ದಾವಣಗೆರೆ : ವಾಹನಗಳ ಕಳ್ಳತನ, ಅಕ್ರಮ ಚಟುವಟಿಕೆಗಳಿಗೆ ವಾಹನಗಳ ಬಳಕೆ, ಡ್ಯೂಪ್ಲಿಕೇಟ್ ಆರ್ ಸಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದ್ದು, ಚಿಪ್ ಇರುವ ಆರ್ ಸಿ, ಡಿಎಲ್ ಕಾರ್ಡ್ ಗಳನ್ನು ನೀಡಲು ನಿರ್ಧಾರ ಮಾಡಿದೆ. 2024 ರ ಫೆಬ್ರವರಿ ನಂತರ ಚಿಪ್ ಇರುವ ಡಿಎಲ್, ಆರ್ ಸಿ ಕಾರ್ಡ್ ಗ್ರಾಹಕರ ಕೈಗೆ ಸೇರಬಹುದು ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ.
ಚಿಪ್ ಇರುವ ಕಾರ್ಡ್ ಗಳಿಂದ ಪೊಲೀಸರಿಗೆ, ಆರ್ ಟಿಒ ಅಧಿಕಾರಿಗಳು, ಸಾರ್ವಜನಿಕರಿಗೂ ಅನುಕೂಲವಾಗಲಿದ್ದು, ಕಳ್ಳತನ ಪ್ರಕರಣಗಳು ಕಡಿಮೆಯಾಗಲಿದೆ. ಮೊದಲಿದ್ದಡಿಎಲ್, ಆರ್ಸಿ ಕಾರ್ಡುಗಳಿಗೆ ಹೋಲಿಸಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿ ಇರಲಿದೆ. ಚಿಪ್ ಇರುವುದರಿಂದ ಅಧಿಕಾರಿಗಳಿಗೆ, ಟ್ರಾಫಿಕ್ ಪೊಲೀಸರಿಗೆ ಕ್ಷಣಮಾತ್ರದಲ್ಲಿ ಲಭ್ಯವಾಗಲಿದೆ. ಇದರಿಂದ ಟ್ರಾಫಿಕ್ ಪೊಲೀಸರು ಮತ್ತು ಅಧಿಕಾರಿಗಳಿಗೆ ವಾಹನ ಮಾಲೀಕನ ಹಾಗೂ ಆತನ ಡಿಎಲ್ ಬಗ್ಗೆ ಮಾಹಿತಿ ಶೀಘ್ರದಲ್ಲಿ ಸಿಗಲಿದೆ.
ಹೇಗಿರಬಹುದು ಹೊಸ ಕಾರ್ಡ್
ಈ ಹೊಸ ಕಾರ್ಡ್ ನಲ್ಲಿ ರಿಜಿಸ್ಟ್ರೇಷನ್ ನಂಬರ್ , ದಿನಾಂಕ,ವ್ಯಾಲಿಡಿಟಿ, ಎಂಜಿನ್ ನಂಬರ್, ಓನರ್ ಮಾಹಿತಿ, ವಿಳಾಸ ಇರಲಿದೆ. ಅಲ್ಲದೇ ಕಾರ್ಡ್ ನ ಹಿಂಭಾಗದಲ್ಲಿ ಎಂಜಿನ್ ನಂಬರ್, ಮಾಲೀಕನ ಮಾಹಿತಿ ಮತ್ತು ವಿಳಾಸ ಇರಲಿದೆ. ಮುಖ್ಯವಾಗಿ ಈ ಸ್ಮಾರ್ಟ್ ಕಾರ್ಡ್ ಗೆ ಕ್ಯೂರ್ ಕೋಡ್, ತುರ್ತುಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿರುತ್ತದೆ. ಅಲ್ಲದೇ ವಾಹನ ತಯಾರಕರ ಹೆಸರು, ಮಾಡೆಲ್, ವಾಹನದ ಮಾದರಿ ಸೇರಿದಂತೆ ಇತ್ಯಾದಿ ಮಾಹಿತಿಗಳು ಲಭ್ಯವಿದ್ದು, ಹೊಸ ಡಿಜಿಟಲ್ ಸ್ಮಾರ್ಟ್ ಕಾರ್ಡ್ ತಯಾರಿಕೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, 2024 ರ ಫೆಬ್ರುವರಿ ಹೊತ್ತಿಗೆ ಸವಾರರ ಕೈಗೆ ಹೊಸ ಕಾರ್ಡ್ ದೊರಕಲಿದ್ದು, ಹೇಗೆ ಇರುತ್ತದೆ ಎಂದು ಕಾದು ನೋಡಬೇಕಿದೆ.