ನಂದೀಶ್ ಭದ್ರಾವತಿ ದಾವಣಗೆರೆ
ದೇವನಗರಿಯಲ್ಲಿ ಒಂದು ಕಡೆ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಇನ್ನೊಂದೆಡೆ ಇದೇ ಜನವರಿ ತಿಂಗಳಿನಲ್ಲಿ ನಡೆಯುವ ಡಿಸಿಸಿ ಬ್ಯಾಂಕ್ ನ ಚುನಾವಣೆ ಬಿಜೆಪಿ, ಕಾಂಗ್ರೆಸ್ ನ ಪ್ರತಿಷ್ಠೆ ಕಣವಾಗಿದೆ.
ಜನವರಿ 25 ರಂದು ಚುನಾವಣೆ ನಡೆಯುವ ಸಂಭವವಿದ್ದು, ಈಗಾಗಲೇ ಚುನಾವಣಾ ಅಧಿಕಾರಿಯನ್ನಾಗಿ ನಜ್ಮಾರನ್ನು ನೇಮಿಸಲಾಗಿದೆ. ಅಲ್ಲದೇ ಜನವರಿ 4 ಕ್ಕೆ ಮತ ಹಾಕುವ ಪ್ರತಿನಿಧಿಗಳನ್ನು ಹೆಸರನ್ನು ಸಹಕಾರ ಉಪನಿಬಂಧಕರಿಗೆ ನೀಡಲಾಗಿದೆ.
ಚುನಾವಣೆ ಪ್ರಕ್ರಿಯೆ ಹೇಗೆ
ಹಾಲಿ ಆಡಳಿತಮಂಡಳಿ ಅಧಿಕಾರವಧಿ ನ.11ಕ್ಕೆ ಮುಗಿದಿದ್ದು, ಆಡಳಿತಾಧಿಕಾರಿಯನ್ನಾಗಿ ಎಡಿಸಿ ಲೋಕೇಶ್ ರವರನ್ನು ನೇಮಿಸಲಾಗಿದೆ. ಚುನಾವಣೆ ನಡೆಸುವ ಮುನ್ನ ಮೊದಲು ಅರ್ಹ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಅರ್ಹ ಸದಸ್ಯರು ಮೂರು ಬಾರಿ ಸಾಮಾನ್ಯಸಭೆಗೆ ಹಾಜರು ಇರಬೇಕು. ಡಿಫಾರ್ಟರ್ ಆಗಬಾರದು. ಈ ಲಿಸ್ಟ್ ನ್ನು ಬ್ಯಾಂಕ್ ನ ಎಂಡಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ನಂತರ ಆಕ್ಷೇಪಣೆಗಾಗಿ ಅರ್ಜಿ ಸಲ್ಲಿಸಬೇಕು. ಬಳಿಕ ಜಿಲ್ಲಾಧಿಕಾರಿ ಸರಕಾರಕ್ಕೆ ಕಳಿಸಿ ಚುನಾವಣಾಧಿಕಾರಿ ನೇಮಕ ಮಾಡುತ್ತಾರೆ. ಇನ್ನು ಚುನಾವಣೆ ಇರುವ 15 ದಿವಸಕ್ಕೆ ಮುಂಚೆ, ಕ್ಯಾಲೆಂಡರ್ ಆಫ್ ಈವೆಂಟ್ ಹಾಕಬೇಕು. ಹೀಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ.
ಹೇಗೆ ನಡೆಯುತ್ತೇ ಚುನಾವಣೆ
ಮೊದಲು ಅಂತಿಮ ಮತದಾರರ ಪಟ್ಟಿಯನ್ನು ಎಂಡಿ ಜಿಲ್ಲಾಧಿಕಾರಿಗಳಿಗೆ ನೀಡುತ್ತಾರೆ. ಬಳಿಕ ಸಂಘ ಸಂಸ್ಥೆಗಳು ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಿ, ಅವರಿಗೆ ಮತದಾನ ಹಕ್ಕನ್ನು ಕೊಡುತ್ತಾರೆ. ಅವರು ತಮ್ಮ ಕಾರ್ಯದರ್ಶಿ ಮೂಲಕ ಮತದಾನ ಮಾಡುವ ಹೆಸರಿನ ವ್ಯಕ್ತಿಯ ಹೆಸರನ್ನು ಸಹಕಾತಲರ ಇಲಾಖೆಯ ಉಪನಿಬಂಧಕರಿಗೆ ಕೊಡುತ್ತಾರೆ. ಉಪನಿಬಂಧಕರು ಡಿಸಿ ಮೂಲಕ ಚುನಾವಣಾಧಿಕಾರಿಗೆ ಮತ ಹಾಕುವ ವ್ಯಕ್ತಿಯ ಹೆಸರನ್ನು ನೀಡುತ್ತಾರೆ. ಬಳಿಕ ವ್ಯಕ್ತಿ ಮತದಾನ ಮಾಡಬಹುದಾಗಿದೆ.
