ದಾವಣಗೆರೆ : ದಾವಣಗೆರೆಯಲ್ಲಿ ನಡೆಯುತ್ತಿದ್ದ ಬಿಜೆಪಿ ಬಂಡಾಯಕ್ಕೆ ರಾಜಾಹುಲಿ ಯಡಿಯೂರಪ್ಪ ಎಂಟ್ರಿಯಿಂದ ಬಂಡಾಯ ಶಮನವಾದರೂ, ಬೇಗುದಿ ಬೇಯುತ್ತಿದೆ.ಸುಮಾರು ಗಂಟೆಗಳ ಕಾಲ ಮೀಟಿಂಗ್ ನಡೆದಿದ್ದು, ಬ್ರೇಕ್ ಮಿಟಿಂಗ್ ಬಹುತೇಕ ಸಕ್ಸಸ್ ಆಗಿದೆ. ಬಿಎಸ್ ಯಡಿಯೂರಪ್ಪ ಎಂಟ್ರಿ ನಂತರ ಸಂಧಾನ ಸಕ್ಸಸ್ ಆಗಿದೆ.
ದಾವಣಗೆರೆ ಅಪೂರ್ವ ರೆಸಾರ್ಟ್ ನಲ್ಲಿ ದೀರ್ಘ ಕಾಲ ನಡೆದ ಸಭೆಯಲ್ಲಿ ಸಿದ್ದೇಶ್ವರ್- ರೇಣುಕಾಚಾರ್ಯ ಬಣದ ನಡುವೆ ಸಂಧಾನ ಯಶಸ್ವಿ ಆಗಿದ್ದು, ಮಾಜಿ ಸಚಿವ ರವೀಂದ್ರನಾಥ್ ನೇತೃತ್ವದಲ್ಲಿ ದಾವಣಗೆರೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.
ಸಭೆ ನಂತರ ಮಾಧ್ಯಮಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಹೇಳಿಕೆ ನೀಡಿ, ದಾವಣಗೆರೆ ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಾವಣೆ ಇಲ್ಲ. ಮಾಜಿ ಸಚಿವ ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ದಾವಣಗೆರೆಯಲ್ಲಿ ಅತೀ ಹೆಚ್ಚು ಮತಗಳಿಂದ ಗಾಯತ್ರಿ ಸಿದ್ದೇಶ್ವರ್ ಗೆಲ್ಲುತ್ತಾರೆ ಯಾವುದೇ ಬಂಡಾಯವಿಲ್ಲ ಎಲ್ಲವೂ ಶಮನ ಆಗಿದೆ ಎಂದಿದ್ದಾರೆ
ದಾವಣಗೆರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎರಡು ಗಂಟೆಗಳ ಕಾಲ ಎಲ್ಲ ಭಾವನೆ ತಿಳಿದುಕೊಳ್ಳುವ ಕೆಲಸ ಮಾಡಿ ನಂತರ ಮಾತನಾಡಿ, ಈಗಾಗಲೇ ಲೊಕಸಭಾ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ್ ಆಯ್ಕೆ ಮಾಡಿದ್ದೇವೆಅವರ ಗೆಲುವಿಗೆ ಒಗ್ಗಟ್ಟಾಗಿ ಎಲ್ಲರೂ ಕೆಲಸ ಮಾಡಬೇಕು. ಇನ್ಮುಂದೆ ಬಂಡಾಯ ಎಂಬುದು ಏನು ಇರೋದಿಲ್ಲ. ರವೀಂದ್ರನಾಥ್ ಅವರಿಗೆ ಚುನಾವಣೆ ನೇತೃತ್ವವ ವಹಿಸಲಾಗಿದೆ. ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆಇಲ್ಲಿ ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಹೋಗ್ತಿವಿ. ನಮ್ಮಲ್ಲಿ ಯಾವುದೇ ರೀತಿಯ ಒಡಕಿನ ಮಾತಿಗೆ ಅವಕಾಶ ಇಲ್ಲ. ಆಲ್ ಇಸ್ ವೆಲ್ ಎಲ್ಲವೂ ಒಳ್ಳೇಯದಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ಮಾಜಿ ಶಾಸಕ ಎಸ್ ಎ ರವೀಂದ್ರನಾಥ್ ಮಾತನಾಡಿ,ಅಸಮಧಾನ ಏನು ಇರಲಿಲ್ಲ, ಒಬ್ಬರಿಗೊಬ್ಬರು ಪರಸ್ಪರ ಮಾತನಾಡಲಿಲ್ಲ ಆದ್ದರಿಂದ ಸರಿ ಇರಲಿಲ್ಲ. ಈಗ ಮತ್ತೆ ಜೊತೆ ಸೇರಿ ಮಾತನಾಡಿದ್ದೇವೆ.