*ವಿದ್ಯಾರ್ಥಿಗಳಿಗೆ ದೇಶಾದ್ಯಂತ ಏಕರೂಪದ ಗುರುತಿನ ಚೀಟಿ, *ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಡಿ ಈ ಪ್ರಕ್ರಿಯೆ, *ವಿವಿಧ ರಾಜ್ಯಗಳಲ್ಲಿ ಇದು ಅನುಷ್ಠಾನದ ಹಂತದಲ್ಲಿದೆ.
ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ನಂತೆ ನೀಡುವ 12 ಅಂಕಿಯ ಅಪಾರ್ ಕಾರ್ಡ್.
ಬೆಂಗಳೂರು.
ರಾಜ್ಯಾದ್ಯಂತ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ 12 ಅಂಕಿಯ ಸ್ವಯಂಚಾಲಿತ ಶಾಶ್ವತ 3 ಶೈಕ್ಷಣಿಕ ಖಾತೆ ನೋಂದಣಿ (ಅಪಾರ್) ಗುರುತಿನ ಚೀಟಿಗೆ ಸುಮಾರು 20 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊAಡಿದ್ದು, ಪೋಷಕರು ಈ ಬಗ್ಗೆ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ.
ರಾಜ್ಯದ ಒಟ್ಟು 75,960 ಶಾಲೆಗಳ 1.04 ಕೋಟಿ ವಿದ್ಯಾರ್ಥಿಗಳಿಗೆ ಅಪಾರ್ ಐಡಿ ಕಾರ್ಡ್ ನೀಡಲು ಉದ್ದೇಶಿಸಲಾಗಿದೆ. ಪ್ರತಿ ಶಾಲೆಗಳಲ್ಲಿ ಇದರ ಚಟುವಟಿಕೆ ಬಿರುಸು ಪಡೆದಿದ್ದು, ಇನ್ನಷ್ಟು ವೇಗ ನೀಡಲು ಇಲಾಖೆ ನಿರ್ಧರಿಸಿದೆ. ಆದರೆ ವಿವರಗಳನ್ನು ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಪೋಷಕರಿಂದ ಸಹಿ ಮಾಡಿದ ಒಪ್ಪಿಗೆ ನಮೂನೆಯನ್ನು ಶಾಲೆಗಳು ಪಡೆಯಬೇಕಾಗಿದ್ದು, ಅನೇಕ ಶಾಲೆಗಳು ಕೂಡ ಅಸಮಾಧಾನಗೊಂಡಿವೆ.
ಆಧಾರ್ ಕಾರ್ಡ್ನಂತೆ ಅಪಾರ್ ಕಾರ್ಡ್ ಕೂಡ ವಿಶಿಷ್ಟ 12 ಅಂಕಿಯನ್ನು ಹೊಂದಿದ್ದು, 2020 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಸರಿಸಿ ಶಿಕ್ಷಣ ಸಚಿವಾಲಯವು ಪ್ರಾರಂಭಿಸಿತ್ತು. ಪದವಿಗಳು, ವಿದ್ಯಾರ್ಥಿವೇತನ, ಪ್ರಶಸ್ತಿಗಳು ಮತ್ತು ಇತರ ಕ್ರೆಡಿಟ್ಗಳನ್ನು ಒಳಗೊಂಡAತೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ದಾಖಲಿಸುತ್ತದೆ. ಇದು ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಗುರುತಿಸುವಿಕೆಯಾಗಿ ಉಳಿಯುತ್ತದೆ.
