ನಂದೀಶ್ ಭದ್ರಾವತಿ, ದಾವಣಗೆರೆ

ನಾನು ಸಕ್ರಿಯ ರಾಜಕಾರಣದಲ್ಲಿಯೆ ಇದ್ದೇನೆ. ಅದರಲ್ಲೂ ನನ್ನ ಮಾತೃ ಪಕ್ಷ ಕಾಂಗ್ರೆಸ್‌ನಲ್ಲಿಯೇ ಇದ್ದೇನೆ ಎನ್ನುವ ಮೂಲಕ ಪಕ್ಷದ ಯುವ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಪಬ್ಲಿಕ್ ಇಂಪ್ಯಾಕ್ಟ್ ನೊಂದಿಗೆ
ಮಾತಿಗಿಳಿದ ಅವರು, ಕಳೆದ 1 ವರ್ಷಗಳ ಚುನಾವಣೆಗೆಗಾಗಿ ಹೆಚ್ಚು ಸಮಯ ಮೀಸಲಿಟ್ಟಿದ್ದರಿಂದ ವೈಯಕ್ತಿಕ ಕೆಲಸಗಳು ಬಾಕಿ ಉಳಿದಿದ್ದವು. ಚುನಾವಣೆ ನಂತರ ಬಾಕಿ ಕೆಲಸಗಳನ್ನು ಮಾಡಲೇಬೇಕಿದ್ದು ಹಿನ್ನೆಲೆಯಲ್ಲಿ ಒಂದಷ್ಟು ಕಾಲ ಕಾಣಿಸಿಕೊಳ್ಳಲಿಲ್ಲ ಅಷ್ಟೇ. ಅದರಾಚೆ ಬೇರೆನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈಗಲೂ ನಾನು ಕಾಂಗ್ರೆಸ್ ನಲ್ಲಿಯೇ ಇದ್ದೇನೆ, ಬೇರೆ ಎಲ್ಲಿಯೂ ಹೋಗಿಲ್ಲ

ಈಗಲೂ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ ಎನ್ನುವ ಮೂಲಕ ಅವರು ನಾನು ಜೆಡಿಎಸ್ ಸೇರಿದ್ದೆ ಎಂದು ಕೆಲವರು ಹಬ್ಬಿಸಿದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಕೆಲವರು ನನ್ನನ್ನು ರಾಜಕೀಯವಾಗಿ ಹಿಂದಕ್ಕೆ ಎಳೆಯಲು ಸಾಕಷ್ಟು ಪ್ರಯತ್ನಪಟ್ಟರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ನೀಡಿರುವ ದೂರು ಹಾಗೇಯೆ ಇದೆ. ನೋಡೋಣ ಮುಂದೆ ಏನಾಗುತ್ತದೆಯೋ ಎಂದು ತಮ್ಮ ತೇಜೋವಧೆ ಮಾಡಲು ಕೆಲವರು ಯತ್ನಿಸಿದ ಕುರಿತ ಪ್ರಶ್ನೆಗೆ ಸವಿತಾಬಾಯಿ ಉತ್ತರಿಸಿದರು.

ಪರಾಭವಗೊಂಡರು, ಜನರು ನನ್ನ ಮನೆಗೆ ಬಂದು ಕಷ್ಟ ಕೇಳಬಹುದು

ಚುನಾವಣೆಯಲ್ಲಿ ಪರಾಭವಗೊಂಡಿರಬಹುದು. ಆದರೆ ಮಾಯಕೊಂಡ ಕ್ಷೇತ್ರದ ಜನತೆ ತೋರಿದ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರಿಗಾಗಿ ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಅವರ ಕಷ್ಟ ಸುಖಗಳಲ್ಲಿ ನಾನು ಸದಾ ಭಾಗಿಯಾಗಿರುತ್ತೇನೆ ಎಂದು ಹೇಳಿದರು.

