ನಂದೀಶ್ ಭದ್ರಾವತಿ, ದಾವಣಗೆರೆ
ಲಾರಿ,ಬಸ್ ಹಾಗೂ ಮಿನಿ ವಾಹನಗಳಿಗೆ ಟೇಪಿಂಗ್ ಹಾಗೂ ಕ್ಯೂಆರ್ ಕೋಡ್ ಅಳವಡಿಕೆಗೆ ದಾವಣಗೆರೆಯ ಲಾರಿ ಮಾಲೀಕರು ವಿರೋಧ ವ್ಯಕ್ತಪಡಿಸಿದರಲ್ಲದೇ ಕೆಲ ಕಾಲ ಆರ್ ಟಿಒ ಹಾಗೂ ಲಾರಿ ಮಾಲೀಕರ ನಡುವೆ ವಾಗ್ವಾದ ಏರ್ಪಟ್ಟಿತ್ತು.
ದಾವಣಗೆರೆ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದ ಲಾರಿ ಮಾಲೀಕರು ಸಮಸ್ಯೆ ಬಗ್ಗೆ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು.
ಈ ಬಗ್ಗೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮಾಧ್ಯಮದವರೊಂದಿಗೆ ಮಾತನಾಡಿ,
ಅನೇಕ ಲಾರಿಗಳ ಮಾಲೀಕರಿಗೆ ದುಡಿಮೆಯೇ ಇಲ್ಲ, ಅನೇಕರು ತೆರಿಗೆಯನ್ನೇ ಪಾವತಿ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್, ಜಿಪಿಎಸ್ ಹಾಗೂ ಕ್ಯೂಆರ್ ಕೋಡ್ ಟೇಪ್ ಗೆ ಹಣ ಎಲ್ಲಿಂದ ತರುತ್ತಾರೆ.
ಕಾನೂನಿನಲ್ಲಿ ಕ್ಯೂಆರ್ ಕೋಡ್ ಅಳವಡಿಸುವಂತೆ ಎಲ್ಲಿಯೂ ಹೇಳಿಲ್ಲ. ಆದ್ದರಿಂದ ಲಾರಿಗಳಿಗೆ ಕ್ಯೂಆರ್ ಕೋಡ್ ಅಳವಡಿಸಲು ತೊಂದರೆಯಾಗುತ್ತಿದೆ.ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು .
ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲೂ ಅಳವಡಿಸದ ನಿಯಮ ನಮ್ಮ ದಾವಣಗೆರೆಯಲ್ಲಿ ಅಳವಡಿಸಲು ಮುಂದಾಗಿರುವುದು ಖಂಡನೀಯ ಎಂದರು.
ದಾವಣಗೆರೆಯಲ್ಲಿ ಮಾತ್ರ ಏಕೆ ಈ ನಿಯಮ
ಲಾರಿಗಳಿಗೆ ಕ್ಯೂ ಆರ್ ಕೋಡ್ ಹಾಕಬೇಕೆಂದು ಎಲ್ಲಿ ನಿಯಮವಿಲ್ಲ..ಅಂತಹ ದೊಡ್ಡ ಸಿಟಿ ಬೆಂಗಳೂರಿನಲ್ಲಿ ಇಲ್ಲ.. ಅಲ್ಲಿಯೇ ಇಲ್ಲದ ನಿಯಮ ದಾವಣಗೆರೆಯಲ್ಲು ಏಕೆ.
ಪಕ್ಕದ ಚಿತ್ರದುರ್ಗ ಜಿಲ್ಲೆಯಲ್ಲಿ ಈ ನಿಯಮ ಇಲ್ಲ .ನಮಗೆ ಮಾತ್ರ ಹೇರಿಕೆ ಮಾಡುತ್ತಿದ್ದಾರೆ ಎಂದು ಸೈಫುಲ್ಲ ಆಕ್ರೋಶ ವ್ಯಕ್ತಪಡಿಸಿದರು.
