ದಾವಣಗೆರೆಯಲ್ಲಿ ನಡೆಯುವ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮಹಿಳೆಗೆ ಅಗತ್ಯವಾದ ಚರ್ಚೆಗಳು ನಡೆಯಲಿದ್ದು, ಇದರ ನೇತೃತ್ವವನ್ನು ವೀರಶೈವ ಮಹಾಸಭಾ‌ ರಾಜ್ಯ ಘಟಕದ ಕಾರ್ಯಾಕಾರಿ ಸಮಿತಿ ನಿರ್ದೇಶಕಿ ಶಶಿಕಲಾ ನಲ್ಕುದುರೆ ವಹಿಸಿಕೊಳ್ಳುವರು. ಹಾಗಾದ್ರೆ ಶಶಿಕಲಾ ನಲ್ಕುದುರೆ ಯಾರು, ಅವರು ಅಧಿವೇಶನದಲ್ಲಿ ಚರ್ಚೆ ಮಾಡುವ ವಿಷಯಗಳೇನು ಎಂಬುದರ ಸಂಪೂರ್ಣ ಡೀಟೇಲ್ಸ್ ನಿಮ್ಮ ಮುಂದೆ.

ನಂದೀಶ್ ಭದ್ರಾವತಿ, ದಾವಣಗೆರೆ

ದಾವಣಗೆರೆಯಲ್ಲಿ ನಡೆಯುವ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮಹಿಳೆಯರ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿದ್ದು, ಇದರಲ್ಲಿ ವೀರಶೈವ ಮಹಾಸಭಾ‌ ರಾಜ್ಯ ಘಟಕದ ಕಾರ್ಯಾಕಾರಿ ಸಮಿತಿ ನಿರ್ದೇಶಕಿ ಶಶಿಕಲಾ ನಲ್ಕುದುರೆ ತಮ್ಮದೇ ಆದ ವಿಷಯವನ್ನು ಮಂಡನೆ ಮಾಡುವರು.

ಸದಾ ಲವಲವಿಕೆ, ಮಹಿಳೆಯರ ಸ್ಥಾನಮಾನ, ಗೌರವ, ಭದ್ರತೆ, ಮಹಿಳೆಯರಿಗೆ ಮೀಸಲಾತಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಶಶಿಕಲಾ ನಲ್ಕುದುರೆ ತಮ್ಮದೇ ಆದ ಚರ್ಚೆ ಮಂಡಿಸುವರು.

ಮಹಿಳೆ ವಿಷಯದಲ್ಲಿ ಸದಾ ಹೋರಾಟ ಮಾಡುವ ಶಶಿಕಲಾ

ಮೊದಲಿನಿಂದಲೂ ಸ್ತ್ರೀ ವಿಷಯದಲ್ಲಿ ಹೋರಾಟ ಮಾಡಿಕೊಂಡಿರುವ ಇವರು ಅಪ್ಪಟ ಕಾಂಗ್ರೆಸ್ ವಕ್ತಾರೆ. ಇವರಿಗೆ ಬಾಬಾಸಾಹೇಬ ಅಂಬೇಡ್ಕರ ಹಾಗೂ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಕೊಡಮಾಡುವ ಮಾನವ ಧರ್ಮ 4ನೇ ಕನ್ನಡ ಮಾಧ್ಯಮ ಸಮಾವೇಶ ಹಾಗೂ ಜನಸೇವಾರತ್ನ ರಾಜ್ಯ ಪ್ರಶಸ್ತಿಪ್ರಧಾನ ಸಮಾರಂಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪತ್ರ ನೀಡಲಾಗಿದೆ.

ಮಾನವ ಧರ್ಮ ಪರಿಪಾಲನೆ

ನಾಡು-ನುಡಿ ನೆಲ-ಜಲ ಭಾಷೆಗಾಗಿ ಅಕ್ಷರ ಸೇವೆಗಾಗಿ ಮತ್ತು ಮಾನವ ಧರ್ಮ ಪರಿಪಾಲನೆಗಾಗಿ ಹಾಗೂ ಸಮಾಜಸೇವೆಗಾಗಿ ಶ್ರಮಿಸಿದ ಸಾಧಕಿ ಎಂ.ಜಿ.ಶಶಿಕಲಾ ಮೂರ್ತಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರ ನೀಡಲಾಗಿದೆ.

