ದಾವಣಗೆರೆ: ಇವರು ದಾವಣಗೆರೆ ಕಂಡ ಆರಕ್ಷಕ ಪಡೆಯಲ್ಲಿ ಅತ್ಯುನತ್ತ ಅಧಿಕಾರಿ…ಜಾಸ್ತಿ ಮಾತು ಇಲ್ಲ, ಆದರೆ ಕೆಲಸ ಪಕ್ಕಾ, ಅಷ್ಟಾಗಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸೋದಿಲ್ಲ..ವಾರಕ್ಕೆ ಒಂದು ದಿನ ಮಾತ್ರ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ, ಉಳಿದ ದಿನವೆಲ್ಲ, ಜನರ ಸೇವೆ, ಕರ್ತವ್ಯ ಪಾಲನೆ….

ಹೌದು…ದಾವಣಗೆರೆಯಲ್ಲಿ ಆರ್.ಚೇತನ್ ಐಪಿಎಸ್ ಎಂದು ಕೇಳಿದ್ರೆ ಸಾಕು, ರೌಡಿಗಳು ನಡುಗುತ್ತಾರೆ..ರೌಡಿ ಶೀಟರ್ ಬುಳ್ಳ ನಾಗ ಕೇಸ್ , ಕಕ್ಕರಗೊಳ್ಳ ಅತ್ಯಾಚಾರ ಪ್ರಕರಣ, ಹೀಗೆ ಹಲವಾರು ರೌಡಿಗಳನ್ನು ಮಣ್ಣುಮುಕ್ಕಿಸಿದ ಅಧಿಕಾರಿ…ಮಾತು ಕಡಿಮೆ, ಕೆಲಸ ಜಾಸ್ತಿ….

ಆರ್.ಚೇತನ್‌ ಹೆಸರು ಕೇಳಿದಾಕ್ಷಣ ಕಣ್ಣ ಮುಂದೆ ಬರುವ ಆರೂವರೆ ಅಡಿ ಎತ್ತರದ ಅಜಾನುಬಾಹು ಖಡಕ್ ಪೊಲೀಸ್ ಅಧಿಕಾರಿ. ದಾವಣಗೆರೆಯಲ್ಲಿದ್ದಷ್ಟು ದಿನ ಮರಳು‌ ಮಾಫಿಯಾ, ಓಸಿ,‌ಮಟ್ಕಾ‌ ಮೊದಲಾದ‌ ಧೋ ನಂಬರ್ ದಂಧೆಗೆ ಕಡಿವಾಣ ಹಾಕಿದ ಐಪಿಎಸ್ ಅಧಿಕಾರಿ.

ಎಸ್ಪಿ ಚೇತನ್ ಎಂದರೆ ಒಂದು ಗತ್ತು, ಒಂದು ಗಾಂಭೀರ್ಯ, ರೈತಾಪಿ ಕುಟುಂಬದಲ್ಲಿ ಹುಟ್ಟಿ ಕಠಿಣ ಪರಿಶ್ರಮದಿಂದಲೇ ಐಪಿಎಸ್ ಪಾಸು ಮಾಡಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದಕ್ಷತೆ, ಪ್ರಾಮಾಣಿಕತೆಯಿಂದ‌ ಕೆಲಸ ಮಾಡಿ ಇದೀಗ ಕಲಬುರುಗಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ‌ಅವರು ಇಂದು ತಮ್ಮ 45 ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಅವರ ಸಿಬ್ಬಂದಿಗಳು ಅವರ ಬಗ್ಗೆ ಮನದಾಳದ ಮಾತುಗಳನ್ನಾಡಿದ್ದು…ತಪ್ಪದೇ ಓದಿ..‌

ಚೇತನ್ ಸರ್ ಒಬ್ಬ ಮೇಷ್ಟ್ರು ಮಗ, ರೈತಾಪಿ ಕುಟುಂಬದಿಂದ ಬಂದವರು, ಊರಿಗೆ ಹೋದಾಗ ಸಾಮಾನ್ಯ ವ್ಯಕ್ತಿ ರೀತಿ ಇರುತ್ತಾರೆ. ಎಂಜಿನಿಯರ್ ಓದಿದ್ದರೂ, ದೂರ ಶಿಕ್ಷಣದಲ್ಲಿ ಕನ್ನಡದಲ್ಲಿ ಸಾಮಾನ್ಯರಂತೆ ಪರೀಕ್ಷೆ ಬರೆದರು. ಕೆಲಸದಲ್ಲಿ ಕಟ್ಟು ನಿಟ್ಟಿದ್ದು, ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಪ್ರಕರಣಗಳನ್ನು ಬೇಧಿಸಿದ್ದೇವೆ. ಕಲಬುರ್ಗಿಯಲ್ಲಿ ಅವರದ್ದೇ ಸ್ಟೈಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ…ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡಲಿ..ದೇವರು ಆರೋಗ್ಯ, ಆಯುಷ್ಯ ಕೊಡಲಿ.ಹ್ಯಾಪಿ ಬರ್ತಡೇ ಸರ್.

