- ಬ್ಯಾಂಕ್ ನಲ್ಲಿ ಬಿಗಿ ಭದ್ರತೆ ಇದ್ದರೂ, ಚಾಲಾಕಿ ಕಳ್ಳ 10 ಲಕ್ಷ ಕದ್ದಿದಾದರೂ ಹೇಗೆ?
- ಹತ್ತು ಲಕ್ಷ ಕದ್ದ ಕಳ್ಳ, ಚಾಣಾಕ್ಷ ಪೊಲೀಸರಿಗೆ 24 ಗಂಟೆಯೊಳಗೆ ಬಿದ್ದಿದ್ದಾರೂ ಹೇಗೆ?….
- ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಛೇರಿಯಲ್ಲಿ (ಗ್ರಾಮೀಣ ಕೂಟ ಸ್ಮಾಲ್ ಫೈನಾನ್ಸ್) ನಲ್ಲಿ 10,88,440 ರೂ.ಕಳ್ಳತವಾಗಿತ್ತು.
- ದಾವಣಗೆರೆ ತಾಲೂಕಿನ ಯರವನಾಗತಿಹಳ್ಳಿ ಗ್ರಾಮದ
ಕೆ. ಬಿ. ಕಿರಣ ಕುಮಾರ (26) ಬಂಧಿತ - ಕಳ್ಳ ಪೊಲೀಸ್ ಆಟದಲ್ಲಿ ಕಳ್ಳನೂ ಉಪಯೋಗಿಸಿದ ಪ್ಲಾನ್ ಅಟ್ಟರ್ ಫ್ಲಾಫ್ ಆಗಿದೆ
ನಂದೀಶ್ ಭದ್ರಾವತಿ ದಾವಣಗೆರೆ
ಬ್ಯಾಂಕ್ ನಲ್ಲಿ ಕೆಲಸ ಮಾಡುವ ಮಾಜಿ ನೌಕರನೊಬ್ಬ ತಾನು ಕೆಲಸ ಮಾಡಿದ ಬ್ಯಾಂಕಿನಿಂದಲೇ ಹತ್ತು ಲಕ್ಷ ಹಣ ಕದ್ದು, ಚಾಣಾಕ್ಷಿ ಪೊಲೀಸರಿಗೆ ಕದ್ದ 12 ಗಂಟೆಯಲ್ಲಿಯೇ ಸಿಕ್ಕಿ ಬಿದ್ದಿದ್ದಾನೆ.
ಹೌದು…ಕಳ್ಳ ಪೊಲೀಸ್ ಆಟದಲ್ಲಿ ಕಳ್ಳನೂ ಉಪಯೋಗಿಸಿದ ಪ್ಲಾನ್ ಅಟ್ಟರ್ ಫ್ಲಾಫ್ ಆಗಿದೆ. ಪರಿಣಾಮ ಬ್ಯಾಂಕ್ ನಲ್ಲಿದ್ದ ಹಣ ಮತ್ತೆ ಬ್ಯಾಂಕ್ ಗೆ ಸೇರಿದೆ.
ನಗರದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಛೇರಿಯಲ್ಲಿ (ಗ್ರಾಮೀಣ ಕೂಟ ಸ್ಮಾಲ್ ಫೈನಾನ್ಸ್) ನಲ್ಲಿ 10,88,440 ರೂ.ಕಳ್ಳತವಾಗಿತ್ತು. ಈ ಸಂಬಂಧ ಬ್ಯಾಂಕಿನ ಸಿಬ್ಬಂದಿ ಅವಿನಾಶ್ ಕೆಟಿಜೆ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಆ ದೂರು ಏನಿತ್ತು
ನಮ್ಮ ಬ್ಯಾಂಕಿನಲ್ಲಿ ಗ್ರೂಪ್ ಲೋನ್ ನೀಡಿದ ಮಹಿಳೆಯರಿಂದ 10,88,440 ಸಂಗ್ರಹಿಸಲಾಗಿತ್ತು. ಈ ಸಂಗ್ರಹಿಸಿದ ಲೋನ್ ಹಣವನ್ನು ಬ್ಯಾಂಕ್ ನ ಸಿಬ್ಬಂದಿ ಅವಿನಾಶ್ ಕಛೇರಿಯ ಸೇಫ್ ಲಾಕರ್‌ನಲ್ಲಿಟ್ಟಿದ್ದರು. ಆದ್ರೆ, 16ರಂದು ಬ್ಯಾಂಕ್‌ಗೆ ಜಮಾ ಮಾಡಲು ಸೇಫ್ ಲಾಕರ್‌ನಲ್ಲಿ ಚೆಕ್ ಮಾಡಿದಾಗ ಹಣವು ಕಳ್ಳತನವಾಗಿರುವುದು ಕಂಡು ಬಂದಿತ್ತು.ಈ ಸಂಬಂಧ ಹಣ ಪತ್ತೆ ಮಾಡುವಂತೆ ಕೊಟ್ಟ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯಾರು ಈ ಕಳ್ಳ
ದಾವಣಗೆರೆ ತಾಲೂಕಿನ ಯರವನಾಗತಿಹಳ್ಳಿ ಗ್ರಾಮದ
ಕೆ. ಬಿ. ಕಿರಣ ಕುಮಾರ (26) ಬಂಧಿತ ಆರೋಪಿ. ಈತ ಗ್ರಾಮೀಣ ಕೂಟ ಸ್ಮಾಲ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ನೌಕರ. ಕೆಲ ಕಾರಣಗಳಿಂದ ಮೂರು ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ನಂತರ ಆತನಿಗೆ ಜೀವನ ನಡೆಸಲು ಕಷ್ಟವಾಗಿತ್ತು. ತಂದೆ-ತಾಯಿಗೆ ಒಂದು ಎಕರೆ ಜಮೀನು ಇದ್ದು, ಮುಗ್ದ ಮನಸ್ಸಿನವುಳ್ಳವರಾಗಿದ್ದರು. ಆದರೆ ಮಗನಿಗೆ ಹಣದ ಅವಶ್ಯವಿತ್ತು. ಈ ಕಾರಣದಿಂದ ಲಾಕರ್ ನಲ್ಲಿ ಹಣ ಕದಿಯಲು ಮುಂದಾದ.
ಹಣ ಕದ್ದಿದ್ದಾರೂ ಹೇಗೆ
ಬ್ಯಾಂಕ್ ನ ಮಾಜಿ ನೌಕರನಾಗಿದ್ದ ಕೆ.ಬಿ.ಕಿರಣ್ ಕುಮಾರ್ ಲಾಕರ್ ಬೀಗವನ್ನು ನಕಲು ಮಾಡಿದ್ದ. ಬ್ಯಾಂಕಿನ ಸಂಪೂರ್ಣ ಚಿತ್ರಣ ಆತನಿಗೆ ಗೊತ್ತಿತ್ತು. ಅಲ್ಲದೇ ಸಿಸಿ ಕ್ಯಾಮೆರಾ ಎಲ್ಲಿ ಇತ್ತು ಎಂದು ಆತನಿಗೆ ಗೊತ್ತಿತ್ತು..ಇನ್ನು ಯಾವ ಜಾಗದಿಂದ ಬಂದ್ರೆ ಹಣ ಕದಿಯೋಬಹುದು ಎಂಬುದು ಕೂಡ ಆತನಿಗೆ ಗೊತ್ತಿತ್ತು ಈ ಕಾರಣದಿಂದ ಹಣ ಕದಿಯಲು ಕೆ.ಬಿ.ಕಿರಣ್ ಸಜ್ಜಾದ. ನಂತರ ರಾತ್ರಿ ಬ್ಯಾಂಕ್ ನ ಹಿಂಭಾಗದಿಂದ ಬಂದು ತನ್ನ ಡೂಪ್ಲಿಕೇಟ್ ಕೀ ಬಳಸಿ ಲಾಕರ್ ಓಪನ್ ಮಾಡಿ ಹಣ ಕದ್ದ.
