2024-25ನೇ ಶೈಕ್ಷಣಿಕ ವರ್ಷದಲ್ಲಿ ಸೀಟು ಹಂಚಿಕೆಯಲ್ಲಿ ಅಕ್ರಮ ಹಣ ವರ್ಗಾವಣೆ
ಬೆಂಗಳೂರು.
2024-25ನೇ ಶೈಕ್ಷಣಿಕ ವರ್ಷದಲ್ಲಿ ಸೀಟು ಹಂಚಿಕೆಯಲ್ಲಿ ವರದಿಯಾಗಿರುವ ಪದವಿಪೂರ್ವ ಎಂಜಿನಿಯರಿAಗ್ ಸೀಟು ಬ್ಲಾಕಿಂಗ್ ಜೋರಾಗಿದ್ದು, ಅಕ್ರಮ ಹಣ ವರ್ಗಾವಣೆ ವಾಸನೆ ಬಂದಿರುವ ಕಾರಣ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದ್ದು ಪರಿಶೀಲಿಸುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಬಳಿ ಸೀಟು ಹಗರಣದ ಬಗ್ಗೆ ಮಾಧ್ಯಮ ವರದಿಗಳ ಆಧಾರದ ಮೇಲೆ ಇಡಿ ವಿವರಗಳನ್ನು ಕೇಳಿದೆ.
ಕೇಂದ್ರ ಸಂಸ್ಥೆ ಕಾಲೇಜು, ಸೀಟುಗಳ ಸಂಖ್ಯೆ, ವಿದ್ಯಾರ್ಥಿಗಳು ಮತ್ತು ವಹಿವಾಟು ನಡೆಸಿದ ಒಟ್ಟು ಹಣದ ಮಾಹಿತಿಯನ್ನು ಕೆಇಎ ನೀಡಬೇಕಿದ್ದು, ವಿವರಣೆ ನೀಡಲಾಗಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾತನಾಡಿ, “ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಹೆಚ್ಚಿನ ವಿವರಗಳನ್ನು ತನಿಖಾಧಿಕಾರಿಗಳೊಂದಿಗೆ ಲಭ್ಯವಾಗುವಂತೆ ನೀಡಲಾಗಿದೆ. ಅಲ್ಲದೇ ಎಫ್ಐಆರ್ ನಲ್ಲಿ ದಾಖಲಾದ ಅಂಶಗಳನ್ನೇ ಇಡಿಗೆ ತಿಳಿಸಿದ್ದೇವೆ ಎಂದಿದ್ದಾರೆ.
2000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟಿಸ್.
ಉನ್ನತ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿದ್ದರೂ, ವಿದ್ಯಾರ್ಥಿಗಳು ಕಾಲೇಜಿಗೆ ವರದಿ ಮಾಡದಿರುವ ಅನುಮಾನದ ಹಿನ್ನೆಲೆಯಲ್ಲಿ, ಕೆಇಎ ಅಂತಹ 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟಿಸ್ಗಳನ್ನು ನೀಡಲಾಗಿದೆ. ಅಲ್ಲದೇ ನೋಂದಣಿಯ ಜೊತೆಗೆ ನೀಡಿದ ಇ-ಮೇಲ್ ವಿಳಾಸ ಮತ್ತು ಹೆಚ್ಚಿನ ಇ-ಮೇಲ್ಗಳ ಮೂಲಕ ವಿವರಣೆಯನ್ನು ಇಡಿ ಪರಿಶೀಲನೆ ಮಾಡುತ್ತಿದೆ. ಇನ್ನು ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸಗಳನ್ನು ಬಳಸಿಕೊಂಡು ಅನೇಕ ನೋಂದಣಿಗಳನ್ನು ಮಾಡಲಾಗಿದೆ ಎಂದು ಕೆಇಎ ಅಧಿಕಾರಿಗಳು ನೀಡಿದ ದೂರಿನಲ್ಲಿ ಗೊತ್ತಾಗಿದೆ. ಅಲ್ಲದೇ ಹಿಂದಿನ ವರ್ಷಗಳ ದಾಖಲಾತಿಗಳನ್ನು ಸಹ ವಿಚಾರಣೆಗೆ ಪರಿಗಣಿಸುವಂತೆ ಕೆಇಎ ತಿಳಿಸಿದೆ.
——–
60 ಲಕ್ಷದಿಂದ 80 ಲಕ್ಷದವರೆಗೆ ಮಾರಾಟ
ಈ ವರ್ಷ ಕೆಲವು ಉನ್ನತ ಕಾಲೇಜುಗಳಲ್ಲಿ ನೂರಾರು ಸೀಟುಗಳು ಭರ್ತಿಯಾಗಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊAಡ ಕಿಡಿಗೇಡಿಗಳು ಬೇಡಿಕೆಯುಳ್ಳ ಸಿಎಸ್ ಸೇರಿದಂತೆ ಇತರೆ ಸೀಟುಗಳನ್ನು ಹೆಚ್ಚಿನ ಹಣಕ್ಕೆ ಮಾರಾಟಮಾಡಿಕೊಳ್ಳಲಾಗಿದೆ. ಅದರಲ್ಲೂ ಮ್ಯಾನೇಜ್ಮೆಂಟ್ ಕೋಟಾದ ಸೀಟುಗಳು 60 ಲಕ್ಷದಿಂದ 80 ಲಕ್ಷದವರೆಗೆ ಮಾರಾಟವಾಗಿವೆ. ಈ ಹಿನ್ನೆಲೆಯಲ್ಲಿ ಸೀಟು ಆಯ್ಕೆಯಲ್ಲಿ ವಂಚನೆ ಚಟುವಟಿಕೆಗಳು ನಡೆದಿವೆ ಎಂದು ಕೆಇಎ ಅಧಿಕಾರಿಗಳು ಶಂಕಿಸಿದ್ದಾರೆ.
——————-
ಪ್ರಕರಣದ ತನಿಖೆಯ ಹಂತದಲ್ಲಿದ್ದಾಗ, ಇಡಿಗೆ ಯಾವುದೇ ವಿದ್ಯಾರ್ಥಿಗಳು ಮತ್ತು ಕಾಲೇಜುಗಳ ವಿವರಗಳನ್ನು ಹಂಚಿಕೊಳ್ಳಲು ಅವಕಾಶವಿಲ್ಲ. “ನಾವು ಅವರಿಗೆ ಮಾಹಿತಿ ನೀಡಿದ್ದರೂ ಅದು ಅಪೂರ್ಣವಾಗಿರುತ್ತದೆ. ಏಕೆಂದರೆ ತನಿಖಾ ಸಂಸ್ಥೆ ಈಗಾಗಲೇ ಕೆಲವರನ್ನು ಬಂಧಿಸಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
-ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