ದಾವಣಗೆರೆ : ಡಿಸಿಸಿ ಬ್ಯಾಂಕ್ ಚುನಾವಣೆಗೆ ಶುಕ್ರವಾರ ಹಾಗೂ ಶನಿವಾರ, ಭಾನುವಾರ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ. ಶುಕ್ರವಾರ ಒಟ್ಟು 19 ನಾಮ ಪತ್ರಗಳು ಸಲ್ಲಿಕೆಯಾದರೆ, ಶನಿವಾರ 6 ನಾಮಪತ್ರ, ಭಾನುವಾರ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು,ಅವುಗಳು ಈ ಕೆಳಗಿನಂತಿವೆ.
ಜಗದೀಶಪ್ಪ ಬಣಕಾರ್ ನಾಮಪತ್ರ
ಜನವರಿ 12 ಕ್ಕೆ ಹರಿಹರ ತಾಲೂಕು ಡಿ.ವರ್ಗಕ್ಕೆ ಹನಗವಾಡಿ ಜಗದೀಶಪ್ಪ ಬಣಕಾರ್, ಹನಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪ್ರತಿನಿಧಿಸಿದ್ದಾರೆ. ಇವರಿಗೆ ಮತ್ತಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸುಧಾ ಸೂಚಕರಾಗಿದ್ದಾರೆ.
ಕತ್ತಲಗೆರೆ ಕೆ.ನಾಗರಾಜಪ್ಪ
ಚನ್ನಗಿರಿಯ ಎ ವರ್ಗಕ್ಕೆ ಕತ್ತಲಗೆರೆ ಕೆ.ನಾಗರಾಜಪ್ಪ ಕತ್ತಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ಸಂತೆಬೆನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಿ.ಎನ್.ಸುರೇಶ್ ಸೂಚಕರಾಗಿದ್ದಾರೆ.
ಬಿ.ಜಿ.ಬಸವರಾಜಪ್ಪ ಎರಡು ನಾಮಪತ್ರ
ಹೊನ್ನಾಳಿ ಡಿ ವರ್ಗದಿಂದ ಹೊನ್ನಾಳಿ ತಾಲೂಕಿನ ಹನುಮನಹಳ್ಳಿ ಗ್ರಾಮದ ಎಂ.ಹನುಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಬಿ.ಜಿ.ಬಸವರಾಜಪ್ಪ ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ತರಗನಹಳ್ಳಿ ಹಾಲು ಉತ್ಪಾದಕರ ಸಂಘದ ಟಿ.ಮಹಾಂತೇಶಪ್ಪ ಸೂಚಕರಾಗಿದ್ದಾರೆ.
ಎಚ್.ಜಯಪ್ಪ ಇ ವರ್ಗಕ್ಕೆ ನಾಮಪತ್ರ
ದಾವಣಗೆರೆ ಎಚ್.ಜಯಪ್ಪ ಇ ವರ್ಗದಿಂದ ಶ್ರೀ ಗೋಣಿ ಬಸವೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಪ್ರತಿನಿಧಿಸುತ್ತಿದ್ದಾರೆ.ಇವರಿಗೆ ಜಗಳೂರು ತಾಲೂಕಿನ ಆಸಗೋಡು ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಎಂ.ಮಾರ್ತಾಂಡಪ್ಪ ಸೂಚಕರಾಗಿದ್ದರು.
ಎಚ್.ಬಿ.ಭೂಮೇಶ್ವರಪ್ಪ ಎ ವರ್ಗಕ್ಕೆ ನಾಮ ಪತ್ರ
ದಾವಣಗೆರೆ ತಾಲೂಕಿನ ತುಂಬಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎ ವರ್ಗಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ತಾಲೂಕಿನ ಗುಡಾಳ ಪ್ರಾಥಮಿಕ ಕೃಷಿ ಪ್ರಾಥಮಿಕ ಸಹಕಾರ ಸಂಘದ ಜಿ.ಡಿ.ಕಲ್ಲೇಶಪ್ಪ ಸೂಚಕರಾಗಿದ್ದಾರೆ.