ಸಿಸಿ ಕ್ಯಾಮೆರಾದಲ್ಲಿ ಸೆರೆ, ಹಣ ಕೊಂಡ್ಯೋಯ್ಯುಲು ಚೀಲ ಬಳಕೆ
ಆರೋಪಿ ಕೆ.ಬಿ.ಕಿರಣ್ ಕುಮಾರ್ ನಡೆಸಿದ ಕಳ್ಳತನದ ತುಣುಕುಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈತ ಸಿಸಿ ಕ್ಯಾಮೆರಾ ಕಣ್ತಿಪ್ಪಿಸಲು ಮುಖ, ತಲೆಯನ್ನು ಟವೆಲ್ ನಲ್ಲಿ ಮುಚ್ಚಿಕೊಂಡಿರುತ್ತಾನೆ. ಆದರೆ ಮುಖದ ಚಿತ್ರಣ ಸಿಸಿಟಿವಿಯಲ್ಲಿ ದಾಖಲಾಗಿದೆ. ಇನ್ನು ಒಂದು ಕೈಯಲ್ಲಿ ಟವೆಲ್ ಮುಚ್ಚಿಕೊಂಡ ಕಿರಣ್ ಇನ್ನೊಂದು ಕೈಯಲ್ಲಿ ತಂದಿದ್ದ ಗೊಬ್ಬರ ಚೀಲದಲ್ಲಿ ಪೆಂಡಿ ಹಣವನ್ನು ಇಟ್ಟುಕೊಂಡಿದ್ದ.
12 ಗಂಟೆಯೊಳಗೆ ಆರೋಪಿ ಸಿಕ್ಕಿದ್ದಾದರೂ ಹೇಗೆ
ಡಿಎಸ್ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಕೆಟಿಜೆ ನಗರ ಸಿಪಿಐ ಶಶಿಧರ ಮಾಡಿದ ಖೆಡ್ಡಾಗೆ ಆರೋಪಿ ಕಿರಣ್ ಕುಮಾರ್ ಬಿದ್ದಿದ್ದಾನೆ. ಆರೋಪಿ ಮೇಲೆ ಬ್ಯಾಂಕ್ ನವರು ಮೊದಲು ಅನುಮಾನಪಡಿಸುತ್ತಾರೆ. ಈ ಆಧಾರದ ಮೇಲೆ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಸಿಸಿಟಿವಿಯಲ್ಲಿ ದಾಖಲಾದ ತುಣಕುಗಳು, ಅನುಮಾನ ವ್ಯಕ್ತಪಡಿಸಿದ್ದ ವ್ಯಕ್ತಿ ಚಿತ್ರ ಒಂದೇ ಆದ ಕಾರಣ ಕಳ್ಳ ಸಿಕ್ಕಿಬೀಳುತ್ತಾನೆ. ಅಲ್ಲದೇ ಮನೆಯಲ್ಲಿಟ್ಟಿದ್ದ ಹಣವನ್ನು ಪೊಲೀಸರಿಗೆ ಕೊಡುತ್ತಾನೆ. ಒಟ್ಟಿನಲ್ಲಿ ಪೊಲೀಸರ ಚಾಣಾಕ್ಷತನದಿಂದ ಮಹಿಳೆಯರು ಕಟ್ಟಿದ ಸಾಲದ ಹಣ ಸಿಕ್ಕಿದ್ದು, ಜನರು ಕೆಟಿಜೆ ನಗರ ಪೊಲೀಸರಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.
ಪ್ರಕರಣ ಭೇದಿಸಿದ ತಂಡದಲ್ಲಿದ್ದವರು
ಪ್ರಕರಣದ ಆರೋಪಿ ಹಾಗೂ ಹಣ ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎನ್ ಸಂತೋಷ, ಮಂಜುನಾಥ ಜಿ ಅವರ ನಿರ್ದೇಶನದಲ್ಲಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನಲ್ಲಿ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶಶಿಧರ ಯು ಜೆ, ಪಿಎಸ್‌ಐ ಸಾಗರ್ ಅತ್ತರವಾಲ, ಮಂಜುಳಾರ ನೇತೃತ್ವದ ತಂಡವು ಪ್ರಕರಣ ವರದಿಯಾಗಿ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.