ಶಾಲೆಗಳ ನಡುವೆ ಸುಲಭ ವರ್ಗಾವಣೆಗೆ ಸಹಾಯ ಮಾಡುತ್ತದೆ ಮತ್ತು ಕೇಂದ್ರದ ಪ್ರಕಾರ ಸರ್ಕಾರದಿಂದ ಇತರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಲ್ಲದೇ ವಿದ್ಯಾರ್ಥಿ ಕಲಿಯುವ ಶಾಲೆಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಡೇಟಾ, ಸಾಧನೆಗಳು ಹಾಗೂ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ನಿರ್ವಹಣೆ ಮಾಡಲಾಗುತ್ತದೆ. ಜತೆಗೆ ವಿದ್ಯಾರ್ಥಿವೇತನ ವಿವರವೂ ಇದರಲ್ಲೇ ಭದ್ರವಾಗಲಿದೆ, ವಿದ್ಯಾರ್ಥಿಯ ಐಡಿ ಬಳಸಿ ಇದನ್ನು ಪರಿಶೀಲಿಸಬಹುದು.ಆದರೆ ಎಲ್ಲ ಮಾಹಿತಿ ನೀಡುವುದರಿಂದ ಮುಂದೆ ತೊಂದರೆಯಾಗಬಹುದೆAಬ ಭೀತಿಯು ಪಾಲಕರಲ್ಲಿದೆ. ಅಲ್ಲದೇ ಇದು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಅಪರ್ ಹುಡುಕುವ ಎಲ್ಲಾ ವಿವರಗಳನ್ನು ಈಗಾಗಲೇ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್ ನೊಂದಿಗೆ ನಮೂದಿಸಲಾಗಿದೆ. ಆದಾಗ್ಯೂ, ಸಿಸ್ಟಮ್ಗಳನ್ನು ಸಿಂಕ್ ಮಾಡಲಾಗಿಲ್ಲ. ಆದ್ದರಿಂದ ಶಾಲೆಗಳು ಅಪರ್ನಲ್ಲಿ ಎಲ್ಲಾ ವಿವರಗಳನ್ನು ಮರು-ನಮೂದಿಸಬೇಕಾಗಿದ್ದು, ಶಿಕ್ಷಕರಿಗೆ ಸಾಕಷ್ಟು ಒತ್ತಡವಿದೆ.
ಪೋಷಕರೇ ಎಲ್ಲ ಪ್ರಕ್ರಿಯೆ ಮಾಡಬೇಕಿರುವುದು ಕಷ್ಟ
ಪ್ರತೀ ವಿದ್ಯಾರ್ಥಿ ಅಪಾರ್ ಐಡಿ ಮಾಡಬೇಕಾಗಿರುವ ಕಾರಣದಿಂದ ಅಪಾರ್ ಕಾರ್ಡ್ ನೋಂದಣಿ ಒಪ್ಪಿಗೆ ಪತ್ರವನ್ನು ಇದೀಗ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅಪಾರ್ ಗುರುತಿನ ಚೀಟಿಗೆ ವಿದ್ಯಾರ್ಥಿಗಳ ಹೆಸರು ನೋಂದಣಿಗೆ ಮೊದಲು ಪೋಷಕರ ಒಪ್ಪಿಗೆ ಕಡ್ಡಾಯ. ಮನೆಗೆ ನೀಡುವ ಒಪ್ಪಿಗೆ ಪತ್ರವನ್ನು ಪೋಷಕರು ಭರ್ತಿ ಮಾಡಿ ಜನನ ಪ್ರಮಾಣ ಪತ್ರ, ವಿದ್ಯಾರ್ಥಿಯ, ಪೋಷಕರ ಆಧಾರ್ ಪ್ರತಿಗಳಿಗೆ ಸಹಿ ಮಾಡಿ ಶಾಲೆಗೆ ವಾಪಸ್ ನೀಡುವ ಪ್ರಕ್ರಿಯೆ ಸ್ವಲ್ಪ ಕಷ್ಟವಾಗಿದೆ. ಜತೆಗೆ ಶಾಲೆಗಳಿಗೆ ಖುದ್ದಾಗಿ ಪೋಷಕರು ಬಂದು ಅರ್ಜಿ ಭರ್ತಿ ಮಾಡಬೇಕಿರುವ ಕಾರಣ ಈ ಪ್ರಯತ್ನಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಹೆಚ್ಚಿದೆ.
ಮಾಹಿತಿ ಕೊರತೆ
ಈ ಮಧ್ಯೆ ನೋಂದಣಿ ಬಗ್ಗೆ ಪೋಷಕರಲ್ಲಿ ಪೂರ್ಣ ಮಾಹಿತಿ ಇಲ್ಲದ ಕಾರಣದಿಂದ ಕೆಲವರು ಶಾಲೆಗಳಲ್ಲಿ ಆಕ್ಷೇಪ ವ್ಯಕ್ತಪಡಿಸುವ ಘಟನೆಯೂ ಕೆಲವೆಡೆ ನಡೆಯುತ್ತಿದೆ. ಈ ವೇಳೆ ಶಿಕ್ಷಣ ಇಲಾಖೆ, ಶಾಲಾ ಅಧ್ಯಾಪಕರು ಕೆಲವು ಪೋಷಕರಿಗೆ ಪೂರ್ಣವಾಗಿ ಮನದಟ್ಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರಿಗೆ ಸಂಪೂರ್ಣ ಮಾಹಿತಿ ನೀಡಿದ ಬಳಿಕ ಇದನ್ನು ಅನುಷ್ಠಾನಿಸಬೇಕು ಎಂದು ಕೆಲವು ಪೋಷಕರು ಒತ್ತಾಯಿಸಿದ್ದಾರೆ.