ಕೆ.ಎಂ.ಅಶೋಕ್ ಕುಮಾರ್ ಎ ವರ್ಗಕ್ಕೆ ನಾಮಪತ್ರ
ದಾವಣಗೆರೆ ತಾಲೂಕಿನ ಕಂದನಕೋವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎ ವರ್ಗಕ್ಕೆ ಕೆ.ಎಂ.ಅಶೋಕ್ ಕುಮಾರ್ ನಾಮಪತ್ರವಸಲ್ಲಿಸಿದ್ದಾರೆ. ಇವರಿಗೆ ದಾವಣಗೆರೆ ಆಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮಾರಪ್ಪ ಸೂಚಕರಾಗಿದ್ದಾರೆ.
ಸಿರಿಗೆರೆ ರಾಜಣ್ಣ ಸಿ ವರ್ಗಕ್ಕೆ ನಾಮ ಪತ್ರ ಸಲ್ಲಿಕೆ
ಮಲೇಬೆನ್ನೂರು ಪತ್ತಿನ ಸಹಕಾರ ಸಂಘದಿಂದ ಸಿ ವರ್ಗಕ್ಕೆ ಸಿರಿಗೆರೆ ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಬೀರಲಿಂಗೇಶ್ವರ ಪತ್ತಿನ ಸಹಕಾರ ಸಂಘದ ಎಚ್.ಎಸ್.ಕರಿಯಪ್ಪ ಸೂಚಕರಾಗಿದ್ದಾರೆ.
ಕೆ.ಮಂಜುನಾಥ್ ಎ ವರ್ಗಕ್ಕೆ ನಾಮ ಪತ್ರ ಸಲ್ಲಿಸಿದ್ದಾರೆ
ದಾವಣಗೆರೆ ತಾಲೂಕಿನ ಕುಕ್ಕುವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎ ವರ್ಗಕ್ಕೆ ಕೆ.ಎನ್.ಮಂಜುನಾಥ್ ನಾಮಪತ್ರವಸಲ್ಲಿಸಿದ್ದಾರೆ. ಮಾಯಕೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆರ್.ಎಚ್.ಪ್ರತಾಪ್ ಸೂಚಕರಾಗಿದ್ದಾರೆ.
ಬಿ.ಶೇಖರಪ್ಪ ಎ ವರ್ಗಕ್ಕೆ ನಾಮಪತ್ರ ಸಲ್ಲಿಕೆ
ಮಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎ ವರ್ಗದಿಂದ ಬಿ.ಶೇಖರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಅತ್ತಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೆ.ಎಂ.ಮಂಜುನಾಥ್ ಸೂಚಕರಾಗಿದ್ದಾರೆ.
ಆರ್.ಜಿ.ಶ್ರೀನಿವಾಸ ಮೂರ್ತಿ ಸಿ ವರ್ಗದಿಂದ ನಾಮಪತ್ರ ಸಲ್ಲಿಕೆ
ದಾವಣಗೆರೆ ಶ್ರೀ ಕನ್ನಿಕಾ ಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿಯ ಆರ್.ಜಿ.ಶ್ರೀನಿವಾಸ ಮೂರ್ತಿ ಸಿ ವರ್ಗದಿಂದ ನಾಮ ಪತ್ರ ಸಲ್ಲಿಸಿದ್ದಾರೆ., ದಾವಣಗೆರೆ ಮಹಿಳಾ ಪತ್ತಿನ ಸಹಕಾರ ಸಂಘದ ಎನ್.ಎಸ್.ನಿರ್ಮಲ ಸೂಚಕರಾಗಿದ್ದಾರೆ.
ಡಿ.ಜಿ.ವಿಶ್ವನಾಥ್ ಎ ವರ್ಗದಿಂದ ನಾಮಪತ್ರ
ನ್ಯಾಮತಿಯ ಚೀಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡಿ.ಜಿ.ವಿಶ್ವನಾಥ್ ಎ ವರ್ಗದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ನ್ಯಾಮತಿ ತಾಲೂಕಿನ ಕುಂಕುವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಒಡಯರಹತ್ತೂರಿನ ಎಚ್.ಬಿ.ಚಂದ್ರಪ್ಪ ಸೂಚಕರಾಗಿದ್ದಾರೆ.
ಹೆಚ್ ಕೆ ಬಸಪ್ಪ ಡಿ ವರ್ಗದಿಂದ ಎರಡು ನಾಮ ಪತ್ರ
ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಎಚ್.ಕೆ.ಬಸಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಬಿ.ಶಿವಮೂರ್ತಿ ಸೂಚಕರಾಗಿದ್ದಾರೆ. ಇನ್ನೊಂದು ನಾಮಪತ್ರಕ್ಕೆ ಕಾರಿಗನೂರು ಹಾಲು ಉತ್ಪಾದಕರ ಸಂಘದ ಕೆ.ಜಿ.ಚಂದ್ರಶೇಖರಪ್ಪ ಸೂಚಕರಾಗಿದ್ದಾರೆ.
