ದಾವಣಗೆರೆ : ದೇಶದಲ್ಲಿ ನಾರಿ ಶಕ್ತಿ ಅನಾವರಣಕ್ಕೆ ಮೋದಿ ಮುನ್ನುಡಿ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿದರು.

ಬಳ್ಳಾರಿ ಜಿಲ್ಲೆ, ಹರಪನಹಳ್ಳಿ ತಾಲೂಕಿನ ಹಿರೆಮೇಗಳಗೆರೆ ಗ್ರಾಮದ  ಉಚ್ಚಂಗೆಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಭಾಗವಹಿಸಿ ದೇವರ ದರ್ಶನ ಪಡೆದರು.

ದೇವರ ದರ್ಶನದ ಬಳಿಕ ಗ್ರಾಮದ ಮುಖಂಡರ ಮನೆಗಳಿಗೆ  ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿ, ಲೋಕಸಭಾ ಚುನಾವಣೆಯ ಮತದಾನಕ್ಕೆ  ದಿನಗಣನೆ ಆರಂಭವಾಗಿದೆ.  ಪ್ರಧಾನಿ ನರೇಂದ್ರ ಮೋದಿ  ಅವರು 10 ವರ್ಷಗಳ ಕಾಲ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ನಾವು  ಮತ ಕೇಳಬೇಕು. ಹಿರೆಮೇಗಳಗೆರೆ ಹರಪನಹಳ್ಳಿ ತಾಲೂಕಿನ ಜೊತೆ ಬಳ್ಳಾರಿ ಜಿಲ್ಲೆಗೆ ಸೇರಿದರೂ ಹರಪನಹಳ್ಳಿ ತಾಲೂಕು ಮಾತ್ರ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಭಾವನಾತ್ಮಕವಾಗಿ ಹಿರೆಮೇಗಳಗೆರೆ ದಾವಣಗೆರೆ ಜೊತೆ  ಹೊಂದಿಕೊಂಡಿದೆ  ಎಂದರು.

ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದಲ್ಲಿ  ಸಾಕಷ್ಟು  ಅಭಿವೃದ್ಧಿ ಕೆಲಸಗಳು ಆಗಿವೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸಬ್  ಕಾ ಸಾತ್, ಸಬ್ ಕಾ ವಿಕಾಸ್ ಅನ್ನೋದು ಕೇವಲ ಘೋಷ  ವಾಕ್ಯವಾಗಿಲ್ಲ. ಅದು ಅಕ್ಷರಶಃ ಜಾರಿಯಾಗಿದೆ. 

ಮಹಿಳಾ ವಿಕಾಸ್, ನಾರಿ ಶಕ್ತಿಯ  ಬಗ್ಗೆ ನರೇಂದ್ರ  ಮೋದಿ ಅವರು  ಕೇವಲ ಭಾಷಣ ಮಾಡಿ ಸುಮ್ಮನಾಗಿಲ್ಲ. ನನ್ನಂತಹ ಸಾಕಷ್ಟು ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ನೀಡಿ ನಾರಿ  ಶಕ್ತಿಗೆ ಮುನ್ನುಡಿ  ಬರೆದಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಹೆಣ್ಣು ಮಕ್ಕಳಿಗೆ  ಗೌರವ, ಶಿಕ್ಷಣ, ಮೂಲಭೂತ ಹಕ್ಕುಗಳು ಸರಿಯಾದ ರೀತಿಯಲ್ಲಿ ಸಿಗಬೇಕೆಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ. ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ  ಮಾಡಲು ನಾವು ಶ್ರಮಿಸಬೇಕು. ನನ್ನನ್ನು ನೀವು  ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ ನರೇಂದ್ರ ಮೋದಿ ಅವರು  ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ  ಎಂದು ಕರೆ ನೀಡಿದರು.

ಹಿರೆಮೇಗಳಗೆರೆ ಗ್ರಾಮದ ಮಹಿಳೆಯರು  ಗಾಯತ್ರಿ ಸಿದ್ದೇಶ್ವರ್ ಅವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗರ ಮಾಡಿಕೊಂಡರು. ಈ ವೇಳೆ  ಬಿಜೆಪಿ ಮುಖಂಡ ಮಹಾಬಲೇಶ್ ಗೌಡರು, ನನ್ನಯ್ಯ ಸಿ.ವಾಡೆನಹಳ್ಳಿ,  ಮಂಜುನಾಥ್, ಫಣಿಯಾಪುರ ಲಿಂಗರಾಜು ಮತ್ತು  ದೇವಸ್ಥಾನ ಸಮಿತಿ ಸದಸ್ಯರು  ಇದ್ದರು.

Share.
Leave A Reply

Exit mobile version