ಕಾಂಗ್ರೆಸ್ ನಾಯಕಿ ಶಶಿಕಲಾ

ಚನ್ನಗಿರಿ ತಾಲೂಕಿನ, ನಲ್ಕುದುರೆ ಗ್ರಾಮದ ಎಂ.ಜಿ.ಶಶಿಕಲಾ ಮೂರ್ತಿ ಮಾಯಕೊಂಡ‌ ಕ್ಷೇತ್ರದ, ಬಸವಾ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿದ್ದರು. ಶಶಿಕಲಾ ಮೂರ್ತಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಈ ಹುದ್ದೆ ನೀಡಲಾಗಿತ್ತು.ಪಕ್ಷದ ಬಲವರ್ಧನೆಗೆ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಸ್ಥಳೀಯ ಮುಖಂಡರ ಸಹಯೋಗದೊಂದಿಗೆ ಪಕ್ಷವನ್ನು ಸಂಘಟಿಸಲು ಇವರು ಪ್ರಮುಖರು.

ಅಧಿವೇಶನದಲ್ಲಿ ಮಹಿಳೆಯರ ಕುರಿತ ಚರ್ಚೆ

ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನದಲ್ಲಿ ಚರ್ಚೆಗಳು ಇವರ ನೇತೃತ್ವದಲ್ಲಿ ನಡೆಯಲಿದೆ. ಭವಿಷ್ಯದ ಭದ್ರತೆಗೆ ಹಾಗೂ ಭವಿಷ್ಯ ಸಾಕಾರಗೊಳ್ಳಲು ಇವರ ಪಾತ್ರ ಅನನ್ಯವಾಗಿದೆ. ಇದರಿಂದ ಮಹಿಳೆಯರಿಗೆ ಸಾಕಷ್ಟು ಅರಿವು ಮೂಡಿಸಲಿದೆ ಎಂಬುದು ಮಹಿಳೆಯಾಗಿ ನನ್ನ ಅಭಿಪ್ರಾಯವಾಗಿದೆ ಎಂಬುದು ಶಶಿಕಲಾ ಅಭಿಪ್ರಾಯ.

ಸ್ವಾವಲಂಬಿ ಬದುಕಿನ ಬಗ್ಗೆ ಚರ್ಚೆ

ಮಹಿಳೆಯರ ಆರೋಗ್ಯ, ಕಾನೂನು ಅರಿವು ,ಶಿಕ್ಷಣದ ಅರಿವು ಸಾಮಾಜಿಕ ಅರಿವು ಭದ್ರತೆ ಹಾಗೂ ಯಾವೆಲ್ಲ ರೀತಿಯಲ್ಲಿ ಸ್ವಾವಲಂಬನೆ ಬಗ್ಗೆ ಮಹಾಅಧಿವೇಶನದ ಮುಖಾಂತರ ಸುಭದ್ರತೆ ನೀಡಲಾಗುವುದ. ಅದರಲ್ಲೂ ಯುವತಿಯರಿಗೆ ಕಾಲೇಜು ಹಂತದಲ್ಲಿರುವ ಯುವತಿಯರಿಗೆ ಅವರ ಮುಂದಿನ ಉದ್ಯೋಗ,ಶೈಕ್ಷಣಿಕ ಭದ್ರತೆ ಬಗ್ಗೆ ಹಲವಾರು ಚರ್ಚೆ ನಡೆಯಲಿದೆ ಎಂದು ಶಶಿಕಲಾ ಹೇಳುತ್ತಾರೆ. ನಮ್ಮ ಸಮಾಜದಲ್ಲಿರುವ ಪ್ರತಿಯೊಬ್ಬ ಮಹಿಳೆಯರು ಸ್ವಾಬಲಂಬಿ ಜೀವನಕಟ್ಟಿಕೊಂಡು ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಹಿಳೆಯರ ಪಾತ್ರ ಹೆಚ್ಚಾಗಿದೆ ಆದ್ದರಿಂದ ಹೆಚ್ವಿನ ಸಂಖ್ಯೆಯಲ್ಲಿ ಮಹಿಳೆಯರು ಅಧಿವೇಶನದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದ್ದಾರೆ.

.

Share.
Leave A Reply

Exit mobile version