ನಾವು ಕ್ಯೂ ಆರ್ ಕೋಡ್ ಹಾಕೋದಿಲ್ಲ
ದಾವಣಗೆರೆ ಲಾರಿ ಮಾಲೀಕರು ಎಲ್ಲ ಕೇಳುತ್ತಾರೆ ಅಂತ ಇಲ್ಲಿ ಮಾತ್ರ ಕ್ಯೂ ಆರ್ ಕೋಡ್ ನ್ನು ಖಾಸಗಿ ಏಜೆನ್ಸಿಗಳ ಬಳಿ ಹಾಕಬೇಕೆಂದು ಹೇಳಿದ್ದೀರಿ..ಅಲ್ಲದೇ ಅವರ ಬಳಿಯೇ ರೇಡಿಯಂ ಟೇಪ್ ಹಾಕಬೇಕೆಂದು ಸೂಚಿಸಿದ್ದರು..ಅವರ ಬಳಿ ರೇಡಿಯಂ, ಟೇಪ್ ಹಾಕಿಸಿದರೆ ಆರು ಸಾವಿರ ಆಗುತ್ತದೆ. ಆದರೆ ನಾವು ರೇಡಿಯಂ ಟೇಪ್ ಹಾಕಿಸಿದರೆ ಎರಡು ಸಾವಿರ ಆಗುತ್ತದೆ…ಆದ್ದರಿಂದ ನಾವೇ ರೇಡಿಯಂ ಟೇಪ್ ಹಾಕಿಕೊಳ್ಳುತ್ತೇವೆ. ಎಂದು ಸೈಫುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರೆ.
ಈಗಾಗಲೇ ಲಾರಿ ಎಫ್ ಸಿ ಮಾಡಿದ್ದೇವೆ. ಆದರೆ ಕ್ಯೂಆರ್ ಕೋಡ್ ಅಳವಡಿಸಲು ಸಾಧ್ಯವಿಲ್ಲ ಇದರಿಂದ ನಮಗೆ ಹೊರೆಯಾಗಲಿದೆ. ಲಾರಿಗಳಿಗೆ ಕ್ಯೂಆರ್ ಕೋಡ್ ಅಳವಡಿಸಬೇಕೆಂಬ ನಿಯಮ ಮಾಡಲಾಗಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಯ್ದೆಯಲ್ಲೇ ಇಲ್ಲ.
ಕ್ಯೂಆರ್ ಕೋಡ್ ಅಳವಡಿಕೆ ಮಾಡಲು 130 ರೂ ಮೀಟರ್ ಗೆ ಹಣ ಇದೆ. ಟೇಪ್ ಹಾಕಲು ಯಾವುದೇ ವಿರೋಧ ಇಲ್ಲ ಸುರಕ್ಷತೆಗಾಗಿ ಟೇಪ್ ಅಳವಡಿಕೆ ಮಾಡುತ್ತೇವೆ. ಆದರೆ ಕ್ಯೂಆರ್ ಕೋಡ್ ಹಾಕಲು ನಮ್ಮ ವಿರೋಧವಿದೆ.
ಕರ್ನಾಟಕ ರಾಜ್ಯಾದ್ಯಂತ ಯಾವ ಜಿಲ್ಲೆಯಲ್ಲೂ ಈ ವ್ಯವಸ್ಥೆ ಅಳವಡಿಕೆ ಮಾಡಿಲ್ಲ ಆದರೆ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಈ ವ್ಯವಸ್ಥೆ ತಂದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಸೈಫುಲ್ಲಾ ಹೇಳಿದರು.
ಟೇಪ್ ಹಾಕಲು ಕಾರಣವೇನೂ ಗೊತ್ತಾ?
ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಎಲ್ಲಿಯೂ ಕೂಡ ಕ್ಯೂಆರ್ ಕೋಡ್ ಬಗ್ಗೆ ಪ್ರಸ್ತಾಪವೇ ಇಲ್ಲ. ಕ್ಯೂಆರ್ ಕೋಡ್ ಗೆ ನಮ್ಮ ವಿರೋಧವಿದೆ. ಟೇಪ್ ಹಾಕುವುದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ. ವಾಹನಗಳ ಪಕ್ಕದಲ್ಲಿ ಹಳದಿ ಬಣ್ಣ ,ಹಿಂಭಾಗದಲ್ಲಿ ಕೆಂಪು ಹಾಗೂ ವಾಹನಗಳ ಮುಂಭಾಗದಲ್ಲಿ ಬಿಳಿ ಬಣ್ಣದ ಟೇಪ್ ಹಾಕುವುದರಿಂದ ರಾತ್ರಿ ವೇಳೆ ವಾಹನಗಳು ಸಂಚಾರಿಸುವಾಗ ಕಾಣುತ್ತವೆ. ಇದರಿಂದ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ.ಇದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಲಾರಿ ಮಾಲೀಕರು ಒಮ್ಮತದಿಂದ ಅಭಿಪ್ರಾಯಪಟ್ಟರು.
ಕಿಕ್ ಬ್ಯಾಕ್ ಗೆ ಈ ನಿಯಮ
ಕ್ಯೂ ಆರ್ ಕೋಡ್ ಹಾಕುವುದರಿಂದ ಸಾರಿಗೆ ಇಲಾಖೆಗೆ ಅತಿ ಹೆಚ್ಚು ಹಣ ಬರುತ್ತದೆ. ಅಲ್ಲದೇ ರೇಡಿಯಂ ಟೇಪ್ ನ್ನು ಖಾಸಗಿ ಏಜೆನ್ಸಿ ಬಳಿಯೇ ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದಾರೆ..ಆದರೆ ನಾವು ಈಗಾಗಲೇ ಎಫ್ ಸಿ ಕಟ್ಟುತ್ತಿದ್ದೇವೆ, ಕಟ್ಟಿಲ್ಲ ಅಂದ್ರೆ ಸಾರಿಗೆ ಇಲಾಖೆಯಲ್ಲಿ ದಾಖಲೆ ಇರುತ್ತದೆ, ವಾಹನ ತಂದು ಎಫ್ ಸಿ ಮಾಡಿಸಬಹುದು.ಆದರೆ ಕ್ಯೂಆರ್ ಕೋಡ್ ನಿಂದ ಯಾವುದೇ ಲಾಭವಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಇದರಿಂದಕಿಕ್ ಬ್ಯಾಕ್ ಇದೆ ಎಂಬ ಅನುಮಾನಗಳಿವೆ ಆದ್ದರಿಂದ ಇದಕ್ಕೆ ನಮ್ಮ ವಿರೋಧವಿದೆ ಎಂದು ಲಾರಿ ಮಾಲೀಕರು ಹೇಳಿದರು.
ಅಧಿಕ ವೆಚ್ಚ
ಲಾರಿಗಳಿಗೆ ಅಥವಾ ಬಸ್ ಗಳಿಗೆ ಉತ್ತಮ ಟೇಪ್ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿದೆ. ಆದರೆ ಕ್ಯೂಆರ್ ಕೋಡ್ ಅಳವಡಿಸಲು ಅಧಿಕ ವೆಚ್ಚ ತಗಲುತ್ತದೆ. ಜಿಲ್ಲೆಯಲ್ಲಿ ಎರಡು ಸಾವಿರ ಲಾರಿಗಳಿವೆ 800 ರಿಂದ 1000 ಬಸ್ ಗಳಿವೆ. ಆ ಬಸ್ ಲಾರಿಗಳಿಗೂ ಅಳವಡಿಸಬೇಕಿದೆ ಎಂದು ಹೇಳುತ್ತಾರೆ. ಆರ್ ಟಿ ಒ ಅಧಿಕಾರಿಗೆ ಈ ಬಗ್ಗೆ ಹೇಳಿದ್ದೇವೆ ಅವರೂ ಕೂಡ ವಿಚಾರ ಮಾಡಿ ಮೇಲಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸೈಫುಲ್ಲಾ ಹೇಳಿದರು.
