ದಾವಣಗೆರೆ : ಆತ ಹುಬ್ಬಳ್ಳಿಯ ಹೆಸ್ಕಾಂ ನೌಕರ, ಇಲ್ಲಿ 19 ವರ್ಷಗಳಿಂದ ಕೆಲಸ ಮಾಡಿ, ಕೈ ತುಂಬಾ ಕಾಸು ಮಾಡಿಕೊಂಡಿದ್ದಾನೆ…ಇದೇ ಅವರಿಗೆ ಮುಳುವಾಗಿದ್ದು, ಧಾರವಾಡ ಲೋಕಾಯುಕ್ತರು ಬೆಳ್ಳಂ, ಬೆಳ್ಳಗ್ಗೆ ದಾವಣಗೆರೆಗೆ ಆಗಮಿಸಿದ್ದರು.
ಹೌದು, ಅಕ್ರಮ ಆಸ್ತಿಗಳಿಕೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹೆಸ್ಕಾಂನ ಉಗ್ರಾಣದಲ್ಲಿ ಸ್ಟೋರ್ ಕೀಪರ್ ಆಗಿ ನಿವೃತ್ತಿ ಹೊಂದಿದ್ದ ಬಸವರಾಜ್ ಮಳಿಮಠ ಅವರ ದಾವಣಗೆರೆ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿನಡೆಸಿದೆ.
19ವರ್ಷಗಳ ಕಾಲ ಕೆಲಸ, ಇತ್ತೀಚೇಗಷ್ಟೇ ನಿವೃತ್ತಿ
ಕಳೆದ 19 ವರ್ಷಗಳ ಕಾಲ ಹುಬ್ಬಳ್ಳಿ ಹೆಸ್ಕಾಂ ಉಗ್ರಾಣದಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಅಕ್ಟೋಬರ್ 3೦ ರಂದು ಬಸವರಾಜ್ ಮಳಿಮಠ ನಿವೃತ್ತಿ ಹೊಂದಿದ್ದರು. ಅವರು ಹೆಸ್ಕಾಂ ಸ್ಟೋರ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ ದೂರಿತ್ತು. ಈ ಹಿನ್ನೆಲೆಯಲ್ಲಿ ಧಾರವಾಡ ಲೋಕಾಯುಕ್ತ ಅಧಿಕಾರಿಗಳ ತಂಡದವರು ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಮೂಲತಃ ರಾಣೆಬೆನ್ನೂರು ವಾಸಿ
ಮೂಲತಃ ರಾಣೆಬೆನ್ನೂರಿನ ನಿವಾಸಿಯಾಗಿರುವ
ಬಸವರಾಜ್ ಮಳಿಮಠ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆಯ ಸಾಕಷ್ಟು ದೂರುಗಳಿದ್ದವು. ದಾವಣಗೆರೆಯ ಜಯನಗರದಲ್ಲಿನ ಮನೆ ಮೇಲೆ ಧಾರವಾಡ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ದಾಖಲೆಗಳು ದೊರೆತಿಲ್ಲ ಎನ್ನಲಾಗಿದೆ