ಸಾಗರ : ಜಿಲ್ಲೆಯಲ್ಲಿ ರಾಜಕಾರಣಿಗಳ ಬಳಿ ಅಧಿಕಾರವಿದ್ದು, ಪರಿಹರಿಸಬಹುದಾದ ಸಮಸ್ಯೆಗಳು ಸಾಕಷ್ಟಿದ್ದರೂ, ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ. ಮುಂದಿನ ದಿನದಲ್ಲಿ ಕ್ಷೇತ್ರದ ರಕ್ಷಣೆ ನನ್ನದು ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಸಾಗರ ಕ್ಷೇತ್ರದ ತುಮರಿ, ಬ್ಯಾಕೋಡು, ಎಸ್.ಎಸ್. ಭೋಗ್, ಹೆರಬೆಟ್ಟು, ಅರಳಗೋಡು, ಭಾನುಕುಳಿ ಗ್ರಾ ಪಂ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಮಲೆನಾಡಿನ ಜನರ ಒಡಲ ಸಂಕಟವನ್ನು ಹತ್ತಿರದಿಂದ ಆಲಿಸುವ ಅವಕಾಶ ನನಗೆ ದೊರಕಿದೆ.
ಇಲ್ಲಿನ ಸಮಸ್ಯೆಗಳ ಅಂತರಾಳದ ಅರಿವಿಗೆ ಬಂದಿವೆ. ಇಲ್ಲಿ, ಕುಡಿಯುವ ನೀರು, ಬಗರ್ ಹುಕುಂ ಸಮಸ್ಯೆ, ಭೂ-ಹಕ್ಕು, ರಸ್ತೆ, ಸಾರಿಗೆ ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಜನರು ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ, ಇಲ್ಲಿ ಜನರ ನಾಡಿ ಮಿಡಿತಕ್ಕೆ ಹತ್ತಿರವಾಗಿ ಮೂಲ ಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತೇನೆ ಎಂದರು.