ಯಾವುದಾದರೂ ಒಂದು ದೊಡ್ಡ ಸಮಾವೇಶ ನಡೆಯಬೇಕಾದರೆ ಅದಕ್ಕೆ ಎಲ್ಲರನ್ನೂ ಒಟ್ಟುಗೂಡಿಸುವ ನಾಯಕ ಬೇಕಿದೆ. ಅಂತಹ ನಾಯಕನನ್ನು ದಾವಣಗೆರೆಯಲ್ಲಿ ನಡೆಯಲಿರುವ 24 ನೇ  ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ‌. ಹಾಗಾದ್ರೆ ಅವರ್ಯಾರು ಎಂಬ ಕುತುಹೂಲ ಇದ್ದೇ ಇರುತ್ತದೆ…ಹಾಗಾದ್ರೆ ಈ ಸುದ್ದಿ ತಪ್ಪದೇ ಓದಿ.

 ನಂದೀಶ್ ಭದ್ರಾವತಿ, ದಾವಣಗೆರೆ

ದಾವಣಗೆರೆಯಲ್ಲಿ ನಡೆಯಲಿರುವ 24 ನೇ  ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದ ಸಾರಥಿ ದೇವರಮನೆ ಶಿವಕುಮಾರ್ ಆಗಿದ್ದು, ಇವರ ನೇತೃತ್ವದಲ್ಲಿ ದಾವಣಗೆರೆ ಸಜ್ಜುಗೊಂಡಿದೆ.

ಸದ್ಯ ದೇವರ ಮನೆ ಶಿವಕುಮಾರ್ ವೀರಶೈವ ಮಹಾಸಭಾ ಅಧಿವೇಶನದ ಜಿಲ್ಲಾಧ್ಯಕ್ಷರಾಗಿದ್ದು, ಸಮಾಜದಲ್ಲಿನ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಎಲ್ಲ ವೀರಶೈವ ಲಿಂಗಾಯಿತ ಮುಖಂಡರನ್ನು ಆಹ್ವಾನ ಮಾಡಿದ್ದಾರೆ ಅದಕ್ಕಾಗಿಯೇ ಈಗಾಗಲೇ ಪೂರ್ವ ಸಿದ್ಧತೆ ಕೈಗೊಂಡಿದ್ದಾರೆ.

ಪ್ರತಿ ನಾಲ್ಕುವರ್ಷಕ್ಕೊಮ್ಮೆ ನಡೆಯುವ ಈ ಮಹಾಅಧಿವೇಶನ ಎರಡು ಬಾರಿ ಮುಂದೂಡಲಾಗಿತ್ತು. ಆದರೂ ಪಟ್ಟು ಬಿಡದೇ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮೂರನೇ ಬಾರಿಯ ಅಧಿವೇಶನಕ್ಕೆ ಸಜ್ಜಾಗಿದ್ದಾರೆ.

ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿರುವ ದೇವರ ಮನಿ ಶಿವಕುಮಾರ್ ಸಂಘಟನಾ ದೃಷ್ಟಿಯಿಂದ ಸಹನೆ, ತಾಳ್ಮೆಯಿಂದ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುತ್ತಿದ್ದಾರೆ. ಪೆಂಡಾಲ್ ನಿರ್ಮಾಣ, ಊಟ, ವಸತಿ ಸೇರಿದಂತೆ ಜನರನ್ನು ಸೇರಿಸುವ ಹೊಣೆಯನ್ನು ಹೊತ್ತಿದ್ದಾರೆ.

ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ಆಶಯ ಹೊತ್ತಿರುವ ದೇವರಮನೆ ಶಿವಕುಮಾರ್ ಅಧಿವೇಶನಕ್ಕೆ ಕರ್ನಾಟಕ, ಕೇರಳ,ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ತೆಲಂಗಾಣ, ಉತ್ತರಪ್ರದೇಶ, ಹರ್ಯಾಣ, ಪಂಜಾಬ್ ಸೇರಿ ದೇಶದ ವಿವಿಧ ಭಾಗಗಳಿಂದ ಒಂದು ಲಕ್ಷ ಜನರನ್ನು ಕರೆಸುತ್ತಿದ್ದಾರೆ. 

