ದಾವಣಗೆರೆ : ಕಾಂಗ್ರೆಸ್ ಅಭ್ಯರ್ಥಿ‌ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲಿದೆ ಇದ್ದರೂ ಅವರು ಸಲ್ಲಿಸಿರುವ ಅಫಿಡೆವಿಟ್ ನಲ್ಲಿ 44.43 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ಪ್ರಭಾ ಮಲ್ಲಿಕಾರ್ಜುನ್ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಆಗಿದ್ದು, ತಮ್ಮ ಬಳಿ ಒಟ್ಟು 97.28 ಲಕ್ಷ ಸಾಲ ಇರುವುದಾಗಿ ಹೇಳಿದ್ದಾರೆ. ಅವರ ಬಳಿ  67,566 ರೂಪಾಯಿ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 13,76,105 ಠೇವಣಿ ಹೊಂದಿದ್ದಾರೆ. ಷೇರು, ಡಿಬೆಂಚರ್ ಇತರೆಡೆ 2,65,20,500 ರೂಪಾಯಿ ಬಂಡವಾಳ ಹೂಡಿದ್ದಾರೆ.1

.80 ಕೋಟಿ ರೂಪಾಯಿ ಬೆಲೆಬಾಳುವ 3.189.528 ಗ್ರಾಂ ಚಿನ್ನ, ಇತರೆ 5.976 ಇತರೆ ಗ್ರಾಂ ಆಭರಣಗಳಿವೆ. ಬೆಳ್ಳಿಯ ಆಭರಣ ಇಲ್ಲ. 10,23,009 ರೂಪಾಯಿ ಮೌಲ್ಯದ ಇತರೆ ಆಸ್ತಿಗಳು ಇವರ ಹೆಸರಲ್ಲಿವೆ. 1.54 ಕೋಟಿ ಮೌಲ್ಯದ 47.11 ಎಕರೆ ಕೃಷಿ ಭೂಮಿ ಇದೆ. 16.1 ಲಕ್ಷ ಮೌಲ್ಯದ 11,050 ಚದರ ಅಡಿಯಷ್ಟು ಕೃಷಿಯೇತರ ಭೂಮಿ ಇದೆ. 21.4 ಲಕ್ಷ ಮೌಲ್ಯದ 34,483 ಚದರ ಅಡಿ ಮನೆಯ ಜತೆಗೆ 2500 ಚದರಡಿ ಬಿಲ್ಡ್ ಏರಿಯಾ ಇದೆ. ವೈಯಕ್ತಿಕವಾಗಿ ಯಾವುದೇ ಆಸ್ತಿ ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಪತಿ  ಎಸ್.ಎಸ್.ಮಲ್ಲಿಕಾರ್ಜುನ್‌  ಬಳಿ 194.88 ಕೋಟಿ ರೂ. ಮೌಲ್ಯದ ಆಸ್ತಿಗೆ ಮಾಲೀಕರಾಗಿದ್ದಾರೆ.  ಪುತ್ರ ಸಮರ್ಥ ಮಲ್ಲಿಕಾರ್ಜುನ್ 34.70 ಲಕ್ಷ ರೂ.ಗಳ ಚರಾಸ್ತಿ ಹೊಂದಿದ್ದಾರೆ.

2019-20 ರಲ್ಲಿ 6,48,080, 2020-21ರಲ್ಲಿ 7,18,300, 2021-22 ರಲ್ಲಿ7,18,300, 2021-22 ರಲ್ಲಿ8,40,600 ರೂಪಾಯಿ ಆಸ್ತಿ ದೊರೆತಿದೆ. ಒಟ್ಟು 44,53,14,286 ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಯ ಮಾಹಿತಿ ನೀಡಿದ್ದಾರೆ.

Share.
Leave A Reply

Exit mobile version