ಒಟ್ಟು 13 ಸ್ಥಾನಗಳಿಗೆ ಚುನಾವಣೆ
ಡಿಸಿಸಿ ಬ್ಯಾಂಕ್ ನ ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಮಲ ಹಾಗೂ ಕೈ ಪಾಳಯದ ನಾಯಕರು ಮನೆಮನೆಗೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ.
ಯಾವುದು 13 ಸ್ಥಾನಗಳು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 8 ನಿರ್ದೇಶಕರು, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 1, ಕೃಷಿಯೇತರ ಪತ್ತಿನ ಸಹಕಾರ ಸಂಘ 1, ಹಾಲು ಉತ್ಪಾದಕರ ಸಂಘ 2, ಇತರೆ ಸಹಕಾರ ಸಂಘ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ
ಅಂದಾಜು 800 ಮತದಾರರು
ಒಂದು ಅಂದಾಜಿನ ಪ್ರಕಾರ 800 ಮತದಾರರು ಮತ ಹಕ್ಕನ್ನು ಪಡೆದಿರುವ ಬಗ್ಗೆ ಮಾಹಿತಿ ಇದೆ..ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ತಮ್ಮ ಕ್ಷೇತ್ರದ ಮತದಾರರನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ನಡೆದಿದೆ.
2023 ರ ಕೊನೆ ಅಧ್ಯಕ್ಷ ಹಾಲೇಶಪ್ಪ
ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಹರಿಹರ ತಾಲೂಕಿನ ಹೊಳೆಸಿರಿಗೆರೆಯ ಬಿ.ಹಾಲೇಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.ಮಾಜಿ ಶಾಸಕ ಎಸ್ ವಿ ಆರ್ ಕೋ ಅಫ್ ಆಗಿದ್ದರು. ಅಲ್ಲದೇ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಚಂದ್ರಶೇಖರ್ ನಿಧನದ ಹಿನ್ನೆಲೆಯಲ್ಲಿ ಶಾಸಕ ಎಸ್.ವಿ.ರಾಮಚಂದ್ರರನ್ನು ಕೋ ಅಪ್ ಮಾಡಿ ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಚುನಾವಣೆ ಹತ್ತಿರ ಬರುವ ಹಿನ್ನೆಲೆಯಲ್ಲಿ ಎಸ್.ವಿ.ರಾಮಚಂದ್ರ ಕೋ ಅಫ್ ನ್ನಾಗಿ ಮಾಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂಭವ ಹೆಚ್ಚಿತ್ತು. ಆದರೆ ಬಿ.ಹಾಲೇಶಪ್ಪ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಆಡಳಿತ ಬಿಜೆಪಿ ತೆಕ್ಕೆಯಲ್ಲಿತ್ತು.
ಪ್ರತಿಷ್ಠೆಯ ಡಿಸಿಸಿ ಬ್ಯಾಂಕ್ ಪ್ರಸ್ತುತ ಈ ಹಿಂದಿನ ಆಡಳಿತಾರೂಢ ಬಿಜೆಪಿ ತೆಕ್ಕೆಯಲ್ಲಿತ್ತು. 2020 ಡಿಸೆಂಬರ್ನಲ್ಲಿ ಕಾಂಗ್ರೆಸ್ನಿಂದ ಆಡಳಿತವನ್ನು ಬಿಜೆಪಿ ಕಸಿದುಕೊಂಡಿತ್ತು. 2018-2019ರಲ್ಲಿ ಒಟ್ಟು 9 ಚುನಾಯಿತ ನಿರ್ದೇಶಕರಲ್ಲಿ 7 ಕಾಂಗ್ರೆಸ್ ನಿರ್ದೇಶಕರಿದ್ದರು. ಆಗ ಜೆ.ಆರ್.ಷಣ್ಮುಖಪ್ಪ ಅಧ್ಯಕ್ಷರಾಗಿದ್ದರು. ಜೆ.ಆರ್.ಷಣ್ಮುಖಪ್ಪ, ಶ್ರೀನಿವಾಸ್ ಶೆಟ್ರು, ಬಿ.ವಿ.ಚಂದ್ರಶೇಖರ್ ಹೊರತುಪಡಿಸಿ ಉಳಿದ ನಾಲ್ಕು ನಿರ್ದೇಶಕರು ಬಿಜೆಪಿಗೆ ಸೇರಿದ್ದರು.