ನಾನು ಜೆಡಿಎಸ್ ಸೇರಿಲ್ಲ

ಚುನಾವಣೆ ಆದ ಮೇಲೂ ನನ್ನ ಜೀವನದಲ್ಲಿ ಯಾವುದೇ ಬದಲಾವಣೆಗಳ ಆಗಿಲ್ಲ. ಪಕ್ಷದಲ್ಲಿ ಆಗಲೂ ಇದ್ದೆ. ಈಗಲೂ ಇದ್ದೇನೆ. ಎಂಎಲ್‌ಸಿ ರಘು ಆಚಾರ ಅವರು ನಮ್ಮ ಕುಟುಂಬದ ಸ್ನೇಹಿತರು. ಹಾಗಾಗಿ ಅವರು ಜೆಡಿಎಸ್ ಸೇರ್ಪಡೆವೇಳೆ ಅವರೊಂದಿಗೆ ನಾನು ಫ್ಯಾಮಿಲಿ ಫ್ರೆಂಡ್ ಆಗಿ ಹೋಗಿದ್ದೆ ಅಷ್ಟೇ. ಅದರ ಹೊರತಾಗಿ ನಾನು ಜೆಡಿಎಸ್ ಸೇರಿದೆ ಎಂದು ಕೆಲವರು ಇಲ್ಲದ ಸುದ್ದ ಹಬ್ಬಿಸಿದ್ದಾರೆ ಎಂದರು.

ಸಿದ್ದರಾಮಯ್ಯ ಕರೆ ಮಾಡಿದ್ದಕ್ಕೆ ಚುನಾವಣೆಯಿಂದ ಹಿಂದೆ ಸರಿದೆ

ಚುನಾವಣೆ ಸಂದರ್ಭದಲ್ಲಿ ಪಕ್ಷದ ನಾಯಕರಾದ ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ ಅವರು ಕರೆ ಮಾಡಿದ ಹಿನ್ನೆಲೆಯಲ್ಲಿ ಅಧಿಕೃತ ಅಭ್ಯರ್ಥಿಯ ಗೆಲುವಿಗಾಗಿ ನಾನು ಚುನಾವಣಾ ಕಣದಿಂದ ಹಿಂದೆ ಸರಿದೆ ಅಷ್ಟೇ. ಆದರೂ ನನಗೆ 550 ಕ್ಕೂ ಅಧಿಕ ಮತಗಳು ಬಂದಿವೆ.
ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿಯುವ ಮುನ್ನ ನನ್ನೊಟ್ಟಿಗೆ ಕೆಲಸ ಮಾಡಿದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಲಹೆ ಪಡದೆ. ನಂತರ ಈ ನಿರ್ಧಾರಕ್ಕೆ ಬರಲಾಯಿತು.

ಲೋಕಸಭೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರ ಪರ ಕೆಲಸ ಮಾಡುತ್ತೇನೆ

ಭವಿಷ್ಯದಲ್ಲಿಯೂ ಪಕ್ಷಕ್ಕೆ ಬೆಂಬಲ ನೀಡುತ್ತೇನೆ. ಕಾರ್ಯಕರ್ತರ ಪರವಾಗಿ ಕೆಲಸ ಮಾಡುತ್ತೇನೆ.
ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರ ಆಶೀರ್ವಾದದಿಂದ ಬೆಳೆದವಳು ನಾನು. ಇದೀಗ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ನಡೆಯತ್ತಿದೆ. ನಾನು ಕೂಡ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಯಾವುದಾದರೂ ಅಧ್ಯಕ್ಷ ಸ್ಥಾನ ನೀಡಿದರೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ನನಗಿದೆ.

ನಾನು ಮಾಯಕೊಂಡದ ಮನೆ ಮಗಳು

ನಿತ್ಯ ಈಗಲೂ ಹತ್ತಾರು ಜನ ಮನೆಗೆ ಬರುತ್ತಾರೆ. ಅವರಿಗೆ ಕೈಲಾದ ಸಹಾಯ ಮಾಡುತ್ತೇನೆ. ಕೆಲಸ ಇಲ್ಲದೇ ಸುಮ್ಮನೆ ಕುಳಿತಿಲ್ಲ. ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಯಾವಾಗಲೂ ಕೂಡ ನಾನು ಮಾಯಕೊಂಡ ಕ್ಷೇತ್ರದ ಮನೆಮಗಳೇ. ಎಲ್ಲರ ಬಳಿ ನನ್ನ ಪೋನ್ ನಂಬರ್ ಇದೆ. ಯಾವುದೇ ಸಹಾಯ ಬೇಕಿದ್ದರು ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದರು. ಇದು ಮಾಯಕೊಂಡದ ಕ್ಷೇತ್ರದ ಪರಾಜಿತ ಅಭ್ಯರ್ಥಿ ನೇರ ಪ್ರಶ್ನೆಗೆ, ನೇರ ಉತ್ತರ ನೀಡಿದ್ದಾಗಿತ್ತು.
…..

Share.
Leave A Reply

Exit mobile version