ದಾವಣಗೆರೆ: ರಾತ್ರಿ 12 ರ ನಂತರ ಏಕಾಂಗಿಯಾಗಿ ಮಹಿಳೆ ಓಡಾಟ ನಡೆಸಿದಾಗ ನಮಗೆ ಸ್ವತಂತ್ರ್ಯ ಸಿಕ್ಕಿದಂತೆ ಎಂದು ಮಹಾತ್ಮ ಗಾಂಧಿ ಹೇಳಿರುವುದನ್ನು ಆಗಾಗ ಎಲ್ಲರೂ ನೆನೆಸಿಕೊಳ್ಳುತ್ತಿದ್ದೀವಿ..ಆದರೀಗ ಅದು ದಾವಣಗೆರೆಯಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗುತ್ತಿದೆ.

ಇಷ್ಟೂ ದಿನ ರಾತ್ರಿ ಗಸ್ತಿಗೆ ಪುರುಷರು ಮಾತ್ರ ನೇಮಿಸಲಾಗುತ್ತಿತ್ತು..ಆದರೀಗ ಮಹಿಳೆಯರು ಪ್ರಥಮ ಬಾರಿಗೆ ರಾತ್ರಿ ಗಸ್ತಿಗೆ ಹೊರಡಲಿದ್ದು, ಎಸ್ಪಿ ಉಮಾಪ್ರಶಾಂತ್ ನಗರದ ಜಯದೇವ ವೃತ್ತದಲ್ಲಿ ಚಾಲನೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವುದ ಕ್ಕಾಗಿ ಪೊಲೀಸ್ ಇಲಾಖೆಯು ಹಲವು ಯೋಜನೆಗಳಡಿ 24×7 ಕಾರ್ಯನಿರ್ವಹಿಸುತ್ತಿತ್ತು..ಈಗ ಆ ಸಾಲಿಗೆ ಮಹಿಳೆಯರು ಕೂಡ ಸೇರ್ಪಡೆಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎನ್ನುವ ಮಾತಿನ ನಡುವೆಯೂ ನಿರ್ಭೀತಿವಾಗಿ ಮಹಿಳೆಯರು ರಾತ್ರಿ ಗಸ್ತು ತಿರುಗಲಿದ್ದು, ಪುಂಡಾಟ ಮಾಡುವವರಿಗೆ ಲಾಠಿ ಬೀಸಲಿದ್ದಾರೆ.

ನಗರ ಹಾಗೂ ತಾಲೂಕುಗಳಲ್ಲಿ ಪೊಲೀಸ್ ಗಸ್ತು ವಾಹನ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆಯವೆರೆಗೆ ಸಂಚರಿಸುತ್ತಿದ್ದು, ಇಬ್ಬರು ಪುರುಷರೊಂದಿಗೆ ಒಬ್ಬ ಮಹಿಳೆ ರಾತ್ರಿ ಗಸ್ತಿನಲ್ಲಿ ಇರುವರು‌

ರಾತ್ರಿ ಸಮಯದಲ್ಲಿ ಮಹಿಳೆಯರು ತೊಂದರೆಯಲ್ಲಿದ್ದಾಗ, ಮನೆಗೆ ತಲುಪಲು ಸಮಸ್ಯೆಯಾದಾಗ ತಕ್ಷಣ ಜಿಲ್ಲಾ ಪೊಲೀಸ್ ಸಹಾಯವಾಣಿ ಮೊ.ನಂ:9480803200, ಸ್ಥಿರ ದೂರವಾಣಿ 08192-253100, 08192-262699 ಹಾಗೂ ಎಮರ್ಜೆನ್ಸಿ ರಿಜಿಸ್ಟ್ರೇಷನ್ ಸಿಸ್ಟಮ್ ನಂ. 112/100 ಗೆ ಕರೆ ಮಾಡಿ ಜಿಲ್ಲಾ ಪೊಲೀಸರ ಸಹಾಯ ಪಡೆಯಬಹುದು.

ಈಗಾಗಲೇ ಜಿಲ್ಲಾ ನಿಸ್ತಂತು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊಬೈಲ್ ನಂಬರ್‍ಗಳು, ಸ್ಥಿರ ದೂರವಾಣಿ ಸಂಖ್ಯೆಗಳೂ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಚುರುಕಾಗಿ ಕಾರ್ಯನಿರ್ವಹಿಸಲು ಮಹಿಳಾ ಗಸ್ತನ್ನು ನಿಯೋಜಿಸಲಾಗಿದೆ.

ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸುವ ಕಂಟ್ರೋಲ್ ರೂಮ್ ಸಿಬ್ಬಂದಿಯವರು ತಕ್ಷಣವೇ ಆ ಮಾಹಿತಿಯನ್ನು ರಾತ್ರಿ ಕರ್ತವ್ಯದಲ್ಲಿರುವ ಪೊಲೀಸರಿಗೆ ರವಾನಿಸಲಿದ್ದು, ಇನ್ಮುಂದೆ ಮಹಿಳಾ ಪೊಲೀಸ್ ಸಹ ಈ ಕೆಲಸಕ್ಕೆ ಕೈ ಜೋಡಿಸುವರು.

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಉಮಾಪ್ರಶಾಂತ್, ಪ್ರಥಮ ಬಾರಿಗೆ ಮಹಿಳಾ ಗಸ್ತು ಪಡೆಯನ್ನು ರಾತ್ರಿ ವೇಳೆ ಆಯೋಜಿಸಲಾಗಿದೆ. ಒಂಟು ಎಂಟು ಬೀಟ್ ಗಳನ್ನು ಹಾಕಲಾಗಿದೆ.

ಇವರು ತಮ್ಮ ವಾಹನದಲ್ಲಿ ಸಿಟಿಯಲ್ಲಿ ಗಸ್ತು ತಿರುಗಲಿದ್ದಾರೆ‌‌..ಅವರೆಲ್ಲ ಪಾಸಿಟಿವ್ ಆಗಿದ್ದಾರೆ. ಏನೇ ತೊಂದರೆ ಬಂದ್ರೂ ಅವರ ಜತೆ ನಾನು ಇರುತ್ತೇನೆ. ಇನ್ನೂ ನಗರದಲ್ಲಿ ಗಸ್ತು ಮಾಡುವ ಪೊಲೀಸರು ಯಾವುದೇ ಪ್ರದೇಶದಿಂದ ನೆರವು ಕೋರಿ ಬಂದರೂ ಕೆಲವೇ ನಿಮಿಷಗಳಲ್ಲಿ ಆ ಸ್ಥಳ ತಲುಪಿ ಅವರು ಸಹಾಯ ಮಾಡುವರು ಎಂದು ಎಸ್ಪಿ ಉಮಾಪ್ರಶಾಂತ್ ಹೇಳಿದರು. ಈ ಸಂದರ್ಭದಲ್ಲಿ ಎಎಸ್ಪಿ ಸಂತೋಷ್, ಡಿವೈಎಸ್ಪಿಮಲ್ಲೇಶ್ ನಾಯ್ಕ್, ಮಹಿಳಾ ಪಿಐ ಮಲ್ಲಮ್ಮ ಚೌಬೆ ಇದ್ದರು.

Share.
Leave A Reply

Exit mobile version