ದಾವಣಗೆರೆ: ರಾಜಸ್ಥಾನಿ, ಬಿಹಾರ್, ಉತ್ತರ ಪ್ರದೇಶ ರವರ ಬಳಿ ಗೋಲ್ ಗೊಪ್ಪ ತಿಂತೀರಾ….ಹುಷಾರ್ ನಿಮಗೂ ಈ ರೀತಿ ಆಗಬಹುದು.ಹೌದಾ..ಹಾಗಾದ್ರೆ ಏನಾಯಿತು ಅಂತೀರಾ…ಈ ಸ್ಟೋರಿ ನೋಡಿ..ನಾಡಿನಾದ್ಯಂತ ಪವಿತ್ರ ರಂಜಾನ್ ಹಬ್ಬದ ನಿಮಿತ್ತ ರೋಜಾ ನಡೆಯುತ್ತಿದೆ. ಹೀಗಿರುವಾಗ ಉಪವಾಸ ಮಾಡಿದ ನಂತರ ಮಸೀದಿ ಬಳಿ ಮಾರಾಟ ಮಾಡುತ್ತಿದ್ದ ಗೋಲ್ ಗೊಪ್ಪವನ್ನು ಸುಮಾರು 19 ಮಕ್ಕಳು ತಿಂದಿದ್ದಾರೆ. ತಿಂದ ನಂತರ ಒಬ್ಬೋಬ್ವರಿಗೆ ಹೊಟ್ಟೆ ನೋವು ವಾಂತಿ ಭೇದಿ ಶುರುವಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಂತೀರಾ? ಅದರ ಕಂಪ್ಲೀಂಟ್ ಡೀಟೆಲ್ಸ್ ಇಲ್ಲಿದೆ ನೋಡಿ.

ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ಈ ಘಟನೆ ನಡೆದಿದೆ. ಮಲೇಬೆನ್ನೂರಿನ ಜಾಮಿಯಾ ಮಸೀದಿ ಬಳಿ ಉಪವಾಸ ಅಂತ್ಯ ಮಾಡಿದ ನಂತರ ಮಸೀದಿ ಮುಂಭಾಗ ಪಾನಿ ಪೂರಿ ಸೇವಿಸಿದ 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆ ಗೆ ದಾಖಲಾಗಿದೆ ಅದರಲ್ಲಿ ನಾಲ್ಕು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿರುವ ತಹಶೀಲ್ದಾರ್ ಗುರು ಬಸವರಾಜ್ ಮತ್ತು ಜಿಪಂ ಸಿಇಓ ಸುರೇಶ್ ಹಿಟ್ನಾಳ್​ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಬಳಿಕ ಪಾನಿಪುರಿ ಅಂಗಡಿ‌ ಮಾಲೀಕ ಪರಾರಿ ಆಗಿದ್ದಾನೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಹಾರ ಸುರಕ್ಷಿತ ಅಧಿಕಾರಿ ಡಾ.ನಾಗರಾಜ್ ಭೇಟಿ, ಸ್ಯಾಂಪಲ್ ಸಂಗ್ರಹಣೆ

ಮಲೆಬೆನ್ನೂರಿಗೆ ಆಹಾರ ಸುರಕ್ಷಿತ ಅಧಿಕಾರಿ ಡಾ.ನಾಗರಾಜ್ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಣೆ‌ ಮಾಡಿದ್ದಾರೆ. ವರದಿ ಬರಬೇಕಾಗಿದೆ. ಅವರು ಹೇಳುವ ಪ್ರಕಾರ ಕಲುಶಿತ ನೀರನ್ನು ಮಿಶ್ರಣ ಮಾಡಿರುವ ಕಾರಣ ಹೀಗೆ ಆಗಿರಬಹುದು..ಆದರೆ ವರದಿ ಬಂದ ನಂತರ ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ. ಪ್ರಿಯ ಓದುಗರೇ ಬಾಯಿ ಚಟಕ್ಕೆ ಗೋಲ್ ಗೊಪ್ಪ ತಿನ್ನುವ ನಾವು ಇನ್ಮುಂದೆಯಾದ್ರೂ ಹುಷಾರ್ ಆಗಿರಬೇಕು…ಹಾಗಾಗಿ ಎಚ್ಚರದಿಂದ ಇರೀ…

Share.
Leave A Reply

Exit mobile version