ಪ್ರಸ್ತುತ ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ದೇವರ ಮನೆ ಶಿವಕುಮಾರ್, ಬೇರೆ ಸಮುದಾಯದವರು ಹೇಗೆ ಅಧಿವೇಶನ ನಡೆಸುತ್ತಾರೆ, ಅದೇ ರೀತಿ ಈ ಅಧಿವೇಶನ ನಡೆಯುತ್ತಿದೆ. ಸಮಾಜದ ಪ್ರಸ್ತುತ ಸಮಸ್ಯೆ ಸವಾಲುಗಳ ಬಗ್ಗೆ ಚರ್ಚೆ ಮಾಡುತ್ತೆವೆ, ಎಲ್ಲರನ್ನೂ ಜೊತೆಗೆ ಕರೆದುಕೊಂಡು‌ ಹೋಗುವ ನಿಟ್ಟಿನಲ್ಲಿ ಈ ಅಧಿವೇಶನ ನಡೆಯಲಿದೆ.  ಮಹಿಳೆಯರ, ಯುವಕರ, ರೈತರ, ಗೋಷ್ಟಿಗಳಿರುತ್ತದೆ. ಧರ್ಮ ಸಭೆ ಅಧಿವೇಶನ ಇದೆ. ಕೊನೆಯ ದಿನ 24 ರಂದು ಸಮಾಜದ ನಿರ್ಣಯವಿರುತ್ತದೆ ಅಂದು ರಾಜ್ಯದ ಚರ ಗುರು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಸಮಾಜದ ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಾಹಿತಿಗಳು, ಚಿಂತಕರು, ಕಲಾವಿದರು ಭಾಗವಹಿಸುತ್ತಿದ್ದಾರೆ. ಲಕ್ಷಾಂತರ ಸಮಾಜದ‌ ಜನರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ವಿಷಯಗಳ ಗೊತ್ತುವಳಿ

ಸಮಾಜ ಸಂಘಟನೆ, ಒಳಪಂಗಡಗಳ ಭೇದ ಮರೆತು ಒಗ್ಗಟ್ಟು ಪ್ರದರ್ಶನ, ಸಮಸ್ತ ವೀರಶೈವ ಲಿಂಗಾಯ ತರಿಗೆ ಮೀಸಲು, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಮಹಿಳಾ ಸಬಲತೆ ಸೇರಿ ಪ್ರಮುಖ ವಿಷಯಗಳ ಕುರಿತು ಅಧಿವೇಶನದಲ್ಲಿ ಗೊತ್ತುವಳಿ ಸ್ವೀಕರಿಸಲಾಗುವುದು.‌ ಉಳಿದಂತೆ ಜ್ವಲಂತ ಸಮಸ್ಯೆಗಳ ಚರ್ಚೆ ಜತೆಗೆ ಕೃಷಿ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಯುವ, ಮಹಿಳಾ ಗೋಷ್ಠಿ  ನಡೆಯಲಿದೆ. ಅಧಿವೇಶನದ ಯಶಸ್ಸಿಗೆ 10ಕ್ಕೂ ಹೆಚ್ಚು ಸಮಿತಿಗಳನ್ನು ನೇಮಿಸಿ ಜವಾಬ್ದಾರಿ ನೀಡಲಾಗಿದೆ.  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವರು. ಮಠಾಧೀಶರಿಗೂ ಆಮಂತ್ರಣ ನೀಡಲಾಗಿದೆ  ಎಂದು ದೇವರ ಮನಿ ಮಾಹಿತಿ ನೀಡಿದರು.

ಮೀಸಲು ಅಗತ್ಯವಿದೆ

ವೀರಶೈವ ಲಿಂಗಾಯತರಲ್ಲೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಹೀಗಾಗಿ ಸಮಾಜಕ್ಕೆ ಮೀಸಲು ಅಗತ್ಯವಿದೆ. ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ವೀರಶೈವ ಸಮಾಜ ಇಂದು ಸಾಮಾಜಿಕ ನ್ಯಾಯಕ್ಕೆ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದ್ದು, ಸಮಾವೇಶ ಅದ್ದೂರಿಯಾಗಿ ನಡೆಯಲಿದೆ ಎಂದು ದೇವರಮನಿ ಶಿವಕುಮಾರ್ ಹೇಳುತ್ತಾರೆ. ಒಟ್ಟಾರೇ ನಾಲ್ಕನೇ ಅಧಿವೇಶನದ ಸಾರಥಿ ದೇವರ ಮನಿ ಶಿವಕುಮಾರ್ ಆಗಿದ್ದು,ಯಶಸ್ವಿಯಾಗಲಿ ಎಂದು ಹಾರೈಸೋಣ‌

Share.
Leave A Reply

Exit mobile version