
ದಾವಣಗೆರೆ : ಸ್ಥಳೀಯ ಕಲಾವಿದೆ ರುದ್ರಾಕ್ಷಿ ಬಾಯಿಗೆ ಮಹಿಳಾ ದಿನಾಚರಣೆ ನಿಮಿತ್ತ ವೀರ ವನಿತೆ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಸದಾಶಿವ ನಗರದಲ್ಲಿ ನಡೆದ ಪ್ರಸಿದ್ಧ ಚಿತ್ರಸಂತೆ ಸಂಸ್ಥೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರುದ್ರಾಕ್ಷಿ ಬಾಯಿ ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ರುದ್ರಾಕ್ಷಿ ಬಾಯಿ ಸಂಗೀತ ಶಿಕ್ಷಕಿಯಾಗಿದ್ದು, ತಮ್ಮ ಸುದೀರ್ಘ ಸಂಗೀತ ಸೇವೆಗಾಗಿ ವೀರ ವನಿತೆ ಪ್ರಶಸ್ತಿ 2025* ನೀಡಿ ಗೌರವಿಸಲಾಗಿದೆ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಚಲನಚಿತ್ರ ರಂಗದ ಖ್ಯಾತ ಚಿತ್ರ ನಟಿ ಡಾ. ಪ್ರಿಯಾಂಕಾ ಉಪೇಂದ್ರಅವರು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು
ಈ ಸಂದರ್ಭದಲ್ಲಿ ಮಹಿಳೆಯರು ಎಲ್ಲ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮದೇ ಆದ ಕ್ಷೇತ್ರಗಳಲ್ಲಿ ಅನುಪಮ ಸಾಧನೆಯನ್ನು ಮಾಡುತ್ತಿದ್ದಾರೆ
ಅವರ ಸಾಧನೆಗೆ ಕುಟುಂಬದ ಸದಸ್ಯರ ಪ್ರೋತ್ಸಾಹ ಅಗತ್ಯವಿದೆ. ಅಲ್ಲದೆ ನಾವು ಕೂಡ ತಂದೆ ತಾಯಿ ಅತ್ತೆ ಮಾವ ಅಣ್ಣ ತಮ್ಮ ಗಂಡ ಮಕ್ಕಳೊಂದಿಗೆ ಪ್ರೀತಿ ಮತ್ತು ಸಂಸ್ಕಾರ ಸಮಯವನ್ನು ಮೀಸಲಿಟ್ಟು ನಮ್ಮ ಕಾರ್ಯ ಸಾಧನೆಯನ್ನು ಮಾಡಬೇಕು ಎಂದು ತಿಳಿಸಿದರು