ವೇಣುಗೋಪಾಲರೆಡ್ಡಿ ನಂತರ ಹಾಲೇಶಪ್ಪ
ಇನ್ನು ಅಧಿಕಾರ ಹಂಚಿಕೆ ಒಡಂಬಡಿಕೆಯಂತೆ ವೇಣುಗೋಪಾಲ ರೆಡ್ಡಿ ರಾಜೀನಾಮೆ ನೀಡಿದ್ದರು. ಅವರು ತೆರವಾಗಿದ್ದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಹಾಲೇಶಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬಿ.ಹಾಲೇಶಪ್ಪ ಅವರ ನಾಮಪತ್ರಕ್ಕೆ ಬ್ಯಾಂಕಿನ ಸದಸ್ಯ ಜಗದೀಶಪ್ಪ ಬಣಕಾರ್ ಅನುಮೋದಕರಾಗಿ ಮತ್ತು ಬಿ.ಶೇಖರಪ್ಪ ಸೂಚಕರಾಗಿದ್ದರು. ಅಂತಿಮವಾಗಿ ಅಂದಿನ ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.
ಪ್ರತಿಷ್ಠೆ ಕಣ :
ಸಚಿವ, ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದ ಜಿಎಂ ಸಿದ್ದೇಶ್ವರ್ ಗೆ ಈ ಚುನಾವಣೆ ಪ್ರತಿಷ್ಠೆ ಕಣವಾಗಿದೆ. ಆದ್ದರಿಂದ ಇಬ್ಬರು ಸಹ ಡಿಸಿಸಿ ಬ್ಯಾಂಕ್ ನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.ಹೀಗಾಗಿ ಇಬ್ಬರು ಸಹ ಗೆಲುವಿನ ತಂತ್ರ ಮಾಡುತ್ತಿದ್ದಾರೆ.
ಡಿಸಿಸಿ ಬ್ಯಾಂಕ್ನ ನಿರ್ದೇಶಕರ ಬಲಾ ಬಲ
ಬಿಜೆಪಿ ಬೆಂಬಲಿತ – 7, ಕಾಂಗ್ರೆಸ್-2
ನಾಮ ನಿರ್ದೇಶಿತ-4 ಈ ಹಿಂದೆ ಇತ್ತು. ಕಾಂಗ್ರೆಸ್ ನಿರ್ದೇಶಕರು, ಶ್ರೀನಿವಾಸ್ ಶೆಟ್ರು,ಜೆ.ಆರ್.ಷಣ್ಮುಖಪ್ಪ
ಬಿಜೆಪಿ ನಿರ್ದೇಶಕರು, ಎಸ್.ವಿ.ರಾಮಚಂದ್ರಪ್ಪ
ಜಗದೀಶಪ್ಪ ಬಣಕಾರ್ , ಕೆಂಗನಹಳ್ಳಿ ಷಣ್ಮುಖಪ್ಪ
ವೇಣುಗೋಪಾಲ್ ರೆಡ್ಡಿ, ದ್ಯಾಮೇನಹಳ್ಳಿ ಶೇಖರಪ್ಪ ಇದ್ದರು. ಒಟ್ಟಾರೆ ಡಿಸಿಸಿ ಬ್ಯಾಂಕ್ ನ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತದಾರರ ಪ್ರಭು ಯಾರನ್ನು ಆಯ್ಕೆ ಮಾಡುತ್ತಾರೆ ಕಾದು ನೋಡಬೇಕಿದೆ.