ಭದ್ರಾವತಿ: ಶಾಸಕ ಬಿ.ಕೆ.ಸಂಗಮೇಶ್ವರ್ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಪರೀಕ್ಷೆ ಸಲಕರಣೆ ನೀಡುವ ಸಹಾಯ ಹಸ್ತಕ್ಕೆ ಮುಂದಾಗಿದೆ ಎಂದು ಬಿ.ಕೆ.ಸಂಗಮೇಶ್ವರ ಫೌಂಡೇಶನ್ ಅಧ್ಯಕ್ಷರು ಹಾಗೂ ನಗರಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ಹೇಳಿದರು.

ನಗರದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬಿ.ಕೆ.ಸಂಗಮೇಶ್ವರ ಫೌಂಡೇಶನ್ ವತಿಯಿಂದ ಮೊದಲನೆಯ ಹೆಜ್ಜೆಯಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ  ಪರೀಕ್ಷಾ ರಟ್ಟು, ಜಾಮೀಟ್ರಿ ಹಾಗೂ ಪೆನ್ನು ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಉದ್ಯಮಿ ಬಿ.ಕೆ.ಜಗನಾಥ್ ಮಾತನಾಡಿ, ಯಾವೊಬ್ಬ ವಿದ್ಯಾರ್ಥಿಗಳು ವಿದ್ಯಾಭ್ಯಾಸ ದಿಂದ ವಂಚಿತವಾಗಬಾರದು ಎಂಬ ಪರಿಕಲ್ಪನೆ ಹೊತ್ತಿರುವ ರಾಜ್ಯ ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದೆ. ಆದರೆ ಅವುಗಳ ನಡುವೆಯೂ ಪರೀಕ್ಷೆ ಸಮಯದಲ್ಲಿ ಉಪಕರಣ ನೀಡಿ ಪ್ರೋತ್ಸಾಹ ನೀಡುವ ಕೆಲಸ ಫೌಂಡೇಶನ್ ಹಮ್ಮಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಲತಾ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಮುಖಂಡರಾದ ಐ.ವಿ ಸಂತೋಷ್. ದಾಸ್. ಅಂತೋನಿ ವಿಲ್ಸನ್. ವಿಕ್ರಂ,ಅಪ್ಪು,ಅಭಿ, ಪ್ರಸನ್ನ, ಸಂಪತ್.  ಮುರಳಿ ಚಂದ್ರು  ಹಾವು ಮಂಜ. ವಸಂತ. ಪ್ರಕಾಶ, ಶ್ಯಾಮ್  ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು ಸಿಬ್ಬಂದಿಗಳು ಇದ್ದರು

Share.
Leave A Reply

Exit mobile version