ದಾವಣಗೆರೆ : ದಾವಣಗೆರೆ ಡಿಸಿಸಿ ಬ್ಯಾಂಕ್ ಚುನಾವಣೆ ಕಣ ರಂಗೇರಿದ್ದು, ಶುಕ್ರವಾರ ಮೂರು ನಾಮಪತ್ರಗಳನ್ನು ವಾಪಸ್ ತೆಗೆದುಕೊಂಡರು.

ಚನ್ನಗಿರಿ ಭಾಗ 1 ಹೆಬ್ಬಳಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆರ್.ಅಶೋಕ್ ಇಂದು ಪ್ರಥಮವಾಗಿ ನಾಮಪತ್ರ ವಾಪಸ್ ಪಡೆದರು. ಸದ್ಯ ಜೆ.ಎನ್. ಸ್ವಾಮಿ, ದೀಪಕ್ ಪಾಟೀಲ್ ಕಣದಲ್ಲಿದ್ದಾರೆ.

ದಾವಣಗೆರೆ ಬಿ ವರ್ಗದಿಂದ ದಾವಣಗೆರೆ ತಾಲೂಕು ವ್ಯವಸಾಯೋತ್ಪನ್ನ. ಸಹಕಾರ ಸಂಘದ ರೇಖಾ ನಾಮಪತ್ರ ವಾಪಸ್ ಪಡೆದರು. ಇನ್ನು ದಾವಣಗೆರೆ ಬಿ ವರ್ಗಕ್ಕೆ ಹಾಕಿದ್ದ ದಾವಣಗೆರೆ ದಾಮ್ಕೋಸ್ ನ ಶಿವಕುಮಾರ್ ನಾಮಪತ್ರ ವಾಪಸ್ ಪಡೆದರು.

ಜೆ.ಆರ್.ಷಣ್ಮುಖಪ್ಪ ಒಬ್ಬರೇ ಕಣದಲ್ಲಿ

ದಾವಣಗೆರೆ ಬಿ ವರ್ಗದಿಂದ ಎರಡು ನಾಮ ಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಮಾರಾಟ ಸಹಕಾರ ಸಂಘದಿಂದ ಉಮೇದುವಾರಿಕೆ ಸಲ್ಲಿಸಿದ್ದು, ಇವರ ಎದುರಾಳಿಯಾಗಿ ಯಾರು ಇಲ್ಲ. ಈ ಕಾರಣದಿಂದ ಜೆ.ಆರ್.ಷಣ್ಮುಖಪ್ಪ ಬಹುತೇಕ ಜಯದ ಹಾದಿಯಲ್ಲಿದ್ದಾರೆ.
ಅಲ್ಲದೇ ಚುನಾವಣಾಧಿಕಾರಿ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಜೆ.ಎಸ್.ವೇಣುಗೋಪಾಲ ರೆಡ್ಡಿ ಒಬ್ಬರೇ ಕಣದಲ್ಲಿ

ಜಗಳೂರು ತಾಲೂಕು ಎ ವರ್ಗದಿಂದ ಜೆ.ಎಸ್.ವೇಣುಗೋಪಾಲ್ ರೆಡ್ಡಿ ಸಿದ್ದಿಹಳ್ಳಿ ಪ್ರಾಥಮಿಕ ಕೃಷಿ ಸಂಘದಿಂದ ಜೆ‌.ಎಸ್.ವೇಣುಗೋಪಾಲ ರೆಡ್ಡಿ ಮಾತ್ರ ಕಣದಲ್ಲಿ ಇದ್ದಾರೆ. ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರಿಗೆ ಯಾರು ವಿರೋಧಿಗಳು ಇಲ್ಲ.ಈ ಕಾರಣದಿಂದ ಚುನಾವಣಾಧಿಕಾರಿ ಅಧಿಕೃತ ಘೋಷಣೆ ಮಾಡಬೇಕಿದೆ.

95 ನಾಮ ಪತ್ರಗಳು ಸಿಂಧು

ಚುನಾವಣಾಧಿಕಾರಿ ನಜ್ಮಾ ಇಂದು ನಾಮಪತ್ರ ಪರಿಶೀಲನೆ ನಡೆಸಿದರು. ಎಲ್ಲ ನಾಮಪತ್ರಗಳು ಸಿಂಧುಗೊಂಡವು. ಯಾವುದೇ ನಾಮಪತ್ರ ತಿರಸ್ಕೃತಗೊಂಡಿಲ್ಲ. ಇನ್ನೇನಿದ್ದರೂ ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳಲು ಮಾತ್ರ ಸಮಯಾವಕಾಶವಿದ್ದು, ಕಣದಲ್ಲಿ‌ ಉಳಿಯೋರು ಯಾರು ಎಂಬ ಕುತುಹೂಲವಿದೆ.

ಉಮೇದುವಾರಿಕೆ ವಾಪಸ್ ಗೆ ಜನವರಿ 20 ಕೊನೆ ದಿನ

ಉಮೇದುವಾರಿಕೆ ವಾಪಸ್ ಗೆ ಜನವರಿ 20 ಕೊನೆ ದಿನವಾಗಿದ್ದು, ಕಣದ ಕಲಿಗಳು ಯಾರಾಗ್ತಾರೆ ಎಂಬ ಕುತುಹೂಲವಿದೆ. ಅಲ್ಲದೇ ನಾಮಪತ್ರ ಹಿಂತೆಗೆದುಕೊಳ್ಳಲು ಒತ್ತಡವೂ ಬರುತ್ತಿದೆ. ಅಲ್ಲದೇ ಗುಪ್ತ ಜಾಗದಲ್ಲಿ ಸಭೆಗಳು, ರಾಜಕೀಯ ನಾಯಕರ ಭೇಟಿ ಮಾಡುತ್ತಿದ್ದಾರೆ. ಒಟ್ಟಾರೆ ಕದನ ಕಣ ರೋಚಕವಾಗಿದ್ದು, ಕಣದಲ್ಲಿನ ಕಲಿಗಳು ಯಾರಾಗ್ತಾರೆ ಕಾದು ನೋಡಬೇಕು.

Share.
Leave A Reply

Exit mobile version