ಸಮಸ್ಯೆ ತಾತ್ಕಾಲಿಕ ನಿವಾರಣೆ
ಆರ್ ಟಿಒ ಪ್ರಮೋಂತೇಶ್ ಮಾತನಾಡಿ, ಮೇಲಧಿಕಾರಿಗಳಿಗೆ ಈ ಬಗ್ಗೆ ಗಮನಕ್ಕೆ ತರಲಾಗಿದೆ. ಅವರು
ತಾತ್ಕಾಲಿಕ ನಿವಾರಣೆ ಮಾಡುವುದಾಗಿ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಎಫ್ ಸಿ ಮಾಡಿಸಲು ಅನುಮತಿ
ಕ್ಯೂಆರ್ ಕೋಡ್ ಇಲ್ಲದಂತೆ ಎಫ್ ಸಿ ಮಾಡಿಸಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಸಚಿವರಿಗೆ ನಮ್ಮ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಲಾರಿ ಮಾಲೀಕರು ಹೇಳಿದರು
ರೇಡಿಯಂ ಟೇಪ್ ಬಗ್ಗೆ ವಿವರಿಸದ ಬಸ್ ಮಾಲೀಕ
ಬಸ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಮಹಾಂತೇಶ್ ಬಸ್ ಮಾಲೀಕರಾದ .ಕೆ.ಎಸ್ ಮಲ್ಲೇಶಪ್ಪ ಮಾತನಾಡುತ್ತಾ, ಟೇಪ್ ಹಾಕಲು ಮಾರುಕಟ್ಟೆಯಲ್ಲಿ ಕೇವಲ ಐವತ್ತು ರೂ ತಗಲುತ್ತದೆ , ಆದರೆ ಅಧಿಕಾರಿಗಳು 140 ದರ ನಿಗಧಿ ಮಾಡಿದ್ದಾರೆ .
ರಾಜ್ಯದಲ್ಲಿ ಬರಗಾಲವಿದೆ ಜೊತೆಗೆ ಶಕ್ತಿಯೋಜನೆ ಬಂದ ಮೇಲೆ ಬಸ್ ಓಡಿಸುವುದು ಸವಾಲಿನ ಕೆಲಸವಾಗಿದೆ. ಕ್ಯೂಆರ್ ಕೋಡ್ ಮಾಡಿಸುವುದರಿಂದ ಒಂದು ವಾಹನಕ್ಕೆ 15 ಸಾವಿರ ವೆಚ್ಚ ತಗಲುತ್ತದೆ. ಒಂದು
ಬಸ್ ಗೆ 16 ಮೀಟರ್ ಟೇಪ್ ಬೇಕಿದೆ. ಇಲಾಖೆಯಿಂದ ಅಳವಡಿಸಲು ಒಂದು ಮೀಟರ್ ಗೆ 4 ಸಾವಿರ ತಗಲುತ್ತದೆ.
ನಾವೇ ತಂದುಹಾಕಿದರೆ ಒಂದೂವರೆ ಸಾವಿರ ವೆಚ್ಚವಾಗುತ್ತದೆ. ಪ್ರಸ್ತುತ ಸಾರಿಗೆ ಇಲಾಖೆಯಿಂದಲೇ ಟೇಪ್ ಅಳವಡಿಸಬೇಕೆಂಬ ನಿಯಮ ಇದೆ ಇದರಿಂದ ನಮಗೆ ಹೊರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಸರಕಾರ ಈ ಬಗ್ಗೆ ಗಮನಹರಿಸಿ ಕ್ಯೂ ಆರ್ ಕೋಡ್ ಅಳವಡಿಸಲು ಅನುಮತು ನೀಡಬಾರದು
ಒಂದುವೇಳೆ ಸಹಕಾರನೀಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಲಾರಿ, ಬಸ್ ಮಾಲೀಕರು ಎಚ್ಚರಿಕೆ ನೀಡಿದರು