ದಾವಣಗೆರೆ : ರಾಜ್ಯದ 20 ಕ್ಷೇತ್ರಗಳ BJP ಅಭ್ಯರ್ಥಿಗಳ ಪಟ್ಟಿ ಫೈನಲ್? ಸಿಟಿ ರವಿ, ಪ್ರತಾಪ್ ಸಿಂಹಗೆ ಕೊಟ್ರು ನೋಡಿ ಚೆಂಬು?ಈಶ್ವರಪ್ಪನವರಿಗೆ ಹಾವೇರಿಯಲ್ಲಿ ಬಿಗ್ ಶಾಕ್!!?
ರಾಜ್ಯ ಬಿಜೆಪಿಯ ಲೋಕಸಭಾ ಕ್ಷೇತ್ರಗಳ ಪಟ್ಟಿ ರಿಲೀಸ್ ಆಗುತ್ತೆ.? ಯಾವ್ಯಾವ ಹಾಲಿ ಸಂಸದರಿಗೆ ಈ ಸಲ ಟಿಕೆಟ್ ಮಿಸ್ ಆಗುತ್ತೆ ಅನ್ನೋ ಕುತೂಹಲಕ್ಕೆ ಇವತ್ತು ಅಂತೂ ತೆರೆ ಬಿದ್ದಿದೆ.
ಅಂದುಕೊಂಡಂತೆಯೇ ಸಿಟಿ ರವಿ ಮತ್ತು ಪ್ರತಾಪ್ ಸಿಂಹಗೆ ಚೆಂಬು ಕೊಟ್ಟಿದ್ದಾರೆ. ತಮ್ಮ ಪುತ್ರ ಕಾಂತೇಶ್ಗೆ ಹಾವೇರಿ ಟಿಕೆಟ್ ಗಿಟ್ಟಿಸಲೇಬೇಕು ಅಂತೇಳಿ ಹಾರಾಡ್ತಿದ್ದ ಈಶ್ವರಪ್ಪನವರಿಗೂ ಬಿಗ್ ಶಾಕ್ ಎದುರಾಗಿದೆ. ಹಾಗಾದ್ರೆ ರಾಜ್ಯ ಬಿಜೆಪಿಯ ಲೋಕಸಭಾ ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಗೊತ್ತಾ.?
2024ರ ಲೋಕಸಭಾ ಚುನಾವಣೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಈಗಾಗಲೇ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಘಟಾನುಘಟಿ ನಾಯಕರು ಸಭೆ ನಡೆಸಿ, ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಯಾವುದೇ ಗೊಂದಲಗಳಿಲ್ಲದ ಕ್ಷೇತ್ರಗಳಲ್ಲಿ ಪಕ್ಷದ ನಾಯಕರ ಒಮ್ಮತದ ಅಭಿಪ್ರಾಯದ ಮೇರೆಗೆ 195 ಅಭ್ಯರ್ಥಿಗಳನ್ನ ಘೋಷಿಸಿದ್ದು, ಕೆಲವು ಗೊಂದಲದ ಕ್ಷೇತ್ರಗಳ ಕುರಿತು ಬಿಜೆಪಿ ಹೈಕಮಾಂಡ್ ನಾಯಕರು ಸಭೆ ನಡೆಸಿ, ಇದೀಗ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಸೇರಿದಂತೆ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಿಎಂ ಡಿವಿ ಸದಾನಂದಗೌಡ ಸೇರಿದಂತೆ ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹಾಗಾದ್ರೆ ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ಯಾರಿಗೆಲ್ಲಾ ಬಿಜೆಪಿ ಟಿಕೆಟ್ ಸಿಕ್ಕಿದೆ ಗೊತ್ತಾ?
