ದಾವಣಗೆರೆ : ದಾವಣಗೆರೆ ಪ್ರತಿಷ್ಠಿತ ಪತ್ರಕರ್ತರ ಪ್ರೆಸ್ ಕ್ಲಬ್ ಚುನಾವಣೆ ಅಬ್ಬರದಿಂದ ಮಂಗಳವಾರ ನಡೆಯಿತು. ಸುಮಾರು 160 ಮತದಾರರು ಹಕ್ಕನ್ನು ಚಲಾಯಿಸಿದರು. ಇನ್ನೆನೂ ಕೆಲವೇ ಲಕ್ಷಣಗಳಲ್ಲಿ ಗೆಲ್ಲೋರು ಯಾರು ಎಂಬುದು ಖಚಿತವಾಗಲಿದೆ.
ಹಿರಿಯವರದಿಗಾರ ನಾಗರಾಜ್ ಬಡದಾಳ್, ವರದರಾಜ್, ಮಧುನಾಗರಾಜ್, ರವಿಕುಮಾರ್ ಸ್ಪರ್ಧಿಸಿದ್ದು, ಇಬ್ಬರ ನಡುವೆ ನೇರಾಹಣಾಹಣಿ ನಡೆಯುತ್ತಿದೆ. ಇನ್ನು ಗರುಡ ವಾಯ್ಸ್ ಪತ್ರಿಕೆಯ ಎಚ್.ಎಂ.ಪಿ ಕುಮಾರ್ ಕನ್ನಡ ಪ್ರಭ ವರದಿಗಾರ ಬಡದಾಳ್ ಗೆ ಬೆಂಬಲಿಸಿದ್ದಾರೆ.
ವರದಿಗಾರ ಕೂಟದ ಅಧ್ಯಕ್ಷ ಸ್ಥಾನ ಪ್ರತಿಷ್ಠೆಯ ಕಣವಾಗಿದ್ದು, ಇಲ್ಲಿ ಯಾರು ಗೆಲ್ಲುತ್ತಾರೆ. ಅವರಿಗೆ ಅವರದ್ದೆ ಆದ ಗೌರವ ಸಿಗಲಿದೆ. ಆದ್ದರಿಂದ ಈ ಬಾರಿ ಐದು ಜನ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇನ್ನು ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿ ಪೋಟೋ ಗೆ ಪೋಸ್ ನೀಡಿದರು.
ಹಿರಿಯ ಪತ್ರಕರ್ತರಾದ ಬಿ.ಎನ್.ಮಲ್ಲೇಶ್, ಆರಾಧ್ಯ, ಏಕಾಂತಪ್ಪ, ಬಸವರಾಜ್ ದೊಡ್ಮನಿ ಹಾಜರಿದ್ದರು. ಅಭ್ಯರ್ಥಿಗಳು ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಇನ್ನೇನೂ ಕೌಂಟಿಂಗ್ ಶುರುವಾಗಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವ..ಢವ ಶುರುವಾಗಿದೆ.