-ಬಿ.ಎಸ್.ಬಸವರಾಜ್, ಡಿಎಸ್ಪಿ, ಗ್ರಾಮಾಂತರ.

ಚೇತನ್ ಸರ್ ಕಷ್ಟದಿಂದ ಬಂದು ಐಪಿಎಸ್ ಮಾಡಿದ ಅಧಿಕಾರಿ, ಅವರು ಜಾಸ್ತಿ ಮಾತಡೋಲ್ಲ, ಕೆಲಸ ಜಾಸ್ತಿ ಮಾಡುತ್ತಿದ್ದರು..ಬಂದೋ ಬಸ್ತ್ ವೇಳೆ ಸಾಕಷ್ಟು ಪ್ಲಾನ್ ಕೈಗೊಳ್ಳುತ್ತಿದ್ದರು‌ ಅಲ್ಲದೇ ಜನರ ಪ್ರೀತಿ ಗಳಿಸಿದ್ದವರು. ಅತ್ಯಂತ ದಕ್ಷ,ಪ್ರಾಮಾಣಿಕ ಪೊಲೀಸ್ ಅಧಿಕಾರಿ ಯಾದ ಚೇತನ್ ಸರ್ ರವರಿಗೆ ಜನ್ಮ ದಿನದ ಶುಭಾಶಯಗಳು ಸರ್.

ಪ್ರಕಾಶ್, ಡಿಆರ್ ಡಿಎಸ್ಪಿ

ನನ್ನ ನೆಚ್ಚಿನ ಅಧಿಕಾರಿಗಳಲ್ಲಿ ಒಬ್ಬರಾದ ಶ್ರೀ ಚೇತನ್ ಆರ್ ಐಪಿಎಸ್ ರವರಿಗೆ ಜನುಮ ದಿನದ ಶುಭಾಶಯಗಳು. ಸರಳ, ಸಜ್ಜನಿಕೆಯ, ಪ್ರಾಮಾಣಿಕತೆ ಅಧಿಕಾರಿ. ಸಾರ್ವಜನಿಕ ಸೇವೆಯಲ್ಲಿ ಹೆಸರು ಮಾಡಿರುವಂತೆ ತಮ್ಮ ಸಿಬ್ಬಂದಿಗಳ ಬಗ್ಗೆ ಅತೀವ ಕಾಳಜಿ ವಹಿಸುವ ವ್ಯಕ್ತಿತ್ವ ಅವರದು. ಅವರೊಂದಿಗೆ ಕೆಲಸ ಮಾಡಿದ ಹೆಮ್ಮೆ ಇದೆ.

ಪ್ರಶಾಂತ್, ಪೊಲೀಸ್ ಸಿಬ್ಬಂದಿ

ಕರ್ತವ್ಯ ನಿಷ್ಟೆ, ಪ್ರಾಮಾಣಿಕ ಸೇವೆಗೆ ಹೊಸ ಅರ್ಥ ಕಲ್ಪಿಸಿ, ತಮ್ಮ ಅಪ್ರತಿಮ ಸೇವೆಯಿಂದ ಇಲಾಖೆಯ ಹಾಗೂ ಸಾರ್ವಜನಿಕರಲ್ಲಿ ಮಾದರಿ ಅಧಿಕಾರಿ ಎನಿಸಿಕೊಂಡವರು ಎಸ್ಪಿ ಚೇತನ್ ಸರ್.‌ ಹಾಗೂ ತಮ್ಮ ಸರಳ ಮತ್ತು ಆದರ್ಶ ಜೀವನ ಇತರೆ ಅಧಿಕಾರಿಗಳಿಗೆ ಸ್ಪೂರ್ತಿದಾಯಕವಾದುದು, ಪೊಲೀಸ್ ಇಲಾಖೆಯ ಚೈತನ್ಯ ಚಿಲುಮೆಯಾಗಿರುವ ನಿಮಗೆ ಹುಟ್ಟು ಹಬ್ಬದ ಶುಭಾಷಯಗಳು.

ದೇವರಾಜ್, ಪೊಲೀಸ್ ಸಿಬ್ಬಂದಿ

ಎಸ್ ಪಿ ಸರ್, ತಾಳ್ಮೆ ಸಮಾಧಾನದ ಜೊತೆ ಎಲ್ಲರ ಪ್ರೀತಿಯ ಪಾತ್ರರಾದ ದಕ್ಷ ಅಧಿಕಾರಿಗಳು, ಇವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು… ದೇವರು ಸರ್ ರವರಿಗೆ ಅರೋಗ್ಯ, ಆಯುಷ್ಯ ಮತ್ತು ನೆಮ್ಮದಿ ಸಂತೋಷವನ್ನು ಕರುಣಿಸಲೆಂದು ಹಾರೈಸುತ್ತೇನೆ.

ದುಗ್ಗೇಶ್, ಪೊಲೀಸ್ ಸಿಬ್ಬಂದಿ

Share.
Leave A Reply

Exit mobile version