ಭದ್ರಾವತಿ: ಲೋಕಸಭೆ ಚುನಾವಣೆ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ಅಕ್ರಮ ತಡೆಗೆ ಗಡಿ ಭಾಗದಲ್ಲಿ ಒಟ್ಟು 4 ತಪಾಸಣೆ ಕೇಂದ್ರಗಳ ತೆರೆಯ ಲಾಗಿದೆ ಎಂದು ಸಹಾಯಕ ಚುನಾವಣಾಧಿ ಕಾರಿ ಸತ್ಯನಾರಾಯಣ ತಿಳಿಸಿದರು.ಈ ಕುರಿತು ಮಾಹಿತಿ ನೀಡಿ, ಕೂಡ್ಲಿಗೆರೆ, ಹಳ್ಳಿಕೆರೆ, ಹುಣಸೇಕಟ್ಟೆ ಮತ್ತು ಬಿ.ಆರ್.ಪಿ ಯಲ್ಲಿ ತಪಾಸಣೆ ಕೇಂದ್ರಗಳ ತೆರೆಯಲಾಗಿದೆ ಎಂದರು.

ಕ್ಷೇತ್ರದ ಮತದಾರರು ಎಷ್ಟು..?

2,14,070 ಮತದಾರರಿದ್ದಾರೆ. ಈ ಪೈಕಿ 1,03,722 ಪುರುಷ ಹಾಗು 1,10,343 ಮಹಿಳಾ ಮತದಾರರಿದ್ದು, 3,718 ಯುವ ಮತದಾರರು, 1,435 ಮಂದಿ 85 ವರ್ಷ ಮೇಲ್ಪಟ್ಟ ಮತದಾರರು. 49 ಮಂದಿ 100 ವರ್ಷ ಮೇಲ್ಪಟ್ಟ ಮತದಾರರು ಹಾಗು 2,269 ಅಂಗವಿಕಲ ಮತದಾರರು ಮತ್ತು 188 ಸೇವಾ ಮತದಾರರು ಇದ್ದಾರೆ.21 ಮತಗಟ್ಟೆ ಮೇಲ್ವಿ ಚಾರಕರನ್ನು, 24 ಸೆಕ್ಟರ್ ಅಧಿಕಾರಿಗಳು ಹಾಗೂ ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ವಿ.ಟಿ ಮತ್ತು ಎ.ಸಿ ವಿವಿಧ ತಂಡಗಳ ನೇಮಕಗೊಳಿಸಲಾಗಿದೆ.ಮತಗಟ್ಟೆಗೆ ಬರಲು ಸಾಧ್ಯವಾಗದ 85 ವರ್ಷ ಮೇಲ್ಪಟ್ಟ ಮತದಾರರು, ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಕ್ಷೇತ್ರದಲ್ಲಿ 11 ಮತಗಟ್ಟೆ ಸ್ಥಳಾಂತರಗೊಳಿಸಲಾಗಿದೆ ಎಂದರು.

ತಾಲೂಕು ಮಟ್ಟದಲ್ಲಿ ಅನುಮತಿಗಳು

ಮನೆ ಮನೆ ಪ್ರಚಾರ, ಧ್ವನಿ ವರ್ಧಕ ಪರವಾನಗಿ, ತಾತ್ಕಾಲಿಕ ಪಕ್ಷದ ಕಚೇರಿ ತೆರೆಯಲು, ಕರಪತ್ರ ವಿತರಣೆ, ಸಭೆ ಮತ್ತು ಲೌಡ್ ಸ್ಪೀಕರ್ ಅನುಮತಿ, ಸ್ಪೀಟ್ ಕಾರ್ನ‌್ರಮೀಟಿಂಗ್. ಮೆರವಣಿಗೆ, ರ್ಕ್ಯಾಲಿ, ಧ್ವನಿವರ್ಧಕ ಪರವಾನಗಿಯೊಂದಿಗೆ ವಾಹನಕ್ಕೆ ಅರ್ಜಿ, ಪಕ್ಷದ ಕಾರ್ಯಕರ್ತರಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ವಾಹನ ಅಭ್ಯರ್ಥಿ ಚುನಾವಣಾ ಏಜೆಂಟ್ ಗಾಗಿ ಸಂಪೂರ್ಣ ವಿಧಾನಸಭಾ ಪ್ರದೇಶಕ್ಕೆ ಒಂದು ವಾಹನ ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ಅನುಮತಿ ನೀಡಲಾಗುವುದು ಎಂದರು. ತಹಸೀಲ್ದಾರ್‌ ಕೆ.ಆರ್‌ನಾಗರಾಜು ಉಪಸ್ಥಿತರಿದ್ದರು.

Share.
Leave A Reply

Exit mobile version