ಭದ್ರಾವತಿ: ಹಳೇನಗರದ ರಂಗಪ್ಪ ಸರ್ಕಲ್ ಮಧು ಲ್ಯಾಭೋರೇಟರಿ ವತಿಯಿಂದ ವಿನೂತನವಾಗಿ ವಿಶ್ವ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ನಗರಸಭೆ ರಂಗಪ್ಪವೃತ್ತ ಮತ್ತು ಕೇಶವಪುರ ಬಡಾವಣೆಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ 5 ಜನ ಪೌರಕಾರ್ಮಿಕರನ್ನು ಅಭಿನಂದಿಸಿ ಗೌರವಿಸಲಾಯಿತು.

ಲ್ಯಾಬ್ ಮಾಲೀಕ ಜಗದೀಶ್ ಎಸ್ ಆರ್ ಮಾತನಾಡಿ ನಾಗರೀಕ ಸಮಾಜದ ಸ್ವಚ್ಚತೆಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರ ಕಾರ್ಯ ಅಭಿನಂದನೀಯ. ಸ್ವಚ್ಛ ಸಮಾಜಕ್ಕೆ ಇವರ ಕೊಡುಗೆ ಉತ್ಕೃಷ್ಟವಾದದ್ದು. ಸಾರ್ವಜನಿಕರು ಸುಖ: ನಿದ್ದೆಯಲ್ಲಿದ್ದಾಗ ಮುಂಜಾನೆಯೇ ತಮ್ಮ ಕೆಲಸಗಳನ್ನು ಆರಂಭಿಸುವ ಪೌರ ಕಾರ್ಮಿಕರು ಸ್ವಚ್ಛ ಸಮಾಜದ ರುವಾರಿಗಳು. ಇವರೊಂದಿಗೆ ನಗರದ ಸ್ವಚ್ಛತೆ ಕಾಪಾಡಲು ಸಾರ್ವಜನಿಕರೂ ಕೂಡ ಕೈ ಜೋಡಿಸಬೇಕು. ಪೌರಕಾರ್ಮಿಕರ ಸೇವೆಯನ್ನು ಗೌರವಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಉತ್ತೇಜಿಸಬೇಕು.

ಅವರ ಜೀವನಕ್ಕೆ ರಕ್ಷಣೆ ಮತ್ತು ಭದ್ರತೆ ಒದಗಿಸಬೇಕು, ಪೌರಕಾರ್ಮಿಕರೂ ಕೂಡ ತಮ್ಮ ಹಾಗು ಕುಟುಂಬದ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಶಿಕ್ಷಣ ಆರೋಗ್ಯ ಸ್ವಚ್ಚತೆ ಜಾಗ್ರತಿಯನ್ನೂ ಮೂಡಿಸುವ ನಿಟ್ಟಿನಲ್ಲಿ ನಾಗರೀಕ ಸಮಾಜಕ್ಕೆ ಕೈ ಜೋಡಿಸಬೇಕು.

ನಂತರ ಪೌರಕಾರ್ಮಿಕರಾದ ತಿರುಮಲ, ಶರವಣ, ಲಕ್ಷ್ಮಮ್ಮ,ಸಂಜೀವ ಹಾಗೂ ರಾಜು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪತ್ನಿ ಎಚ್.ಲೀಲಾವತಿ ಇದ್ದರು.

Share.
Leave A Reply

Exit mobile version