ಕರ್ನಾಟಕದಲ್ಲಿ ಟಿಕೆಟ್ ಪಡೆದವರು
1. ಚಿಕ್ಕೋಡಿ: ಅಣ್ನಾ ಸಾಹೇಬ್ ಶಂಕರ್ ಜೊಲ್ಲೆ
2. ಬಾಗಲಕೋಟೆ: ಪಿ.ಸಿ ಗದ್ದಿಗೌಡರ
3. ಬಿಜಾಪುರ: ರಮೇಶ ಜಿಗಜಿಣಗಿ
4. ಗುಲ್ಬರ್ಗ: ಡಾ. ಉಮೇಶ್ ಜಾಧವ್
5. ಬೀದರ್: ಭಗವಂತ ಖೂಬಾ
6. ಕೊಪ್ಪಳ: ಬಸವರಾಜ ಕ್ಯಾವತ್ತೂರ
7. ಬಳ್ಳಾರಿ: ಶ್ರೀರಾಮುಲು
8. ಹಾವೇರಿ: ಬಸವರಾಜ ಬೊಮ್ಮಾಯಿ
9. ಧಾರವಾಡ: ಪ್ರಲ್ಹಾದ ಜೋಶಿ
10. ದಾವಣಗೆರೆ: ಗಾಯತ್ರಿ ಸಿದ್ದೇಶ್ವರ
11. ಶಿವಮೊಗ್ಗ: ಬಿ.ವೈ ರಾಘವೇಂದ್ರ
12. ಉಡುಪಿ–ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
13. ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್ ಚೌಟ
14. ತುಮಕೂರು: ವಿ. ಸೋಮಣ್ಣ
15. ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
16. ಚಾಮರಾಜನಗರ: ಎಸ್. ಬಾಲರಾಜ್
17. ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್ ಮಂಜುನಾಥ್
18. ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
19. ಬೆಂಗಳೂರು ಕೇಂದ್ರ: ಪಿ.ಸಿ ಮೋಹನ್
20. ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ
ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಶಾಕ್ ನೀಡಿದ್ದು, ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಎರಡು ಬಾರಿ ಮೈಸೂರು ಸಂಸದರಾಗಿದ್ದ ಪ್ರತಾಪ್ ಸಿಂಹ ಈ ಬಾರಿ ಟಿಕೆಟ್ ಕೈತಪ್ಪುವ ಭೀತಿಯಲ್ಲಿದ್ದರು. ಆದರೂ ತಾನು ಮಾಡಿದ ಅಭಿವೃದ್ಧಿ ಕೆಲಸಗಳು ಕೈಹಿಡಿಯುತ್ತವೆ, ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸ ಹೊಂದಿದ್ದರು. ಆದರೂ ಪಕ್ಷ ಅವರನ್ನು ಕಡೆಗಣಿಸಿ ರಾಜವಂಶದ ಯದುವೀರ್ ಅವರಿಗೆ ಟಿಕೆಟ್ ನೀಡಿದೆ.
ಅದೇ ರೀತಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ಗಾಗಿ ಸಿಟಿ ರವಿ ಇನ್ನಿಲ್ಲದ ಕಸರತ್ತನ್ನ ನಡೆಸಿದ್ರು. ಆದ್ರೆ ಈ ಕ್ಷೇತ್ರದ ಟಿಕೆಟ್ ಅಚ್ಚರಿ ಎಂಬಂತೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಿಕ್ಕಿದ್ದು, ಈ ಕ್ಷೇತ್ರ ಹಾಲಿ ಸಂಸದೆ ಶೋಬಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಅಂದುಕೊಂಡಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ದೇವೇಗೌಡ್ರ ಅಳಿಯ ಡಾ. ಸಿ.ಎನ್ ಮಂಜುನಾಥ್ ಅವರಿಗೆ ಸಿಕ್ಕಿದೆ. ಹೀಗಾಗಿ ಇವರು ಸಂಸದ ಡಿಕೆ ಸುರೇಶ್ ಅವರ ವಿರುದ್ಧ ಗೆದ್ದು ಬರ್ತಾರಾ ಅನ್ನೋ ಅನುಮಾನ ಮೂಡಿದೆ. ಅದೇ ರೀತಿ ಹಾವೇರಿ ಕ್ಷೇತ್ರದ ಟಿಕೆಟ್ ತಮ್ಮ ಮಗ ಕಾಂತೇಶ್ಗೆ ಕೊಡಿಸಬೇಕು ಅಂತೇಳಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇನ್ನಿಲ್ಲದ ಪ್ರಯತ್ನ ನಡೆಸಿದ್ರು. ಆದ್ರೆ ಹಾವೇರಿ ಕ್ಷೇತ್ರದ ಟಿಕೆಟ್ ಬಸವರಾಜ ಬೊಮ್ಮಾಯಿ ಅವರ ಪಾಲಾಗಿದೆ. ಇದ್ರಿಂದ ನಿರಾಸೆಗೊಂಡಿರೋ ಕೆ.ಎಸ್. ಈಶ್ವರಪ್ಪ ನಾಳೆ ತಮ್ಮ ಶಿವಮೊಗ್ಗದ ಆಪ್ತರ ಜೊತೆ ಸಭೆ ನಡೆಸಿ ಶಿವಮೊಗ್ಗದಲ್ಲಿ ಬಿಎಸ್ವೈ ಪುತ್ರ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಯತ್ನಿಸೋ ಸಾಧ್ಯತೆ ಇದೆ..
ಅದೇನೇ ಇದ್ರೂ ಕರ್ನಾಟಕ ಲೋಕಸಭೆಯ 20 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೆಲ ಘಟಾನುಘಟಿ ನಾಯಕರಿಗೆ ಬಿಗ್ ಶಾಕ್ ಕೊಟ್ಟಿರೋದಂತು ಸುಳ್ಳಲ್ಲ.