ಹರಿಹರ ಎ ವರ್ಗದಿಂದ ಡಿ.ಕುಮಾರ್ ನಾಮಪತ್ರ
ಹರಿಹರ ತಾಲೂಕಿನ ಹನಗವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಡಿ.ಕುಮಾರ್ ಎ ವರ್ಗದಿಂದ ನಾಮ ಪತ್ರ ಸಲ್ಲಿಸಿದ್ದಾರೆ. ಇವರಿಗೆ ಮಲೆಬೆನ್ನೂರಿನ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಿ.ಆರ್.ಕುಮಾರ್ ಸೂಚಕರಾಗಿದ್ದಾರೆ.
ಜೆ.ಎಂ.ಮದನ್ ಕುಮಾರ್ ಎ ವರ್ಗದಿಂದ ನಾಮಪತ್ರ
ನ್ಯಾಮತಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಎ ವರ್ಗದಿಂದ ಜೆ.ಎಂ.ಮದನ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ನ್ಯಾಮತಿ ತಾಲೂಕಿನ ಗೋವಿನ ಕೋವಿ ಸಂಘದ ಎಂ.ಸಿ.ಸಣ್ಣಚಿಕ್ಕಪ್ಪ ಸೂಚಕರಾಗಿದ್ದಾರೆ.
ಎಂಸಿ ಸಣ್ಣ ಚಿಕ್ಕಪ್ಪ ಎ ವರ್ಗದಿಂದ ನಾಮ ಪತ್ರ
ನ್ಯಾಮತಿ ತಾಲೂಕಿನ ಗೋವಿನಕೋವಿ ಸಂಘದ ಎಂ.ಸಿ ಸಣ್ಣಚಿಕ್ಕಪ್ಪ ಎ ವರ್ಗದಿಂದ ನಾಮ ಪತ್ರ ಸಲ್ಲಿಸಿದ್ದಾರೆ. ನ್ಯಾಮತಿ ಸಂಘದ ಜೆ.ಎಂ.ಮದನ್ ಕುಮಾರ್ ಸೂಚಕರಾಗಿದ್ದಾರೆ.
ಕೆ.ಚೇತನ್ ಎ ವರ್ಗದಿಂದ ನಾಮ ಪತ್ರ ಸಲ್ಲಿಕೆ
ನ್ಯಾಮತಿ ತಾಲೂಕಿನ ಚಿನ್ನಕಟ್ಟೆ ಜೋಗ ಕೃಷಿ ಸಂಘದಿಂದ ಎ ವರ್ಗದಿಂದ ಕೆ.ಚೇತನ್ ನಾಮ ಪತ್ರ ಸಲ್ಲಿಸಿದ್ದಾರೆ. ಸವಳಂಗ ಪ್ರಾಥಮಿಕ ಸಂಘದ ಜಿ.ವಿನಯ್ ಸೂಚಕರಾಗಿದ್ದಾರೆ.
ಮಲ್ಲೇಶಪ್ಪ ಎ ವರ್ಗದಿಂದ ನಾಮ ಪತ್ರ
ನ್ಯಾಮತಿಯ ಚಟ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಲ್ಲೇಶಪ್ಪ ಎ ವರ್ಗದಿಂದ ನಾಮ ಪತ್ರ ಸಲ್ಲಿಸಿದ್ದಾರೆ. ನ್ಯಾಮತಿ ದೊಡ್ಡತ್ತಿನಹಳ್ಳಿ ಕೃಷಿ ಸಂಘದ ಡಿ.ಎಂ.ಮಹೇಶ್ವರಪ್ಪ ಸೂಚಕರಾಗಿದ್ದಾರೆ.