ಎಲ್ಲಾ ಸರಿಯಾಗಿದೆ ಒಟ್ಟಿಗೆ ಕೆಲಸ ಮಾಡಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು. ಮಾಜಿ ಶಾಸಕ ರೇಣುಕಾಚಾರ್ಯ ಸಬೆ ಬಳಿಕ ಬೇಸರದಿಂದ ಮಾತನಾಡಿ, ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ. ನಾವೇಲ್ಲ ಕೂತು ಮಾತನಾಡುತ್ತೇವೆ ಈಗ ಯಾವ ರಿಯಾಕ್ಷನ್ ಕೊಡೋದಿಲ್ಲ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರ ನಡುವೆ ವಾಗ್ವಾದ
ಸಂಧಾನಸಭೆಯಲ್ಲಿ ಮಾಜಿ ಮೇಯರ್ ಅಜಯ್ ಕುಮಾರ್ ಗೆ ಅವಾಚ್ಯವಾಗಿ ನಿಂದಿಸಿದ್ದ ಸಂಸದರ ಆಪ್ತ ಯಶವಂತ್ ರಾವ್ ಜಾಧವ್ ಹಾಗೂ ರೆಬೆಲ್ ಟೀಂ ನಡುವೆ ವಾಗ್ವಾದ ಉಂಟಾಯಿತು. ಕೈ ಮುಗಿದು ಕೇಳುತ್ತೇನೆ ಇಲ್ಲಿಗೆ ಬಿಟ್ಟುಬಿಡಿ ಎಂದ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ ಬಳಿಕ ತಣ್ಣಗಾದಾರು.
ಮತ್ತೆ ನಡೆದ ಅಸಮಧಾನಿತರ ಸಭೆ
ಶಿರಮಗೊಂಡನಹಳ್ಳಿಯಲ್ಲಿರುಬವ ಮಾಜಿಸಚಿವ ಎಸ್ ಎ ರವೀಂದ್ರನಾಥ್ ನಿವಾಸದಲ್ಲಿ ಅಸಮಧಾನಿತರ ಸಭೆ ಮತ್ತೊಮ್ಮೆ ನಡೆಯಿತು. ಸಭೆ ಬಳಿಕ ಬೆಂಬಲ ನೀಡಬೇಕೋ ಬೇಡವೋ ಎಂದು ಎನ್ನುವುದನ್ನು ಚರ್ಚೆ ಮಾಡಿದರು. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಬೈರತಿ ಬಸವರಾಜ್, ಕೆ ಆರ್ ಡಿ ಐ ಎಲ್ ಮಾಜಿ ಅಧ್ಯಕ್ಷ ರಾಮನಗರ ರುದ್ರೇಶ್, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸಾಥ್, ಎಂ ಎಲ್ ಸಿ ರವಿಕುಮಾರ್ ಭಾಗಿ..ರೆಬೆಲ್ ಟೀಮ್ ನ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಸಚಿವ ರೇಣುಕಾಚಾರ್ಯ, ಮಾಜಿ ಎಂ ಎಲ್ ಸಿ ಶಿವಯೋಗಿ ಸ್ವಾಮಿ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಸುರೇಶ್, ಮಾಜಿ ಶಾಸಕ ಗುರುಸಿದ್ದನಗೌಡ, ಡಾ|| ರವಿಕುಮಾರ್, ಮಾಜಿ ಶಾಸಕ ಕರುಣಾಕರರೆಡ್ಡಿ ಭಾಗಿಯಾಗಿದ್ದರು.