ದಾವಣಗೆರೆ : ಕಳೆದ ಎರಡು ದಶಕಗಳಿಂದ ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಂಸದರಾದ ಜಿ.ಎಂ ಸಿದ್ದೇಶ್ವರ ಅವರ ಅಭಿವೃದ್ಧಿ ಕಾರ್ಯಗಳೇ ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ತಿಳಿಸಿದ್ದಾರೆ. ಇಂದು ನಗರದ ಇಂಡಸ್ಟ್ರಿಯಲ್ ಏರಿಯಾದ  ಎಂ.ಆನಂದ್ ಅಭಿಮಾನಿಗಳ ಬಳಗದಿಂದ ದೇಶಕ್ಕಾಗಿ ಮೋದಿಜೀ ಮೋದಿಜಿಗಾಗಿ ನಾವುಗಳು ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ರವರನ್ನ ಸನ್ಮಾನಿಸಿ ಮಾತನಾಡುತ್ತಾ,  ಚುನಾವಣೆ ಎಂದರೆ ಸ್ಪರ್ಧೆ ಇರುತ್ತದೆ ಪ್ರತಿಸ್ಪರ್ಧಿ ಯಾರೇ ಇರಲಿ. ಮಾಡಿದ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿವೆ. ಜನರ ನಿರ್ಣಯವೇ ಅಂತಿಮ. ದೇಶದ ಭದ್ರತೆ, ದೇಶದ ರಕ್ಷಣೆ ಹಾಗೂ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಯವರು ಈ ದೇಶದ ಪ್ರಧಾನಿಯಾಗಬೇಕು. ಇದು ಪ್ರತಿಯೊಬ್ಬ ಭಾರತೀಯರ ಕನಸು. ಹೀಗಾಗಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರನ್ನೇ ಗೆಲ್ಲಿಸುವುದು ಅನಿವಾರ್ಯವಾಗಿದೆ. 

ಬಿಜೆಪಿ ಗೆಲ್ಲಿಸಲು ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ಚುನಾವಣೆಯಲ್ಲಿ ಗೆದ್ದಿರುವ ಸಿದ್ದೇಶ್ವರ ಅವರು ಸಾವಿರಾರು ಕೋಟಿ ಅನುದಾನ ತಂದು ಮಾದರಿ ಜಿಲ್ಲೆಯನ್ನಾಗಿ ಮಾಡಿದ್ದಾರೆ.  ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಬೇಕಿದೆ. 

ಪಕ್ಷಕ್ಕಿಂತ ದೊಡ್ಡವರು ನಾವು ಯಾರು ಅಲ್ಲಾ ಮೋದಿಯವರು ಮಾಡಿದ ಅಭಿವೃದ್ಧಿ ಕೆಲಸಗಳನ್ನ ಮಾತ್ರ ಪರಿಗಣಿಸಬೇಕು ಎಂದು ತಿಳಿಸಿದರು. ಪಕ್ಷ ಮತ್ತು ಕುಟುಂಬ ಎಂದರೆ ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿ ವರಿಷ್ಠರು ಹಾಗೂ ಜಿ. ಎಂ ಸಿದ್ದೇಶ್ವರ ಅವರಿಗಿದೆ.

ಈ ಬಾರಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಸರ್ವರನ್ನು ಸಮಾನವಾಗಿ ಕಾಣುವ, ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ನೀಡಿ ಸಮಾನತೆ ತೋರಿರುವ ಸಿದ್ದೇಶ್ವರ ಅವರಿಗೆ ನಾವು ಕೈ ಜೋಡಿಸಬೇಕಿದೆ ಎಂದು ಆನಂದರಾಜ್ ಮನವಿ ಮಾಡಿಕೊಂಡರು.

ಅಭ್ಯರ್ಥಿ ಗಾಯತ್ರಿಸಿದ್ದೇಶ್ವರವರಎಲ್ಲರನ್ನೂ ಉದ್ದೇಶಿಸಿ ನಿಮ್ಮ ಪ್ರೀತಿ ಅಭಿಮಾನ ನಮ್ಮ ಕುಟುಂಬದ ಮೇಲೆ ಮೂರು ದಶಕಗಳಿಂದ ಆಶೀರ್ವಾದಿಸಿತಲೇ ಬಂದಿದಿರಿ ಈ ಬಾರಿಯೂ ನಿಮ್ಮ ಆಶೀರ್ವಾದ ಇರಲಿ ಎಂದು ಮನವಿ ಮಾಡಿಕೊಂಡರು.

ಮುಖ್ಯ ಅತಿಥಿಯಾಗಿದ್ದ ಎಂ.ಆನಂದ್ ರವರು ಮಾತನಾಡುತ್ತಾ,  ವಿಶ್ವ ಕಂಡ ಅತ್ಯಂತ ಬಲಿಷ್ಟ ನಾಯಕ ನರೇಂದ್ರಮೋದಿಜೀಯವರನ್ನ ಸ್ವಕುಟಂಬ ಸಮೇತರಾಗಿ ಬೆಂಬಲಿಸಬೇಕಿದೆ  ಎಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ ಮಾಜಿ ಮಹಾಪೌರ ಎಸ್.ಟಿ.ವಿರೇಶ್.ಪಾಲಿಕೆ ಮಾಜಿ ಸದಸ್ಯೆ ಜಯಮ್ಮ.  ಶೋಷಿತ ವರ್ಗಗಳ ಒಕ್ಕೂಟದ ಬಾಡದ ಆನಂದರಾಜ್.ಆಟೋ ಚಾಲಕರ ಸಂಘದ ಅಧ್ಯಕ್ಷ ಕಲ್ಲೇಶಪ್ಪ. ಸಿದ್ದಲಿಂಗಪ್ಪ ಸಿದ್ರಾರಾಮಪ್ಪ.ಲಂಬಾಣಿ ಸಮಾಜದ ಮುಖಂಡ ನಾಗರಾಜ್ ನಾಯ್ಕ್.ನೇಕಾರ ಸಮಾಜದ ಮುಖಂಡ ವೆಂಕಟೇಶ್.ಉಪ್ಪಾರ ಸಮಾಜದ ಯುವ ಮುಖಂಡ ಮಂಜುನಾಥ್.ಇನ್ನೂ ಮುಂತಾದವರಿದ್ದರು.

Share.
Leave A Reply

Exit mobile version