ನ್ಯಾಮತಿ : ; 9 ವರ್ಷದ ಹೆಣ್ಣು ಮಗುವೊಂದು ಶಂಕಿತ ಡೆಂಗೆ ಸಾಂಕ್ರಾಮಿಕ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗ ಖಾಸಗಿ ಅಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ ತಡ ರಾತ್ರಿ ಶಿವಮೊಗ್ಗದಲ್ಲಿ ನಗರದ ಆಸ್ಪತ್ರೆಯಲ್ಲಿ ನಡೆದಿದೆ.
ಲಿಖಿತಾ(9) ಮೃತಪಟ್ಟ ಬಾಲಕಿ. 4ನೇ ತರಗತಿ ಓದುತ್ತಿದ್ದ ಬಾಲಕಿಯೂ ಎಪಿಎಂಸಿ ರಸ್ತೆಯ ನಿವಾಸಿಯಾದ ಜಿಂಕೇರಿ ಮುರುಗೇಶ ಮತ್ತು ಶ್ರುತಿ ದಂಪತಿಗಳ ಒಬ್ಬಳೇ ಮಗಳಾಗಿದ್ದಾಳೆ.
ಮಗುವಿಗೆ ಜ್ವರ ಬಂದ ಹಿನ್ನಲೆ ಕಳೆದ ಮಂಗಳವಾರ ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಶುಕ್ರವಾರ ಮೃತಪಟ್ಟಿದೆ.