ದಾವಣಗೆರೆ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ನವೆಂಬರ್ 16ರಂದು ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿರುವ ಸರ್ಕಾರಿ ಬಾಲಕರ ಪದವಿ- ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 10 ಗಂಟೆಯಿಂದ ನಾಲ್ಕು ಗಂಟೆಯವರೆಗೆ ಮತದಾನ ನಡೆಯಲಿದೆ.
ಸುಮಾರು 4 ಸಾವಿರ ಮತದಾರರು ನಾನಾ ವಿಭಾಗಗಳಿಗೆ ಮತ ಚಲಾಯಿಸಲಿದ್ದಾರೆ. ನವೆಂಬರ್ 7ರವರೆಗೆ ನಾಮಪತ್ರ ಸಲ್ಲಿಸಬಹುದಾಗಿತ್ತು. ನವೆಂಬರ್ 8 ರಂದು ನಾಮಪತ್ರಗಳ ಪರಿಶೀಲನೆ ನಡೆಯಿತು. ನ.11 ರಂದು ಉಮೇದುವಾರಿಕೆ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು.. ಒಟ್ಟು ದಾವಣಗೆರೆ ಜಿಲ್ಲೆಯಲ್ಲಿ 66 ಸ್ಥಾನಗಳಿದ್ದು, 25 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 39 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ತಾಲೂಕು,ಜಿಲ್ಯಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದೆ.
ಯಾರು ಸ್ಪರ್ಧಾಳುಗಳು
1)ಅಧಿಕಾರಿಗಳು ಮತ್ತು ಬೋಧಕೇತರ ನೌಕರರ ವಿಭಾಗ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ- 121 ಮತದಾರರಿಗೆ ಇಬ್ಬರು ಪ್ರತಿಸ್ಪರ್ಧಿಗಳು ಕಂಟೆಸ್ಟ್ ಮಾಡಿದ್ದಾರೆ.
2) ಪ್ರಾಥಮಿಕ ಶಾಲಾ ವಿಭಾಗದಿಂದ 1178
ಮತದಾರರಿಗೆ 16 ಜನ ಪ್ರತಿಸ್ಪರ್ಧಾಳುಗಳು ಸ್ಪರ್ಧೆ
ಮಾಡಿದ್ದಾರೆ .
3) ಪ್ರೌಢಶಾಲಾ ವಿಭಾಗದಿಂದ 518 ಮತದಾರರಿಗೆ 9 ಜನ ಪ್ರತಿಸ್ಪರ್ಧಿಗಳು ಕಂಟೆಸ್ಟ್ ಮಾಡಿದ್ದಾರೆ.
4) ಪದವಿ ಪೂರ್ವ ಕಾಲೇಜು ವಿಭಾಗದಿಂದ 184 ಮತದಾರರಿಗೆ ನಾಲ್ಕು ಜನ ಪ್ರತಿಸ್ಪರ್ಧಿಗಳು ಕಂಟೆಸ್ಟ್ ಮಾಡಿದ್ದಾರೆ. ಇವರಲ್ಲಿ ಈ ಜಿ.ಬಿ ಶಿವಕುಮಾರ್.. ಜಿ ಎನ್ ಮಂಜಪ್ಪ ಮತ್ತು ಪಾಲಾಕ್ಷ ಇವರುಗಳು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿಯಾಗಿದ್ದಾರೆ. ಜಿ. ಹಾಲೇಶಪ್ಪ ದಾವಣಗೆರೆ ಸರ್ಕಾರಿ ನೌಕರರ ಸಂಘದ ಚುನಾವಣೆಯ ರಿಟರ್ನಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಸರಕಾರಿ ನೌಕರರ ಚುನಾವಣೆ ಕಣ ರಂಗೇರುತ್ತಿದೆ.