ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಮುನ್ನಡೆಸುವಂತಹ ತಲಾ ಮೂವರ ಹೆಸರುಗಳನ್ನು ವರಿಷ್ಠರಿಗೆ ಕಳಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ ಬೆನ್ನೇಲ್ಲೇ ಮೂವರು ಹೆಸರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುನ್ನೆಲೆಗೆ ಬಂದಿದೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಕೋರ್ ಕಮೀಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಹಾಲಿ ಅಧ್ಯಕ್ಷ ರಾಜಶೇಖರ್, ಶ್ರೀನಿವಾಸ ದಾಸಕರಿಯಪ್ಪ, ಜಗದೀಶ್ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಇದರಲ್ಲಿ ಶ್ರೀನಿವಾಸದಾಸಕರಿಯಪ್ಪ, ಜಗದೀಶ್ ಸಿದ್ದೇಶ್ವರ ಬಣದವರಾಗಿದ್ದು, ರಾಜಶೇಖರ್ ರೇಣುಕಾಚಾರ್ಯ ಬಣದವರಾಗಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾನದಂಡ
ಪಕ್ಷದ ಕೇಂದ್ರೀಯ ಸಮಿತಿ ಜಿಲ್ಲಾಧ್ಯಕ್ಷ ಹುದ್ದೆಗೆ ಕೆಲವು ಮಾನದಂಡ ರೂಪಿಸಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ, ಸಾಮಾಜಿಕ ನ್ಯಾಯ, ಮಹಿಳಾ ಪ್ರಾತಿನಿಧ್ಯವನ್ನೂ ಪರಿಗಣಿಸಿ, ವಯೋಮಿತಿ, ಸಂಘಟನೆಯಲ್ಲಿ ಎರಡು ಬಾರಿ ಸಕ್ರಿಯ ಸದಸ್ಯರಾಗಿರುವ ಮುಖಂಡರ ಹೆಸರುಗಳನ್ನು ಕೇಂದ್ರಕ್ಕೆ ಕಳಿಸಲಾಗುವುದು. ನಂತರ ಕೇಂದ್ರ ಸಮಿತಿ ರಾಜ್ಯ ಸಮಿತಿ ಜತೆ ಚರ್ಚಿಸಿ ಹೆಸರುಗಳನ್ನು ಘೋಷಣೆ ಮಾಡಲಿದೆ