ಏನಿದು ಅಪಾರ್ ?
ಭಾರತದಲ್ಲಿ ಆಧಾರ್ ಮಾನ್ಯತೆಯನ್ನು ಪಡೆದಿರುವಂತೆಯೇ, ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಕಾಪಿಡಲು ಜಾರಿಗೆ ತಂದಿರುವುದೇ ಅಪಾರ್. ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ ಇನ್ನು ಮುಂದೆ ಅಪಾರ್ನಲ್ಲಿ ಇರಲಿದೆ. ಇದು ಭಾರತದ ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾತಿ ಪಡೆಯುವಾಗಲೂ ಆಧಾರವಾಗಲಿದೆ. ವಿದ್ಯಾರ್ಥಿಯ ಶೈಕ್ಷಣಿಕ ಟ್ರಾö್ಯಕ್ನ್ನು ಇದರಿಂದ ಪರಿಶೀಲಿಸಲು ಸಾಧ್ಯವಾಗಲಿದೆ.
ಆಧಾರ್ ಮಾಡಿಸಲು ಸಾಕಷ್ಟು ತೊಂದರೆ
ಕಳೆದ ತಿಂಗಳಲ್ಲಿ 15 ಲಕ್ಷ ಆಧಾರ್ ಕಾರ್ಡ್ಗಳನ್ನು ಪರಿಶೀಲಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ. ಆಧಾರ್ ಕಾರ್ಡ್ಗಳ ಸಂಗ್ರಹಣೆಯು 2023 ರಲ್ಲಿ ಪ್ರಾರಂಭವಾಗಿತ್ತು. ಇನ್ನು ವಿದ್ಯಾರ್ಥಿಗಳಿಗೆ ಆಧಾರ್ ಒದಗಿಸಲು ಒತ್ತಡ ಹೆಚ್ಚಾಗುತ್ತಿದ್ದಂತೆ, ಬೆಂಗಳೂರು ಒನ್ ಕೇಂದ್ರಗಳು ಗುರುತಿನ ಚೀಟಿಗಳನ್ನು ಪಡೆಯಲು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ತುಂಬಿ ತುಳುಕುತ್ತಿದ್ದವು. “ನಾನು ಆಧಾರ್ ಕಾರ್ಡ್ ಪಡೆಯಲು ಕೆಆರ್ ಪುರ ಬೆಂಗಳೂರು ಒನ್ಗೆ ಹೋಗಿದ್ದೆ. ಅಲ್ಲಿ ಒಂದೇ ಒಂದು ಕೌಂಟರ್ ಇತ್ತು, ಮೊದಲು ಟೋಕನ್ಗಳನ್ನು ನೀಡಿ ನಂತರ ಆಧಾರ್ಗೆ ನೋಂದಾಯಿಸುವ ಕೆಲಸ ಮಾಡಿದೆ. ಕೇಂದ್ರದಲ್ಲಿ 3-4 ಗಂಟೆ ತೆಗೆದುಕೊಂಡಿತು. ಸರದಿಯಲ್ಲಿ ಪೋಷಕರಿಂದ ತುಂಬಿತ್ತು. ಆಧಾರ್ ಇಲ್ಲದೆ ಪ್ರವೇಶ ಪಡೆಯುವುದು ಅಥವಾ ಟಿಸಿ ಪಡೆಯುವುದು ಅಸಾಧ್ಯ ಎಂದು ಶಾಲೆಗಳು ಹೇಳಿವೆ. ಒಟ್ಟಾರೆ ಅಪಾರ್ ಕಾರ್ಡ್ ಒಂದು ಕಡೆ ಉಪಯೋಗವಾದರೆ, ಇನ್ನೊಂದೆಡೆ ದುರುಪಯೋಗದ ಬಗ್ಗೆ ಅನುಮಾನವು ಇದೆ.