ಜನವರಿ 13 ಕ್ಕೆ ನಾಮಪತ್ರ ಸಲ್ಲಿಸಿದವರ ವಿವರ
ಚನ್ನಗಿರಿ ತಾಲೂಕು ಎ ವರ್ಗದಿಂದ ಜಿ.ಎನ್ ಸ್ವಾಮಿ ಎರಡು ನಾಮಪತ್ರ ಸಲ್ಲಿಕೆ ನಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎ ವರ್ಗಕ್ಕೆ ಜಿ.ಎನ್.ಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ರಾಜನಗೊಂಡನಹಳ್ಳಿ ಕೃಷಿ ಸಂಘದ ಇ.ಸಿ.ಶಿವಮೂರ್ತಿ ಸೂಚಕರಾಗಿದ್ದಾರೆ. ಇನ್ನೊಂದು ನಾಮಪತ್ರಕ್ಕೆ ವಡ್ನಾಳ್ ಕೃಷಿ ಸಂಘದ ಎಸ್.ರಮೇಶ್ ಸೂಚಕರಾಗಿದ್ದಾರೆ.
ಎಸ್ .ಬಸಪ್ಪ ಎ ವರ್ಗಕ್ಕೆ ಎರಡು ನಾಮಪತ್ರ
ದಾವಣಗೆರೆ ಆವರಗೊಳ್ಳ ಪ್ರಾಥಮಿಕ ಕೃಷಿ ಸಂಘದಿಂದ ಎಸ್.ಬಸಪ್ಪ ನಾಮಪತ್ರ ಸಲ್ಲಿಸಿದ್ದಾರೆ. ದೊಡ್ಡ ಬಾತಿ ಕೃಷಿ ಸಹಕಾರ ಸಂಘದ ಕೆ.ಜಿ.ಬಸವರಾಜ್ ಸೂಚಕರಾಗಿದ್ದಾರೆ. ಇನ್ನೊಂದು ನಾಮಪತ್ರಕ್ಕೆ ನಗರ ಪ್ರಾಥಮಿಕ ಸಂಘದ ಎಂ.ಎಸ್.ನಟರಾಜ್ ಸೂಚಕರಾಗಿದ್ದಾರೆ.
ಬಿ.ಆರ್.ವೀರಪ್ಪ ಇ ವರ್ಗದಿಂದ ನಾಮಪತ್ರ ಸಲ್ಲಿಕೆ
ದಾವಣಗೆರೆ ತಾಲೂಕಿನ ಯರಗುಂಟೆ ಗ್ರಾಮದ ಶ್ರೀ ವೀರಭದ್ರೇಶ್ವರ ಸಹಕಾರ ಸಂಘದ ಬಿ.ಆರ್.ವೀರಪ್ಪ ಈ ವರ್ಗದಿಂದ ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ನಿಟ್ಟುವಳ್ಳಿಯ ಮೌನೇಶ್ವರ ನ್ಯೂ ಎಕ್ಸೆಟೇಶನ್ ಪ್ರೈಮೈರಿ ಕನ್ಸೂಮರ್ ಕೋ ಆಪರೇಟಿವ್ ನ ಎಚ್.ಶಿವಕುಮಾರ್ ಸೂಚಕರಾಗಿದ್ದಾರೆ.
ಡಿ.ಬಿ.ಗಂಗಪ್ಪ ಎ ವರ್ಗದಿಂದ ನಾಮಪತ್ರ
ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಕೃಷಿ ಪತ್ತಿನ ಪ್ರಾಥಮಿಕ ಸಂಘದ ಡಿ.ಬಿ.ಗಂಗಪ್ಪ ಎ ವರ್ಗದಿಂದ ನಾಮ ಪತ್ರ ಸಲ್ಲಿಸಿದ್ದಾರೆ. ಯರಗನಾಳು ಕೃಷಿ ಸಂಘದಿಂದ ಕೆ.ಬಸವರಾಜಪ್ಪ ಸೂಚಕರಾಗಿದ್ದಾರೆ.
ಜನವರಿ 14 ಕ್ಕೆ ಒಂದೇ ದಿನ ಜಗದೀಶಪ್ಪ ಬಣಕಾರ್ 2 ನಾಮಪತ್ರ ಸಲ್ಲಿಕೆ
ಹರಿಹರ ತಾಲೂಕಿನ ಹನಗವಾಡಿ ಹಾಲು ಉತ್ಪಾದಕರ ಸಂಘದಿಂದ ಜಗದೀಶಪ್ಪ ಬಣಕಾರ್ ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಸೂಚಕರಾಗಿ ಬ್ಯಾಲದಹಳ್ಳಿಯ ಬಿ.ಜಿ.ಪ್ರಕಾಶ್, ದುರ್ಗಾಂಬಿಕ್ ಕ್ಯಾಂಪ್ ನ ನಾಗರತ್ನಮ್ಮ ಸೂಚಕರಾಗಿದ್ದಾರೆ.