ದಾವಣಗೆರೆ: ಹರಿಹರ ತಾಲೂಕಿನ ಶ್ರೀನಿವಾಸ ನಗರದಲ್ಲಿತುವ ಐಕಾಂತಿಕ ಬುಡಕಟ್ಟು ಸಮುದಾಯದಲ್ಲಿ ಜೂನ್ 2 ರಂದು‌ ಬೆಳಗ್ಗೆ 10. ರಿಂದ ಸಂಜೆ 5.30 ರವರೆಗೆ ಹಸಿರೋತ್ಸವ ಸಹಜ ಕೃಷಿ ಮತ್ತು ಸಹಜ ಜೀವನ ಕುರಿತು ಉತ್ಸವ ಆಯೋಜಿಸಲಾಗಿದೆ ಎಂದು‌ ಐಕಾಂತಿಕದ ರಾಘವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ರಾಣೆಬೆನ್ನೂರು ತಾಲ್ಲೂಕಿನ ಮುದೆನೂರು ಗ್ರಾಮದ ಬೀಜಮಾತೆ ಸುನೀತ ಶಂಕರಗೌಡ ದಂಪತಿ ಮತ್ತು ಹೋನ್ನಾಳ್ಳಿ ತಾಲ್ಲೂಕಿನ ಯರೆಹಳ್ಳಿ ಗ್ರಾಮದ .ಹನುಮಂತಪ್ಪ ದಂಪತಿ  ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ವಿವಿಧ ರೀತಿಯ ತರಕಾರಿ ತಳಿಗಳು, ಅಕ್ಕಿ, ಸಿರಿಧಾನ್ಯಗಳ ಹಾಗೂ ಬೆಳೆ ಕಾಳುಗಳು ಮಾರಾಟ ನಡೆಯಲಿ ‘ಬೀಜ ವಿನಿಮಯ’ ಕಾರ್ಯಕ್ರಮವಿರುತ್ತದೆ. ಆಸಕ್ತರು ಬೀಜ ಮತ್ತು ಗಿಡಗಳನ್ನು ವಿನಿಮಯಕ್ಕೆ ತರಬಹುದು ಎಂದರು.
ಕೈತೋಟ ಪ್ರಿಯರು ಮತ್ತು ರೈತರು ತಮಗೆ ಬೇಕಾದ ಅಗತ್ಯ ಬೀಜಗಳನ್ನು ತಳಿಗಳನ್ನೂ ಇಲ್ಲಿ ಖರೀದಿಸಲು ಅವಕಾಶ ಇರುತ್ತದೆ.

ಸುಸ್ಥಿರ ಜೀವನಶೈಲಿಯ ಉತ್ಪನ್ನಗಳಾದ 100% ನೈಸರ್ಗಿಕ ಬಣ್ಣದ ಹತ್ತಿಯ ಸಿದ್ದ ಉಡುಪುಗಳನ್ನು,  ತರಕಾರಿಗಳು, ಹಣ್ಣುಗಳು ಮತ್ತು ವಿವಿಧ ಭತ್ತದ ತಳಿಗಳ ಪ್ರದರ್ಶನ ಮಾಡಲಾಗುವುದು. ನೈಸರ್ಗಿಕ ಸ್ವಚ್ಚತಾ ಸಾಮಾಗ್ರಿಗಳು, ಮಣ್ಣಿನ ಮಡಿಕೆಗಳು, ಮಕ್ಕಳಿಗೆ ಮಣ್ಣಿನ ಆಟಿಕೆಗಳು ಬರುತ್ತಿವೆ.ಆರೋಗ್ಯಕರ ಆಹಾರ ಉತ್ಪನ್ನಗಳಾದ ಕಾಳುಮೆಣಸಿನ ಬೆಲ್ಲದ ಪಾನಕ, ಬೆಲ್ಲದ ಕೊಬ್ಬರಿ. ಅಥವಾ ಕುಟ್ಟುಂಡಿ, ತೆಂಗಿನ ಗಿಣ್ಣ, ಜವೇಗೊದಿ ಬೆಲ್ಲದ ಕೇಕ್ ಮತ್ತು ಕುಕ್ಕೀಸ್, ಕೆಂಪಕ್ಕಿಯ ಚಕ್ಕುಲಿ ಉತ್ಪನ್ನಗಳು ಬಾಯಿ ಚಪ್ಪರಿಸಲು ಸಿಗಲಿವೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸುಜಿತ್ ಇಟ್ಟಿಗಿ, ಹನುಮಂತಪ್ಪ,ಪಾಂಡುರಂಗ ಉಪಸ್ಥಿತರಿದ್ದರು

Share.
Leave A Reply

Exit mobile version