ದಾವಣಗೆರೆ : ಮಾಜಿ ಸಚಿವ ಸೋಮಣ್ಣ ಸಿದ್ದಗಂಗಾ ಮಠದಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನೆಲೆ ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕೆಂಡಾಮಂಡಲವಾದರು.

ಮಾಜಿ ಸಚಿವ ಸೋಮಣ್ಣ ಬಿಜೆಪಿಯಲ್ಲಿ ಎಲ್ಲವನ್ನು ಅನುಭವಿಸಿದ್ದಾರೆ. ಪಕ್ಷದಲ್ಲಿ ಅಸಮಾಧಾನ ಇದೆ, ಅದನ್ನು ಕುಳಿತು ಬಗೆಹರಿಸಿಕೊಳ್ಳಬೇಕು. ಮಠದಲ್ಲಿ ಮಾತನಾಡುವ ಅವಶ್ಯಕತೆ  ಇತ್ತಾ..ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಸೋಮಣ್ಣ ಸಿದ್ದಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ..ದೆಹಲಿಗೆ ಹೋಗ್ತಾರಾ ಹೋಗಲಿ ಅದೇನು ಚಾಡಿ ಹೇಳುತ್ತಾರೋ ಹೇಳಲಿ..ನಮಗೂ ದೆಹಲಿ ನಾಯಕರು ಗೊತ್ತು, ನಾವು ದೆಹಲಿಗೆ ಹೋಗ್ತಿವಿ..ಬಿಎಸ್ ವೈ ಬಗ್ಗೆ ಮಾತನಾಡಿದರೆ ಸುಮ್ಮನೇ ಇರಲ್ಲ..ಬಿಎಸ್ ವೈ ಕರೆದು ಹೊಡೆದರು ಪರವಾಗಿಲ್ಲ, ನಾನು ಮಾತನಾಡುತ್ತೇನೆ..ವಿನಾಕಾರಣ ಬಿಎಸ್ ವೈ ಬಗ್ಗೆ ಮಾತನಾಡೋದು ಸರಿಯಲ್ಲ..

ವಿಧಾನ ಸಭೆ ಸೋಲು ಹೊಡೆತವನ್ನು ವರಿಷ್ಠರು ನೋಡಿದ್ದಾರೆ..ಹೀಗಾಗಿ ವಿಜಯೇಂದ್ರರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ..ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದೆ ಬಿಎಸ್ ವೈ..ಬಿಎಸ್ ವೈ ರೆಡಿ ಮೇಡ್ ಫುಡ್ ಅಲ್ಲ..

ಸೋಮಣ್ಣ ಬಂದಿದ್ದು ಕಾಂಗ್ರೆಸ್ ನಿಂದ..ನಿಮ್ಮಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ..ಕಾಂಗ್ರೆಸ್ ನಿಂದ ಬಂದು ಅಧಿಕಾರ ಅನುಭವಿಸಿದ್ದೀರಿ..ಸೋತರು ಸಹ ಎಂಎಲ್ ಸಿ ಆಗಿ ಅಧಿಕಾರ ಅನುಭವಿಸಿದ್ದೀರಿ.ನಿಮ್ಮನ್ನೂ ಸಚಿವರನ್ನಾಗಿ ಬಿಎಸ್ ವೈ ಮಾಡಿದ್ದು ತಪ್ಪಾ..ಕಾಂಗ್ರೆಸ್ ನಿಂದ ಬಂದು ಸಚಿವರಾಗಲಿಲ್ಲವೇ.. ಆಗ ನಮಗೇನು ಸಾಮರ್ಥ್ಯ ಇರಲಿಲ್ಲವೆ..ನಿರಂತರವಾಗಿ ಅಧಿಕಾರ ಅನುಭವಿಸಿ ಈಗ ಬಿಎಸ್ ವಿರುದ್ದ ಮಾತನಾಡುತ್ತೀರಾ..

ಕೀಳು ಮಟ್ಟದ ಭಾಷೆ ಬಳಸುತ್ತೀರಾ..ವಿಜಯೇಂದ್ರ ಪಾರ್ಟಿ ಕಟ್ಟಿಲ್ವ.ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡುತ್ತಿದ್ದೀರಿ..ಬಾಯಿಗೆ ಬೀಗ ಹಾಕಿ ಸುಮ್ಮನೇ ಇದ್ದೆರೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಜಿನಮನೆಯಲ್ಲಿ ಕೂತು ವರದಿ ತಯಾರಿಸಿದ್ದಾರೆ

ಜಾತಿ ಗಣತಿ ವಿರೋಧ ಹಿನ್ನಲೆ ಮಾತನಾಡಿದ ಮಾಜಿ ಶಾಸಕ ರೇಣುಕಾಚಾರ್ಯ, ಗಾಜಿನಮನೆಯಲ್ಲಿ ಕೂತು ವರದಿ ತಯಾರಿಸಿದ್ದಾರೆ..ಮನೆಮನೆಗೆ ಹೋಗಿ ವರದಿ ತಯಾರಿಸಿ..

ಜಾತಿ ಗಣತಿ ಅವೈಜ್ಞಾನಿಕವಾಗಿದೆ.ತರಾತುರಿ ಏನಿದೆ, ಆರು ತಿಂಗಳ ಆಗಲಿ, ಸರಿಯಾಗಿ ಮಾಡಿ ಎಂದು ರೇಣುಕಾಚಾರ್ಯ ಹೇಳಿದರು.

Share.
Leave A Reply

Exit mobile version