ಬಿ. ಅವರು ಹಿಟ್ಟಿನ ಗಿರಣಿ ಮನೆಯ ಇ–ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಇ–ಸ್ವತ್ತು ನೀಡಲು ರೂ. 15,000 ಲಂಚ ನೀಡುವಂತೆ ಲಕ್ಕಪ್ಪ ವೈ. ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಚಂದ್ರಶೇಖರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಯಾರು ಹರಿಹರದ ಭ್ರಷ್ಟ ಅಧಿ ಕಾರಿಗಳು
ದಾವಣಗೆರೆ ಅಬಕಾರಿ ಡಿಸಿ ಸ್ವಪ್ನಾ , ಹರಿಹರದ ಅಬಕಾರಿ ಇನ್ಸ್ಪೇಕ್ಟರ್, ಹರಿಹರದ ಬಿಇಒ ಸಿದ್ದಪ್ಪ ಈಗ ಹರಿಹರ ಆಯುಕ್ತ ದಾವಣಗೆರೆ ಲೋಕಾಯುಕ್ತ ಬಲೆಗೆ ಬಿದ್ದವರು. ಬೇರೆ ತಾಲೂಕಿಗೆ ಹೋಲಿಸಿದರೆ, ಹರಿಹರ ತಾಲೂಕಿನಲ್ಲಿಯೇ ಹೆಚ್ಚು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
25-30 ಲಕ್ಷ ಹಣ ಬಾಕಿಗೆ ಲಂಚ ಕೇಳಿದ್ದರು
ಕರಿಬಸಪ್ಪ ಎಂಬವವರು ಹರಿಹರ ನಗರಸಭೆ ವ್ಯಾಪ್ತಿಯ ವಾಟರ್ ಸಪ್ಲೈಗಳಿಗೆ ಸಾಮಾನು ಸರಬರಾಜು ಮಾಡಿದ್ದರು. ಅದರಂತೆ ನಗರಸಭೆಯಿಂದ 25-30 ಲಕ್ಷ ಹಣ ಬಾಕಿ ಇದ್ದು, ಇದನ್ನು ಮಂಜೂರು ಮಾಡಿಕೊಡಲು ಪೌರಾಯುಕ್ತ ಬಸವರಾಜ 2 ಲಕ್ಷ ಹಣಕ್ಕೆ ಬೇಡಿಕೆಯಿರಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಹರಿಹರೇಶ್ವರ ಬಡಾವಣೆಯಲ್ಲಿರುವ ತಮ್ಮ ರೂಮಿನಲ್ಲಿ ಹಣ ಪಡೆಯುವಾಗ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಹಾಗೂ ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಸೂರಿನ್, ಮಧುಸೂಧನ್, ಹೆಚ್.ಎಸ್.ರಾಷ್ಟ್ರಪತಿ ಹಾಗೂ ಸಿಬ್ಬಂದಿಗಳಾದ ಅಂಜನೇಯ್, ವೀರೇಶಯ್ಯ, ಸುಂದರೇಶ್, ಮಲ್ಲಿಕಾರ್ಜುನ್, ಲಿಂಗೇಶ್, ಧನರಾಜ್, ಮಂಜುನಾಥ, ಗಿರೀಶ್, ಕೋಟಿನಾಯ್ಕ್, ಬಸವರಾಜ್, ಮೋಹನ್, ಕೃಷ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
ದಾವಣಗೆರೆ ಬಂದ ಅಧಿಕಾರಿಗಳು ವಾಪಸ್ ಹೋಗಲು ಹಿಂದೇಟು
ದಾವಣಗೆರೆಗೆ ಬಂದ ಅಧಿಕಾರಿಗಳು ವಾಪಸ್ ಹೋಗಲು ಹಿಂದೇಟು ಹಾಕುವುದು ಮಾಮೂಲಾಗಿದೆ. ಅದಕ್ಕಾಗಿ ರಾಜಕಾರಣಿಗಳಿಗೆ ಹೆಚ್ಚು ಕೊಟ್ಟು ಹಣ ಕೊಡುವುದು ಮಾಮೂಲಾಗಿದೆ ಎಂಬ ಆರೋಪವಿದೆ
ಖಡಕ್ ಅಧಿಕಾರಿ ಕೌಲಾಪುರೆ
ಲೋಕಾಯುಕ್ತ ಎಸ್ಪಿ ಕೌಲಾಪುರೆ ಖಡಕ್ ಅಧಿಕಾರಿಯಾಗಿದ್ದು, ಸುಮಾರು 15 ಹೆಚ್ಚು ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಿದ್ದಾರೆ. ಈ ಮೂಲಕ ದಾವಣಗೆರೆಯಲ್ಲಿ ಒಂದಿಷ್ಟು ಭಯ ಮೂಡಿಸಿದ್ದಾರೆ. ಹರಿಹರದಲ್ಲಿಯೇ ಸುಮಾರು ಐದಕ್ಕೂ ಹೆಚ್ಚು ಅಧಿಕಾರಿಗಳು ಲೋಕಾಯುಕ್ತ ಕೌಲಾಪುರೆ ಬಲೆಗೆ ಬಿದ್ದಿದ್ದಾರೆ. ಒಟ್ಟಾರೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಕೌಲಾಪುರೇ ಬೆವರಿಳಿಸಿರುವುದು ಮಾತ್ರ ಸತ್ಯ.